ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Published On :

23ರಂದು ಸ್ಥಾಪಕರ ದಿನಾಚರಣೆ
ಮೂಲ್ಕಿ: ಇಲ್ಲಿನ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕರ ದಿನಾಚರಣೆಯು ಜ.23ರಂದು ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯಧೀಶ್ ಅಮೀನ್ ಕೊಕ್ಕರ್‌ಕಲ್ ವಹಿಸಲಿದ್ದಾರೆ. ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎರಿಕ್ ಸಿ. ಲೋಬೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
'ರಾಜಮುದ್ರೆ ಒದಗಿ ಬರಲಿದೆ': ಮಾಜಿ ಮುಖ್ಯಮಂತ್ರಿ ಡೀವಿಗೆ ದೈವಗಳ ಅಭಯ
ಸುಳ್ಯ: ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದ ಗೌಡರ ತರವಾಡು ಮನೆ ದೇವರಗುಂಡದಲ್ಲಿ ಭಾನುವಾರ ದೈವಗಳ ನೇಮೋತ್ಸವದಲ್ಲಿ 'ರಾಜಮುದ್ರೆ ಒದಗಿ ಬರಲಿದೆ' ಎಂದು ಅವರಿಗೆ ದೈವ ಅಭಯ ನೀಡಿದೆ. ವರ್ಷಂಪ್ರತಿ ನಡೆಯುವ ದೈವಗಳ ನೇಮೋತ್ಸವದಲ್ಲಿ ರಕ್ತೇಶ್ವರಿ ದೈವ, ವಿಷ್ಣುಮೂರ್ತಿ ದೈವ ಮತ್ತು ಪೊಟ್ಟ ಭೂತಗಳ ನೇಮ ನಡೆಯಿತು.  ಡಿ.ವಿ.ಸದಾನಂದ ಗೌಡರಿಗೆ ಅಭಯ ನೀಡಿದ ವಿಷ್ಣು ಮೂರ್ತಿ ದೈವ, ಇನ್ನು ಮುಂದೆ ಕೂಡಾ ನಿಮಗೆ ರಾಜಮುದ್ರೆ ಬರಲಿದೆ ಎಂದು ಹೇಳಿದೆ. ತರವಾಡು ಮನೆಯಲ್ಲಿ ನಡೆದ ನೇಮೋತ್ಸವದಲ್ಲಿ ಕುಟುಂಬಸ್ಥರು, ಊರವರು ಬಂಧು ಮಿತ್ರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.