ಬೆಳ್ತಂಗಡಿ: ಬಂದ್ ಯಶಸ್ವಿ
ಬೆಳ್ತಂಗಡಿ: ದ.ಕ. ಜಿಲ್ಲಾ ಬಂದ್ ಕರೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ. ಕೆಲವರು ವ್ಯಾಪಾರ ಆರಂಭಿಸಿದರೂ ಯಾವುದೇ ಅಂಗಡಿಗಳು ತೆರೆಯದಿರುವುದನ್ನು ಕಂಡು ಬಾಗಿಲು ಮುಚ್ಚಿದರು. ಬಹುತೇಕ ರಿಕ್ಷಾದವರು ಬಂದ್ಗೆ ಬೆಂಬಲ ಸೂಚಿಸಿದ್ದರು. ಶಾಲೆ ಕಾಲೇಜುಗಳಿಗೆ ಅಧಿಕೃತ ರಜೆ ಘೋಷಣೆ ಮಾಡಿರಲಿಲ್ಲ. ಆದರೆ ವಿದ್ಯಾರ್ಥಿಗಳ ಕೊರತೆ ಕಂಡುಬಂದಿತ್ತು. ನಗರ ಪ್ರದೇಶಗಳಲ್ಲಿ ಜನರ ಓಡಾಟ ಇರಲಿಲ್ಲ. ಮದುವೆ ಮೊದಲಾದ ಕಾರ್ಯಕ್ರಮಗಳಲ್ಲೂ ಜನರ ಹಾಜರಾತಿ ಕಡಿಮೆ ಇತ್ತು.
ಸಂತೆಗೆ ಜನರೇ ಇಲ್ಲ: ಸೋಮವಾರ ಸಂತೆ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಘಟ್ಟ ಪ್ರದೇಶದಿಂದ ತರಕಾರಿ ತರುವವರು ಆಗಮಿಸಲೇ ಇಲ್ಲ. ಊರವರು ಒಂದಷ್ಟು ಮಂದಿ ಮಾರುಕಟ್ಟೆಗೆ ವಸ್ತುಗಳನ್ನು ತಂದಿದ್ದರಾದರೂ ಕೊಳ್ಳಲು ಜನರೇ ಇರಲಿಲ್ಲ. ಬ್ಯಾಂಕ್ಗಳು ತೆರೆದಿದ್ದರೂ ಗ್ರಾಹಕರು ಆಗಮಿಸಲಿಲ್ಲ. ಪುಂಜಾಲಕಟ್ಟೆ, ಮಡಂತ್ಯಾರು, ಬಳ್ಳಮಂಜ, ಗುರುವಾಯನಕೆರೆ, ಉಜಿರೆ, ಕಕ್ಕಿಂಜೆ, ಮುಂಡಾಜೆ, ಧರ್ಮಸ್ಥಳ, ನಿಡ್ಲೆ, ಅಳದಂಗಡಿ, ವೇಣೂರು, ನಾರಾವಿ, ಗೇರುಕಟ್ಟೆ ಮೊದಲಾದೆಡೆಯೂ ಬಂದ್ ಆಚರಿಸಲಾಯಿತು. ಸಾಕಷ್ಟು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಧರ್ಮಸ್ಥಳ ಬಂದ್: ಧರ್ಮಸ್ಥಳದಲ್ಲಿ ಸೋಮವಾರದ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾತ್ರಿಕರು ಆಗಮಿಸಿದ್ದರೂ ವ್ಯಾಪಾರಿಗಳು ಅಂಗಡಿ ಬಾಗಿಲು ತೆರೆಯಲಿಲ್ಲ. ಯಾತ್ರಿಕರಿಗೆ ತೊಂದರೆಯಾಗದಂತೆ ಊಟ, ವಸತಿ ವ್ಯವಸ್ಥೆ ಇತ್ತು. ಆದರೆ ದೂರ ಪ್ರದೇಶಕ್ಕೆ ತೆರಳಲು ಬಸ್ಸುಗಳ ಓಡಾಟ ಇರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

