ದಕ್ಷಿಣ ಕನ್ನಡ

ಬಂದ್‌ಗೆ ಸಂಘಟನೆಗಳ ಬೆಂಬಲ

Published On :

ಮಂಗಳೂರು: ಎತ್ತಿನಹೊಳೆ ಶಿಲಾನ್ಯಾಸ ವಿರೋಧಿಸಿ ಮಾ. 3 ರಂದು ಕರೆ ನೀಡಿರುವ ದ.ಕ. ಜಿಲ್ಲಾ ಬಂದ್‌ಗೆ ಜಿಲ್ಲಾ ಗಿಲ್‌ನೆಟ್ ಮೀನುಗಾರ ಸಂಘ ಬೆಂಬಲ ಸೂಚಿಸಿದೆ ಎಂದು ಸಂಘದ ಅಧ್ಯಕ್ಷ ಆಲಿ ಹಸನ್ ಎಂದು ಹೇಳಿದ್ದಾರೆ.
ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದು, ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಪದಾಧಿಕಾರಿಗಳಾದ ಸತೀಶ್ ಕೋಟ್ಯಾನ್, ಇಸ್ಮಾಯಿಲ್, ಸುಭಾಸ್, ಸುನಿಲ್, ಪ್ರಾಣೇಶ್ ಇದ್ದರು ಎಂದು ಪ್ರಕಟಣೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಬಶೀರ್ ತಿಳಿಸಿದ್ದಾರೆ.
ದ.ಕ. ಕನ್ನಡ ಸಾಹಿತ್ಯ ಪರಿಷತ್ ಬೆಂಬಲ ಎತ್ತಿನಹೊಳೆ ಶಿಲಾನ್ಯಾಸ ವಿರೋಧಿಸಿ ಮಾ. 3 ರಂದು ಕೈಗೊಂಡಿರುವ ದ.ಕ. ಜಿಲ್ಲಾ ಬಂದ್‌ಗೆ ಕನ್ನಡ ಸಾಹಿತ್ಯ ಪರಿಷತ್ ಪೂರ್ಣ ಬೆಂಬಲಿಸುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.
ಈ ಹಿಂದೆ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಅನೇಕ ಗೋಷ್ಠಿಯಲ್ಲಿ ನೇತ್ರಾವತಿ ನದಿ ತಿರುವು-ಎತ್ತಿನಹೊಳೆ ಯೋಜನೆ ಪರಿಸರ ವಿರೋಧಿಯಾಗಿದೆ ಎಂಬುದಾಗಿ ಸರ್ಕಾರದ ಗಮನ ಸೆಳೆದಿತ್ತು. ಆದರೆ ಸರ್ಕಾರ, ಜನಪ್ರತಿನಿಗಳಾಗಲೀ ಪಶ್ಚಿಮಘಟ್ಟದಲ್ಲಿ ಕೈಗೊಳ್ಳುವ ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮವನ್ನು ಕಡೆಗಣಿಸಿ, ಇದೀಗ ಶಿಲಾನ್ಯಾಸಕ್ಕೆ ನೆರವೇರಿಸಲು ಮುಂದಾಗಿರುವುದು ಖೇದಕರ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂದ್ ಪರವಾಗಿರುವವರು
ಬಂಟ್ವಾಳ: ಜಿಲ್ಲಾದ್ಯಂತ ಕರಾಳ ದಿನವಾಗಿ ಸ್ವಯಂ ಘೋಷಿತ ಬಂದ್‌ಗೆ ನೀಡಿರುವ ನೇತ್ರಾವತಿ ಸಂರಕ್ಷಣಾ ಸಮಿತಿ ಕರೆಗೆ ಬಂಟ್ವಾಳದ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಅರಿವು ಪಚ್ಚೆ ಬಳಗ, ಆಟಕೂಟ ತುಳುನಾಡು ಪದ್ಮುಂಜ, ರಂಗ ಸಾಂಗತ್ಯ ಮಣಿನಾಲ್ಕೂರು ಸಂಸ್ಥೆಗಳು ಬೆಂಬಲಿಸಲು ನಿರ್ಧರಿಸಿದ್ದು ಸಾರ್ವಜನಿಕ ಓಡಾಟಗಳಿಗೆ, ಅಗತ್ಯ ಸಂಪರ್ಕ, ಸಂವಹನಗಳಿಗೆ ತೊಂದರೆಯಾಗದಂತೆ ಬಂಟ್ವಾಳದ ಸಂಘಟನೆಗಳು, ಪರಿಸರ ಪ್ರೇಮಿಗಳು, ಧಾರ್ಮಿಕ ಮುಖಂಡರು  ಬಂದ್‌ಗೆ ಬೆಂಬಲಿಸಬೇಕಾಗಿ ಪ್ರತಾಪ್ ಜೆ, ಸುಜಯಾ ಮಣಿನಾಲ್ಕೂರು, ಸತೀಶ್ ಕಕ್ಯಪದವು ಮೊದಲಾದವರು ಪ್ರಕಟನಾ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಬೆಂಬಲ
ಬೆಳ್ತಂಗಡಿ:  ಎತ್ತಿನ ಹೊಳೆ ಯೋಜನೆಗೆ ದ.ಕ. ಜಿಲ್ಲೆಯ ಜನತೆಯ ತೀವ್ರ ಆಕ್ಷೇಪವಿದ್ದರೂ ಅದನ್ನು ಸರ್ಕಾರ ಅನುಷ್ಠಾನಗೊಳಿಸಲು ಹೊರಟಿರುವುದು ಶೋಚನೀಯ. ಮಾ. 3 ರಂದು ನೇತ್ರಾವತಿ ರಕ್ಷಣಾ ಸಮಿತಿ ನೀಡಿರುವ ಬಂದ್ ಕರೆಗೆ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನದಿ ತಿರುವು ದ.ಕ. ಜಿಲ್ಲೆಗೆ ಸಂಬಂಧಪಟ್ಟ ವಿಚಾರವಾಗಿದ್ದು, ಪಕ್ಷಾತೀತವಾಗಿ ಯಾರು ಹೋರಾಟ ಮಾಡುತ್ತಾರೋ ಅವರಿಗೆ ಪಕ್ಷ ಬೆಂಬಲ ನೀಡಲಿದೆ. ನೇತ್ರಾವತಿ ರಕ್ಷಣಾ ಸಮಿತಿ ಪಕ್ಷಾತೀತವಾಗಿರುವ ನೆಲೆಯಲ್ಲಿ ಬೆಂಬಲ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ತಿರುವು ವಿಚಾರದಲ್ಲಿ ಇಲ್ಲಿನ ಜನರ ಭಾವನೆಗೆ ಸ್ಪಂದಿಸದಿದ್ದಲ್ಲಿ ಬಿಜೆಪಿ ಪ್ರತ್ಯೇಕವಾಗಿ ಹೋರಾಟದ ಕಣಕ್ಕಿಳಿಯಲಿದೆ ಎಂದು ನಾಯಕ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.