ಹಣಕ್ಕಾಗಿ ಬ್ಲಾಕ್ಮೇಲ್
ಈತ ಈ ಫೋಟೋಗಳನ್ನು ಈ ಕಾಲೇಜು ವಿದ್ಯಾಥಿರ್ನಿಗೆ ಅಮಲು ಪದಾರ್ಥ ತಿನ್ನಿಸಿ, ಆಕೆಯ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಸೆರೆ ಹಿಡಿದಿದ್ದಾನೆ ಮತ್ತು ಅವುಗಳನ್ನು ಆಕೆಯ ಹೆತ್ತವರಿಗೆ ಕಳುಹಿಸಿ ಅವರಿಂದ ರು. 3 ಲಕ್ಷ ವಸೂಲಿ ಮಾಡಿದ್ದಾನೆ, ಇನ್ನೂ ಹಣ ಕೊಡಬೇಕು ಎಂದು ಪೀಡಿಸಿದ್ದಾನೆ. ಕೊಡದಿದ್ದಾಗ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾನೆ. 'ಇದು ಉಡುಪಿ ಜಿಲ್ಲೆಯ ದೇರಳಕಟ್ಟೆ ಪ್ರಕರಣ. ಅವರಿಬ್ಬರಲ್ಲದೇ ಯಾರೋ ಮೂರನೇ ವ್ಯಕ್ತಿ ಅವುಗಳನ್ನು ಸೆರೆ ಹಿಡಿದಿದ್ದಾರೆ' ಎಂದೆಲ್ಲಾ ಹಿಂದೂ ಸಂಘಟನೆಗಳು ಆರೋಪಿಸಿದೆ. ಮಣಿಪಾಲ ಠಾಣೆಯಲ್ಲಿ ಮಣಿಪಾಲ ವಿ.ವಿ.ಯ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ರೇಪ್, ಮಣಿಪಾಲದ ಆಂಗ್ಲ ಮಾಧ್ಯಮ ಶಾಲೆಯ ಪುಟಾಣಿ ಮೇಲೆ ಲೈಂಗಿಕ ಕಿರುಕುಳದ ಆರೋಪಗಳು ಇನ್ನೂ ಹಸಿಯಾಗಿರುವಾಗಲೇ, ಈ ಪ್ರಕರಣ ನಡೆದಿದ್ದು, ಒಟ್ಟಿನಲ್ಲಿ ಮಣಿಪಾಲ ಠಾಣೆ ಸದಾ ಸುದ್ದಿಯಲ್ಲಿರುವಂತಾಗಿದೆ.
ಅಮಲಿನಲ್ಲಿ ಅಲ್ಲ, ಖುಷಿಗಾಗಿ!
ಆದರೆ ದೂರು ನೀಡಿರುವ ಕಾಲೇಜು ವಿದ್ಯಾರ್ಥಿನಿ, ತಾನು ಅಮಲಿನಲ್ಲಿದ್ದಾಗ ಈ ಫೋಟೋ ತೆಗೆದದ್ದು ಅಲ್ಲ, ತಾವಿಬ್ಬರು ಜೊತೆಗಿದ್ದಾಗ ತೆಗೆದದ್ದು. ಪರಸ್ಪರ ಆತ ತನ್ನ, ತಾನು ಆತನ ಫೋಟೊಗಳನ್ನು ತೆಗೆದಿದ್ದೆವು. ಬೇರೆಯವರು ತೆಗೆದದ್ದು ಅಲ್ಲ, ಆದರೆ ಆತ ಅವುಗಳನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುತ್ತಾನೆ ಎಂದು ಗೊತ್ತಿರಲಿಲ್ಲ ಎಂದು ಅಲವತ್ತುಕೊಂಡಿದ್ದಾಳೆ.
ಆರೋಪಿಗೆ ನ್ಯಾಯಾಂಗ ಬಂಧನ
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಸೈಬರ್ ಕ್ರೈಂನಂತೆ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

