ಸುದ್ದಿ ಸಂಕ್ಷೇಪ
ಕದ್ರಿ: ರಜತ ಕವಚ ಸಮರ್ಪಣೆ
ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಗೋರಕ್ಷನಾಥ ವಿಗ್ರಹಕ್ಕೆ ಜ. 15 ಮತ್ತು 16 ರಂದು ರಜತ ಕವಚ ಸಮರ್ಪಣೆ ಮಾಡಲಾಗುವುದು. ಸ್ಯಾಕ್ಸೋಫೋನ್ ಕಲಾವಿದ ಡಾ. ಕದ್ರಿ ಗೋಪಾಲನಾಥ್ ಕುಟುಂಬದವರು ಸೇವಾರೂಪದಲ್ಲಿ ಈ ಕಾಣಿಕೆ ನೀಡುತ್ತಿದ್ದಾರೆ. ಜ.15 ರಂದು ಮಧ್ಯಾಹ್ನ 3 ಗಂಟೆಗೆ ಕದ್ರಿ ಮಠದಿಂದ ಯೋಗೀಶ್ವರ ಮಠದ ಶ್ರೀ ಸಂದ್ಯಾನಾಥಜೀ ಮಹಾರಾಜ್ ಸ್ವಾಮೀಜಿ ನೇತೃತ್ವದಲ್ಲಿ ಮೆರವಣಿಗೆ ಹೊರಡಲಿದೆ ಎಂದು ಕದ್ರಿ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಟಿ.ವಿ. ರಮಣ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜ.16 ರಂದು ಬೆಳಗ್ಗೆ 10 ಗಂಟೆಗೆ ರಜತ ಕವಚ ಸಮರ್ಪಿಸಲಾಗುವುದು. 7.5 ಅಡಿ ಎತ್ತರವಿದೆ. ಚೆನ್ನೈ ಜಿ.ಆರ್.ಟಿ. ತಂಗಮಾಲಿಗೈ ಸಂಸ್ಥೆ ಇದನ್ನು ತಯಾರಿಸಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜೋಗಿ ಸಮಾಜದ ಅಧ್ಯಕ್ಷ ಕಿರಣ್ ಜೋಗಿ, ಸುಧಾರಕ ಸಂಘದ ಪದ್ಮನಾಭ ಜೋಗಿ, ಸದಸ್ಯ ಎಚ್.ಕೆ. ಪುರುಷೋತ್ತಮ್ ಇದ್ದರು.
ಇಂದಿನಿಂದ ಲೋಹ ಸಂಗ್ರಹ ಅಭಿಯಾನ
ಮಂಗಳೂರು: ಗುಜರಾತ್ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ರ 182 ಮೀಟರ್ ಉದ್ದದ ಏಕತಾ ಪ್ರತಿಮೆ ನಿರ್ಮಾಣಕ್ಕೆ ಲೋಹ ಸಂಗ್ರಹಣಾ ಅಭಿಯಾನ ಜ.15ರಿಂದ ಜಿಲ್ಲೆಯಾದ್ಯಂತ ನಡೆಯಲಿದೆ. ಪ್ರತಿ ಗ್ರಾಮ ಪಂಚಾಯ್ತಿನಲ್ಲಿ ಲೋಹ ಸಂಗ್ರಹ ಕಾರ್ಯ ನಡೆಯಲಿದ್ದು, ರೈತರು, ಕಾರ್ಮಿಕರು ಬಳಸಿದ ಲೋಹದೊಂದಿಗೆ ಪವಿತ್ರ ಮಣ್ಣು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಫೋಟೋ ಹಾಗೂ ಸುರಾಜ್ಯಕ್ಕಾಗಿ ಸಹಿ ಸಂಗ್ರಹಣಾ ಅಭಿಯಾನ ನಡೆಸಲಾಗುವುದು. ಪ್ರತಿ ಶಾಲಾ ಕಾಲೇಜುಗಳಲ್ಲಿ ಪಟೇಲರ ಬಗ್ಗೆ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಲೋಹ ಸಂಗ್ರಹಣಾ ಸಮಿತಿ ಜಿಲ್ಲಾ ಸಂಚಾಲಕ ಡಾ. ಭರತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು 'ಪ್ರೈಮಸಿ ಇಂಡಸ್ಟ್ರಿ' ಉದ್ಘಾಟನೆ
ಮಂಗಳೂರು: ಕಳೆದ ವರ್ಷ ಅಗ್ನಿ ದುರಂತದಿಂದ ಬಹುತೇಕ ಸುಟ್ಟುಹೋಗಿದ್ದ ಬೈಕಂಪಾಡಿಯ ಪ್ರೈಮಸಿ ಪ್ರೈವೇಟ್ ಕ್ಯಾಂಡಲ್ ಫ್ಯಾಕ್ಟರಿ ನೂತನವಾಗಿ ಪುನರ್ ನಿರ್ಮಾಣಗೊಂಡಿದ್ದು, ಜ. 15 ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆ ಮುಖ್ಯಸ್ಥ ಗೌತಮ್ ಪೈ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಂಡಲ್ ತಯಾರಿ ಸಂಸ್ಥೆಯನ್ನು ಸಂಜೆ 5ಕ್ಕೆ ಸಂಸ್ಥೆಯನ್ನು ಇನ್ಫೋಸಿಸ್ ಕಾರ್ಯನಿರ್ವಾಹಕ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಉದ್ಘಾಟಿಸುವರು. ಇಂಡಿಯನ್ ಒವರ್ಸೀಸ್ ಬ್ಯಾಂಕ್ ಅಧ್ಯಕ್ಷ ಎಂ. ನರೇಂದ್ರ ಪಾಲ್ಗೊಳ್ಳುವರು ಎಂದರು.ಸಂಸ್ಥೆ ಅಧ್ಯಕ್ಷ ವಿ.ಕೆ. ತಾಳಿತ್ತಾಯ ಮಾತನಾಡಿ, ಕಳೆದ ಜನವರಿಯಲ್ಲಿ ಅಗ್ನಿದುರಂತ ಸಂಭವಿಸಿದ್ದರೂ, ಜೂನ್ನಲ್ಲಿ ಸ್ಥಗಿತಗೊಂಡಿದ್ದ ವ್ಯವಹಾರವನ್ನು ಆರಂಭಿಸಲಾಗಿತ್ತು. ಜತೆಗೆ ಹೊಸ ಕಟ್ಟಡ ನಿರ್ಮಾಣ, ಯಂತ್ರೋಪಕರಣ ಅಳವಡಿಕೆ ಕಾರ್ಯ ಪ್ರಾರಂಭಿಸಿತ್ತು ಎಂದರು.ಕಟ್ಟಡವು ರು. 22 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ದುರಂತದ ಸಂದರ್ಭ ಕಂಪನಿಯಲ್ಲಿ 1,140 ಮಂದಿ(160 ಕಚೇರಿ ಸಿಬ್ಬಂದಿ) ನೌಕರರಿದ್ದರು. ಬಳಿಕ 185 ಮಂದಿ ವಿವಿಧ ಹಂತಗಳಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಈಗ 840 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೋಕ್ ಲಹೋಟಿ ಇದ್ದರು.
ಇಂದು ಕೆಮ್ಮಾಯಿ ವಿಷ್ಣು ಯುವಕ ಮಂಡಲ ವಾರ್ಷಿಕೋತ್ಸವ
ಪುತ್ತೂರು: ಕೆಮ್ಮಾಯಿ ವಿಷ್ಣು ಯುವಕ ಮಂಡಲದ 17ನೇ ವಾರ್ಷಿಕೋತ್ಸವ, ಅಶ್ವತ್ಥ ಮಹೋತ್ಸವ ಹಾಗೂ ಶನೈಶ್ಚರ ವ್ರತ ಕಲ್ಪೋಕ್ತ ಪೂಜೆ ಬುಧವಾರ ನಡೆಯಲಿದೆ. ವಾರ್ಷಿಕೋತ್ಸವದಲ್ಲಿ ಗಣಪತಿ ಹೋಮ, ಶನೈಶ್ಚರ ಗ್ರಹ ವ್ರತ ಕಲ್ಪೋಕ್ತ ಪೂಜೆ, ಅಶ್ವತ್ಥ ಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ, ಕಿರಣ ಕುಮಾರ್ ಪಡುಪಣಂಬೂರು ಇವರಿಂದ ಧಾರ್ಮಿಕ ಪ್ರವಚನ, ಸಾರ್ವಜನಿಕ ಅನ್ನ ಸಂತರ್ಪಣೆ, ಸವಿತ ಮ್ಯೂಸಿಕಲ್ ಇವರಿಂದ ಭಕ್ತಿ ರಸಮಂಜರಿ, ಭಜನೆ ನಡೆಯಲಿದೆ. ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ವೈದ್ಯರಾದ ಡಾ.ಎಂ.ಕೆ. ಪ್ರಸಾದ್, ಡಾ. ಅಶೋಕ್ ಪಡಿವಾಳ್ ಮೂಡಾಯೂರುಗುತ್ತು, ಪುರಸಭೆ ಮುಖ್ಯಾಧಿಕಾರಿ ಸುಧಾಕರ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ, ಪುರಸಭಾ ಸದಸ್ಯ ಜಗದೀಶ್ ನೆಲ್ಲಿಕಟ್ಟೆ ಭಾಗವಹಿಸಲಿದ್ದಾರೆ. ನರಿಮೊಗರು ಸರಸ್ವತಿ ವಿದ್ಯಾಮಮದಿರದ ಮುಖ್ಯಸ್ಥ ಅವಿನಾಶ ಕೊಡಂಕಿರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಕದ್ರಿಯಲ್ಲಿ ಸಾಂಸ್ಕೃತಿಕ ಉತ್ಸವ
ಮಂಗಳೂರು: ಕದ್ರಿ ಶ್ರೀಮಂಜುನಾಥೇಶ್ವರ ದೇವಸ್ಥಾನ ಆಶ್ರಯದಲ್ಲಿ ಕದ್ರಿ ಜಾತ್ರೆ ಪ್ರಯುಕ್ತ ಮಲ್ಲಿಕಾ ಕಲಾವೃಂದದಿಂದ 64ನೇ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವ ಜ.13ರಿಂದ 24ರ ವರೆಗೆ ದೇವಸ್ಥಾನದ ವೇದಿಕೆಯಲ್ಲಿ ನಡೆಯುತ್ತಿದೆ.
ಒಟ್ಟು 110 ಕಲಾ ಕಾರ್ಯಕ್ರಮ ನಡೆಯಲಿದ್ದು, ಯುವ ತಂಡಗಳಿಗೆ ಒತ್ತು ನೀಡಲಾಗಿದೆ. ಶಾಸ್ತ್ರೀಯ ಸಂಗೀತದಲ್ಲಿ 15 ವರ್ಷದೊಳಗಿನ ಬಾಲಕಲಾವಿದರ ಗಾಯನ ಏರ್ಪಡಲಿದೆ. ಕಲಾರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಗಣ್ಯರಿಗೆ ಸನ್ಮಾನ ಇರಲಿದೆ ಎಂದು ಕಾರ್ಯಾಧ್ಯಕ್ಷ ಸುಧಾಕರ ರಾವ್ ಪೇಜಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

