ದಕ್ಷಿಣ ಕನ್ನಡ

7 ನಾಮಪತ್ರ ತಿರಸ್ಕೃತ

Published On :

ಮೂಲ್ಕಿ: ಜ.27ರಂದು ನಡೆಯಲಿರುವ ಮೂಲ್ಕಿ ಪಟ್ಟಣ ಪಂಚಾಯಿತಿಯ ಎಲ್ಲ 17 ವಾರ್ಡ್‌ಗಳ ಚುನಾವಣೆಯ ನಾಮಪತ್ರ ಪರಿಶೀಲನೆ ಮುಕ್ತಾಯಗೊಂಡಿದ್ದು, 60 ನಾಮಪತ್ರಗಳಲ್ಲಿ ಬಿಜೆಪಿಯಿಂದ ಎರಡು, ಜೆಡಿಎಸ್‌ನಿಂದ ಮೂರು ಹಾಗೂ ಎಸ್‌ಡಿಪಿಐನಿಂದ ಎರಡು ಸೇರಿದಂತೆ ಒಟ್ಟು 7 ನಾಮಪತ್ರ ತಿರಸ್ಕೃತಗೊಂಡಿವೆ. ಅಂತಿಮವಾಗಿ ಕಾಂಗ್ರೆಸ್, ಬಿಜೆಪಿಯಿಂದ ತಲಾ 17, ಜೆಡಿಎಸ್‌ನಿಂದ 9, ಎಸ್‌ಡಿಪಿಐನಿಂದ 6 ಹಾಗೂ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು 53 ಮಂದಿ ಕಣದಲ್ಲಿ ಉಳಿದಿದ್ದಾರೆ. ಜ.18 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ.
ವಾರ್ಡ್ 9ರಲ್ಲಿ ಬಿಜೆಪಿಯಿಂದ 2 ನಾಮಪತ್ರ ಸಲ್ಲಿಸಿದ್ದು, ಪ್ರಕಾಶ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ವಾರ್ಡ್ 10ರಲ್ಲಿ ಜೆಡಿಎಸ್‌ನಿಂದ 2 ನಾಮಪತ್ರ ಸಲ್ಲಿಸಲಾಗಿದ್ದು, ಒಂದು ನಾಮಪತ್ರ ಶುಭಮಂಗಳ ಅವರದ್ದು ತಿರಸ್ಕೃತಗೊಂಡಿದೆ. ವಾರ್ಡ್ 11ರಲ್ಲಿ ಜೆಡಿಎಸ್‌ನಿಂದ 2 ನಾಮಪತ್ರ ಸಲ್ಲಿಸಲಾಗಿದ್ದು, ರವಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ವಾರ್ಡ್ 12ರಲ್ಲಿ ಎಸ್‌ಡಿಪಿಐ 2 ನಾಮಪತ್ರ ಸಲ್ಲಿಸಿದ್ದು, ಒಂದು ತಿರಸ್ಕೃತಗೊಂಡಿದೆ. 14ರಲ್ಲಿ ಬಿಜೆಪಿಯ ಸುನೀತಾ ಎರಡು ನಾಮಪತ್ರ ಸಲ್ಲಿಸಿದ್ದು ಒಂದು ತಿರಸ್ಕೃತ. 15ರಲ್ಲಿ ಜೆಡಿಎಸ್ 2 ನಾಮಪತ್ರ ಸಲ್ಲಿಸಿದ್ದು ಒಂದು ನಾಮಪತ್ರ ತಿರಸ್ಕೃತ. ವಾರ್ಡ್ 16ರಲ್ಲಿ ಎಸ್‌ಡಿಪಿಐ ಎರಡು ನಾಮಪತ್ರ ಸಲ್ಲಿಸಿದ್ದು ಒಂದು ನಾಮಪತ್ರ ತಿರಸ್ಕೃತಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.