ದಕ್ಷಿಣ ಕನ್ನಡ

ಇಂದು ಚಿತ್ರ ಪ್ರದರ್ಶನ

Published On :

ಮಂಗಳೂರು: ವಿ ಎಂಟರ್‌ಟೈನರ್ ಲಾಂಛನದಲ್ಲಿ ಮೂಡಿಬಂದಿರುವ 'ಪೊರ್ಲು ಒಂಚೂರು ಮರ್ಲ್‌' ತುಳು ಆಲ್ಬಂ ಹಾಗೂ ಟೆಲಿಚಿತ್ರ ಪ್ರದರ್ಶನ 15ರಂದು ನಗರದ ಪುರಭವನದಲ್ಲಿ ನಡೆಯಲಿದೆ.  ಸಂಜೆ 6ಕ್ಕೆ ಕನ್ನಡ ಚಿತ್ರ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ಯಜ್ಞಾ ಶೆಟ್ಟಿ ಬಿಡುಗಡೆ ಸಮಾರಂಭಕ್ಕೆ ಆಗಮಿಸುವರು. ಸುಮಾರು ರು. 7 ಲಕ್ಷ ವೆಚ್ಚದಲ್ಲಿ ಈ ಆಲ್ಬಂ ನಿರ್ಮಿಸಲಾಗಿದ್ದು, ಟೆಲಿಚಿತ್ರಕ್ಕೆ ಜೋಯೆಲ್, ಡ್ಯಾರೆಲ್ ಹಾಗೂ ಶರತ್ ಉಚ್ಚಿಲ್ ಸಂಗೀತ ನೀಡಿದ್ದಾರೆ. ಹಾಡುಗಳನ್ನು ಅಮೆರಿಕಾದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಮಿಕ್ಸ್ ಹಾಗೂ ಮಾಸ್ಟರಿಂಗ್ ಮಾಡಲಾಗಿದೆ. ನಾಗಾರ್ಜುನ ಮಂಗಲ್ಪಾಡಿ ಸಂಕಲನ, ಅಶೋಕ್ ಬೇಕೂರ್, ಲತೀಶ್ ದೇವಾಡಿಗ ಹಾಗೂ ಮಿಥುನ್ ಕ್ಯಾಮರಾ, ರಾಜೇಶ್ ಬಂದ್ಯೋಡ್ ಸಾಹಸ, ಪ್ರಶಾಂತ್ ಸುಳ್ಯ ಹಾಗೂ ಮಧು ಕುಂಬ್ಳೆ ಗ್ರಾಫಿಕ್ಸ್. ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಹಾಡಿದ್ದು, ಅರವಿಂದ್ ಬೋಳಾರ್, ಸತೀಶ್ ಬೆಂದಲೆ, ಭೋಜರಾಜ ವಾಮಂಜೂರು, ತಿಮ್ಮಪ್ಪ ಕುಲಾಲ್, ದಿನೇಶ್ ಅತ್ತಾವರ ಅಭಿನಯಿಸಿದ್ದಾರೆ. ಸಾಹಿತ್ಯ, ಗಾಯನ, ಕಥೆ, ಚಿತ್ರಕಥೆ, ನಿರ್ದೇಶನ ರೂಪೇಶ್.



ಇಂದು ಏಕಾಹ ಭಜನೆ
ಬಂಟ್ವಾಳ; ಕೊಯಿಲ ಗ್ರಾಮದ ಗೋವಿಂದ ಬೆಟ್ಟ ಶ್ರೀ ಶಕ್ತಿತ್ರಯ ಸ್ವರೂಪಿಣಿ ಮಹಾದೇವಿ ದೇವಸ್ಥಾನದಲ್ಲಿ ಮಾ.15ರಂದು ವಾರ್ಷಿಕ ಏಕಾಹ ಭಜನಾ ಮಂಗಲೋತ್ಸವ ನಡೆಯಲಿದೆ. ಅಂದು ಬೆಳಗ್ಗೆ ಗಣಹೋಮ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಮಹಾದೇವಿ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಹೊಸನಗರ ಶ್ರೀರಾಮಚಂದ್ರ ಯಕ್ಷಗಾನ ಮಂಡಳಿಯಿಂದ ಗಜೇಂದ್ರ ಮೋಕ್ಷ, ಶ್ರೀನಿವಾಸ ಕಲ್ಯಾಣ, ಇಂದ್ರಜಿತು ಕಾಳಗ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಸ್ಪೆಕ್ಟ್ರಂ ಸಮ್ಮೇಳನ
ಮಂಗಳೂರು: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಮಾ. 15 ರಂದು ಹೃದ್ರೋಗ ಸಮ್ಮೇಳನ ಸ್ಪೆಕ್ಟ್ರಂ-2014 ನಡೆಯಲಿದೆ. ಸಮ್ಮೇಳನದಲ್ಲಿ ಹೃದ್ರೋಗ ತಜ್ಞರು, ಫಿಸಿಷಿಯನ್, ರೇಡಿಯೋಲಾಜಿಸ್ಟ್, ಸರ್ಜನ್ಸ್ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಸುಮಾರು 200 ತಜ್ಞ ವೈದ್ಯರು ಪಾಲ್ಗೊಳ್ಳುವರು. ಹೃದ್ರೋಗದ ವಿವಿಧ ವಿಭಾಗಗಳ ತೊಂದರೆಗಳ ಕುರಿತು ಉಪನ್ಯಾಸ, ತಿಳುವಳಿಕೆ, ಮಾಹಿತಿ, ಚರ್ಚೆ ನಡೆಯಲಿದೆ ಎಂದು ಸಮ್ಮೇಳನ ಸಂಯೋಜಕ ಡಾ.ಬಿ.ವಿ. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.