ದಕ್ಷಿಣ ಕನ್ನಡ

ಉಡುಪಿ ನಗರವಿಡಿ ನಾದಮಯ..

Published On :

ಚೈತ್ರಾ ಹೆರ್ಗ
ಉಡುಪಿ: ಗುರುವಾರ ಸಂಜೆಯಿಂದ ಶುಕ್ರವಾರ ಮುಂಜಾವರೆಗೆ ಕೃಷ್ಣನ ಉಡುಪಿ ನಗರಿ ನಾದಮಯ- ನೃತ್ಯಮಯ- ವರ್ಣಮಯ ಆಗಿಬಿಟ್ಟಿತ್ತು...
ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧವಾದ ಉಡುಪಿಯಲ್ಲಿ ಕಳೆದ 8 ಶತಮಾನಗಳಿಂದ ನಡೆದುಕೊಂಡು ಬಂದಿರುವ ಶ್ರೀ ಕೃಷ್ಣ ಮಠದ ಪರ್ಯಾಯ ಉತ್ಸವವು ಈ ಬಾರಿಯು ಬಹಳ ವೈಭವದಿಂದ ಜರಗಿತು. ಈ ಉತ್ಸವಕ್ಕೆ ಊರ - ಪರವೂರಿನ ಲಕ್ಷಾಂತರ ಭಕ್ತಾದಿಗಳು ಮಾತ್ರವಲ್ಲದೆ ದೇಶ- ವಿದೇಶಗಳ ಪ್ರವಾಸಿಗರು ಬಂದಿದ್ದು, ಇದರ ಕೇವಲ ಕೃಷ್ಣ ಮಠದ ಪರ್ಯಾಯೋತ್ಸವ ಅಲ್ಲ, ಜನರ ಉತ್ಸವ ಎಂಬುದನ್ನು ತೋರಿಸಿಕೊಟ್ಟರು.
ಕೃಷ್ಣ ಮಠದ ರಥಬೀದಿ ಮಾತ್ರವಲ್ಲದೇ ನಗರದ ಕಿನ್ನಿಮೂಲ್ಕಿ ಜಂಕ್ಷನ್, ಸರ್ವಿಸ್ ಬಸ್ ನಿಲ್ದಾಣ, ಕಿದಿಯೂರು ಹೊಟೇಲ್ ಮುಂಭಾಗ, ಚಿತ್ತರಂಜನ್ ಸರ್ಕಲ್, ಎಸ್.ವಿ.ಟಿ. ರಸ್ತೆ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ನಡೆದ ಸಂಗೀತ ರಸಮಂಜರಿ - ನೃತ್ಯ ಕಾರ್ಯಕ್ರಮಗಳು ರಾತ್ರಿ ಇಡಿ ಜಾಗರಣೆ ನಡೆಸುವ ಜನರಿಗೆ ಭರ್ಜರಿ ಮನೋರಂಜನೆ ನೀಡಿತು.
ಮನೋರಂಜನೆ ಮಾತ್ರವಲ್ಲ, ಕೃಷ್ಣನ ಕುರಿತಾದ ಭಕ್ತಿಗೀತೆ, ಸಂಗೀತ ರಸಮಂಜರಿ, ಶಾಸ್ತ್ರೀಯ ಸಂಗೀತ, ವೀಣಾ ವಾದನ, ಭರತನಾಟ್ಯ ಸೇರಿದಂತೆ ಇನ್ನಿತರ ವಿವಿಧ ರೀತಿಯ ಕಲಾಪ್ರಕಾರಗಳನ್ನು ಕಲಾತಂಡಗಳು ಪ್ರದರ್ಶಿಸಿ, ಜನರನ್ನು ಸಾಂಸ್ಕೃತಿಕ- ಧಾರ್ಮಿಕ ಲೋಕಕ್ಕೆ ಕರೆದುಕೊಂಡು ಹೋದವು.  
ವಿದೇಶಿಯರ ಕೃಷ್ಣನಾಮ ಸ್ತುತಿ: ಈ ಉತ್ಸವದಲ್ಲಿ ದಂಗುಬಡಿಯುವಂತೆ ಮಾಡಿದ್ದು ಮಾತ್ರ ವಿದೇಶಿಯರು ಹಾಡಿದ ಹರೇ ಕೃಷ್ಣ, ಹರೇ ರಾಮ ಎಂಬ ಕೃಷ್ಣನ ನಾಮ ಸ್ತುತಿ.
  ಯಾಕೆಂದರೆ ರಥಬೀದಿಯ ಸುತ್ತಮುತ್ತಲೂ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದೇಶಿಯರು ಕೃಷ್ಣನ ಸುತ್ತಿಯನ್ನು ಹಾಡುತ್ತಿದ್ದ ವೇದಿಕೆಯ ಮುಂಭಾಗದಲ್ಲಿ ಕಿಕ್ಕಿರಿದು ಜನರು ಹಾಡುಗಳನ್ನು ಆಲಿಸಿ ಸಂತೋಷವನ್ನು ಪಟ್ಟರು. ಮುಖ್ಯ ಕಾರ್ಯಕ್ರಮ ನಡೆಯುವ ರಾಜಾಂಗಣದಲ್ಲಿ ಕಟೀಲು ಶ್ರೀದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ, ವಿದ್ವಾನ್ ಪವನ್ ಕೃಷ್ಣ ಕುಮಾರ್ ಮತ್ತು ಬಳಗದವರಿಂದ ವೇಣುವಾದನ, ಕಲೈಮಾಮಣಿ ಕದ್ರಿ ಗೋಪಾಲನಾಥ್ ಅವರಿಂದ ದೈವಿ ಸ್ಯಾಕ್ಸೋಫೋನ್ ಕಚೇರಿಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.