ಮೆಗಾ ಫೈಟ್ಗೆ ಲಾಠಿಪ್ರಹಾರ
ಮಂಗಳೂರು: ನೆಹರು ಮೈದಾನದಲ್ಲಿ ಸುವರ್ಣ ಸುದ್ದಿವಾಹಿನಿ ಮೆಗಾ ಫೈಟ್ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಹಿಂದು ಸಂಘಟನೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ವೇದಿಕೆಯಲ್ಲಿ ಉಸ್ತುವಾರಿ ಸಚಿವ ರಮಾನಾಥ ರೈ, ಕ್ಯಾ. ಗಣೇಶ್ ಕಾರ್ಣಿಕ್, ಯಾದವ ಶೆಟ್ಟಿ, ಆಪ್ ಅಭ್ಯರ್ಥಿ ವಾಸುದೇವ ರಾವ್ಗೆ ಪ್ರಶ್ನೆ ಕೇಳಲಾಗುತ್ತಿತ್ತು. ಎಸ್ಡಿಪಿಐ ಪಕ್ಷದ ಪ್ರತಿನಿಧಿಯು ಸಚಿವ ರಮಾನಾಥ ರೈ ಅವರಿಗೆ ಕೇಳಿದ ಪ್ರಶ್ನೆಯೇ ಗಲಾಟೆಗೆ ಕಾರಣವಾಯಿತು. 'ಕಲ್ಲಡ್ಕ ಪ್ರಭಾಕರ ಭಟ್ಟರು ಕೋಮು ಪ್ರಚೋದಕ ಭಾಷಣ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಂಧಿಸುವುದಾಗಿ ಭರವಸೆ ಕೊಟ್ಟಿರಿ. ಇನ್ನೂ ಬಂಧಿಸಿಲ್ಲ ಏಕೆ ನಿಮಗೆ ಸಾಮರ್ಥ್ಯ ಇಲ್ಲವೇ' ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಎಸ್ಡಿಪಿಐ ಕಾರ್ಯಕರ್ತನನ್ನು ಕುಳ್ಳಿರಿಸಲು ಬಜರಂಗದಳ ಕಾರ್ಯಕರ್ತರು ಮುಂದಾದರು. ಆಗ ತಟ್ಟನೆ ಮೇಲೆದ್ದ ಕಾಂಗ್ರೆಸ್ ಬೆಂಬಲಿಗರು ಬಜರಂಗದಳ ಕಾರ್ಯಕರ್ತರ ಬಳಿ ವಾಗ್ವಾದಕ್ಕೆ ನಿಂತರು. ಈ ಸಂದರ್ಭದಲ್ಲೇ ಘರ್ಷಣೆ ಉಂಟಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

