ದಕ್ಷಿಣ ಕನ್ನಡ

ಅ.ಭಾ. ಹಿಂದೂ ಅಧಿವೇಶನ 20ರಿಂದ

Published On :

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿಯ ಅಖಿಲ ಭಾರತೀಯ ಹಿಂದೂ ಅಧಿವೇಶನ ಜೂ.20ರಿಂದ 26ರ ವರೆಗೆ ಗೋವಾದ ಪೊಂಡಾ ಶ್ರೀರಾಮನಾಥ ದೇವಸ್ಥಾನದ ವಿದ್ಯಾಧಿರಾಜ ಸಭಾಗೃಹದಲ್ಲಿ ಅಧಿವೇಶನ ನಡೆಯಲಿದೆ.  ದೇಶದ 20 ರಾಜ್ಯಗಳ ಸಹಿತ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಅಮೇರಿಕಾಗಳ 125ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ 360 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳುವರು. ಇದರಲ್ಲಿ 125 ಹಿಂದುತ್ವವಾದಿ ಸಂಘಟನೆಗಳ 285 ಪ್ರತಿನಿಧಿಗಳು, 60 ಮಂದಿ ನ್ಯಾಯವಾದಿಗಳು, 15 ಮಂದಿ ವಿಚಾರವಾದಿಗಳು ಭಾಗವಹಿಸಲಿದ್ದಾರೆ. ಹಿಂದೂ ಧರ್ಮ ಹಾಗೂ ಧರ್ಮ ರಕ್ಷಣೆಗೆ ವಿವಿಧ ಗೋಷ್ಠಿ ನಡೆಯಲಿದೆ. ಸಮಾವೇಶದ ಆನ್‌ಲೈನ್ ಪ್ರಸಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12.30 ಹಾಗೂ ಸಂಜೆ 5ರಿಂದ ರಾತ್ರಿ 8.30ರ ವರೆಗೆ ಲಭ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ವೆಬ್‌ಸೈಟ್ ವಿಳಾಸ-ಢಿಢಿಢಿ.ಏ್ಝಟಿಜ್ಡಒಛ್ಜ್ಠ್ಡಡ್ಝಿ.್ಟ್ಠ್ಜ/ಡ್ಡಟಟ್ಝಡಿ/ಜಟ್ಜಿಟ್ಝಝ.ಝಠ.
ಸಂಸ್ಕೃತ ಪಿ.ಜಿ. ಅಧ್ಯಯನ ಅರ್ಜಿ ಆಹ್ವಾನ
ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತಕ್ಕೊಳಪಟ್ಟ ಮಂಗಳೂರು ವಿ.ವಿ.ಯಿಂದ ಸಂಯೋಜಿಸಲ್ಪಟ್ಟಿರುವ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸಂಸ್ಕೃತ ಎಂ.ಎ. ಪದವಿಗೆ ಅರ್ಜಿ ಆಹ್ವಾನಿಸಲಾಗಿದೆ.  ಸಂಸ್ಕೃತ ಭಾಷೆಯೊಂದಿಗೆ ಯಾವುದೇ ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.  ಇದರೊಂದಿಗೆ ಅಲ್ಪಾವಧಿಯ ಜ್ಯೋತಿಷ್ಯ, ವಾಸ್ತುಶಾಸ್ತ್ರ, ಕಂಪ್ಯೂಟರ್ ಡಿಟಿಪಿ ಮಾಹಿತಿಗಳನ್ನು ಒದಗಿಸಲಾಗುವುದು. ಇತರ ಬೇರೆ ಅಧ್ಯಯನ ವೃತ್ತಿಪರರಿಗೆ ಅಲ್ಪಾವಧಿಯ ಅಂಚೆ ಮೂಲಕ ಭಾರತೀಯ ಕಾವ್ಯಶಾಸ್ತ್ರ ಪ್ರವೇಶ, ಸಂಸ್ಕೃತ ಸಂಸ್ಕೃತಿ ದರ್ಶನ, ವಾಸ್ತುಶಾಸ್ತ್ರ ದೇವಾಲಯ ದರ್ಶನ ಮುಂತಾದ ಕೋರ್ಸ್‌ಗಳನ್ನು  ನಡೆಸಲಾಗುವುದು. ಆಸ್ತಕರಿಗೆ ದೇವಾಲಯದ ವತಿಯಿಂದ ಉಚಿತ ಊಟ, ವಸತಿ ವ್ಯವಸ್ಥೆ ಇದೆ.  ಅರ್ಜಿ ಸಲ್ಲಿಸುವವರು: ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ, ಪ್ರಾಂಶುಪಾಲರು, ಕಟೀಲು (7760242064, 9731142157)ನ್ನು ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.