ಬೆಳ್ತಂಗಡಿ: ನಗ ನಗದು ಕಳವು
ಬೆಳ್ತಂಗಡಿ: ಇಲ್ಲಿಗೆ ಸನಿಹದ ಜೈನ್ಪೇಟೆ ಎಂಬಲ್ಲಿನ ಮನೆಯೊಂದಕ್ಕೆ ಗುರುವಾರ ಕಳ್ಳರು ನುಗ್ಗಿ ಸುಮಾರು ರು. 4.80 ಲಕ್ಷದ ನಗ ಮತ್ತು ನಗದನ್ನು ಕದ್ದೊಯ್ದ ಘಟನೆ ನಡೆದಿದೆ.
ಜೈನ್ ಪೇಟೆ ತಿರುವಿನಲ್ಲಿ ದೇವೇಂದ್ರ ಜೈನ್ ಎಂಬವರ ಮನೆಗೆ ರಾತ್ರಿ ಸುಮಾರು 10.30ರ ನಂತರ ಮನೆಯವರು ಮಲಗಿದ್ದ ವೇಳೆ ಅಡುಗೆ ಕೋಣೆಯ ಕಿಟಕಿ ಮುರಿದು ಒಳ ನುಗ್ಗಿದ ಕಳ್ಳರು ಮನೆಯ ಕಬ್ಬಿಣದ ಕಪಾಟನ್ನು ಮುರಿದು ನಗ ನಗದು ಅಪಹರಿಸಿದ್ದಾರೆ. 24 ಗ್ರಾಂ ತೂಕದ ಮುತ್ತಿನ ಬಳೆ, 32 ಗ್ರಾಂ ತೂಕದ 2 ಚೈನ್, 24 ಗ್ರಾಂ ತೂಕದ 4 ಜೊತೆ ಕಿವಿ ಬೆಂಡೋಳೆ, 4 ಗ್ರಾಂ ತೂಕದ ಬ್ರಾಸ್ಲೆಟ್, 10 ಗ್ರಾಂ ಉಂಗುರಗಳು, 28 ಗ್ರಾಂ ತೂಕದ ಮುತ್ತಿನಹಾರ ಹಾಗೂ 1 ಸ್ಯಾಮ್ಸಂಗ್ ಮೊಬೈಲ್, ರು. 10 ಸಾವಿರ ನಗದು ಅಪಹರಿಸಿದ್ದಾರೆ. ಈ ಬಗ್ಗೆ ಅನಂತರಾಜ್ ಜೈನ್ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಲಿಂಗಪ್ಪ ಪೂಜಾರಿ, ಎಸ್ಐ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ.
ಬಸ್ ಚಾಲಕನಿಗೆ ಹಲ್ಲೆ
ಚಾರ್ಮಾಡಿ: ಕೆಎಸ್ಆರ್ಟಿಸಿ ಬಸ್ನ್ನು ತಡೆದು ದ್ವಿಚಕ್ರ ಸವಾರರಿಬ್ಬರು ಹಲ್ಲೆ ನಡೆಸಿದ ಘಟನೆ ಶುಕ್ರವಾರ ಚಾರ್ಮಾಡಿಯಲ್ಲಿ ನಡೆದಿದೆ. ಬಸ್ಸನ್ನು ತಡೆದು ನಿಲ್ಲಿಸಿದ ಇವರು ಚಾಲಕನನ್ನು ಎಳೆದು ಹಾಕಿ ಬಟ್ಟೆ ಹರಿದು ಹಲ್ಲೆ ನಡೆಸಿದ್ದು ಅಲ್ಲದೆ ಜೀವ ಬೆದರಿಕೆಯೊಡ್ಡಿದ್ದಾರೆ. ಬಸ್ ಚಾಲಕ ಪಾಂಡುರಂಗ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ್ಯಾಯಾಂಗ ಬಂಧನ
ಬೆಳ್ತಂಗಡಿ: ಗೃಹಿಣಿಯೊಬ್ಬರನ್ನು ಅತ್ಯಾಚಾರ ಮಾಡಿದ ಆರೋಪಿಗೆ ಇಲ್ಲಿನ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಉಜಿರೆ ಹಳೆಪೇಟೆ ನಿವಾಸಿ ಇಕ್ಬಾಲ್(25) ಆರೋಪಿ.
ಈತ ಹಳೆಪೇಟೆ ಕಕ್ಕರಬೆಟ್ಟು ನಿವಾಸಿ ಅನ್ಯಕೋಮಿನ ಮಹಿಳೆಯೊಬ್ಬರ ಮನೆಗೆ ಕಟ್ಟಿಗೆ ಒಡೆಯುವ ಕೆಲಸಕ್ಕೆ ಬಂದಿದ್ದ. ನೀರು ಬೇಕೆಂದು ಕೇಳಿ ಆಕೆ ನೀರು ತರಲೆಂದು ಒಳಗೆ ಹೋದಾಗ ಮನೆಯೊಳಗೆ ಪ್ರವೇಶಿಸಿ ಅತ್ಯಾಚಾರ ಮಾಡಿದ್ದ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೂಡಲೇ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಇದೀಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

