ಸುಳ್ಯ: ಮಾತಿನ ಮಲ್ಲರ ಹರಟೆ
ಸುಳ್ಯ: ಜಗತ್ತಿಗೆ ಮೌಲ್ಯಗಳನ್ನು ಕೊಟ್ಟ ದೇಶ ಭಾರತ. ಆದರೆ, ಈ ದೇಶದ ಮೌಲ್ಯ ರಕ್ಷಿಸುತ್ತಿರುವವರು ಯಾರು ಹಿರಿಯರೋ, ಕಿರಿಯರೋ ಎಂಬ ಜಿಜ್ಞಾಸೆಗೆ ಸುಳ್ಯದ ಹಳೆಗೇಟಿನಲ್ಲಿರುವ ಕೇಶವಕೃಪಾ ವೇದಿಕೆ ಒದಗಿಸಿತು.
ಶ್ರೀ ಕೇಶವಕೃಪಾ ಹಿರಿಯ ವಿದ್ಯಾರ್ಥಿ ಪರಿಷತ್ ಮಾತಿನ ಮಲ್ಲರ ಹರಟೆ ಕಾರ್ಯಕ್ರಮ ಏರ್ಪಡಿಸಿದ್ದು, ಹಿರಿಯರ ಮತ್ತು ಕಿರಿಯರ ಮಧ್ಯೆ ಮಾತಿನ ಮಲ್ಲಯುದ್ಧಕ್ಕೆ ವೇದಿಕೆಯಾಯಿತು. ಸಂಸ್ಕೃತಿ ಮತ್ತು ಮೌಲ್ಯವನ್ನು ರಕ್ಷಿಸುವವರು ಹಿರಿಯರೇ, ಅದರಲ್ಲಿ ಯಾರಿಗೂ ಸಂಶಯ ಬೇಡ. ಬೇರು ಇಲ್ಲದೇ ಕಾಂಡ ಉಳಿಯಲು ಸಾಧ್ಯವೇ ಇಲ್ಲ ಎಂದು ಹಿರಿಯರ ತಂಡ ತಮ್ಮ ವಾದವನ್ನು ಮುಂದಿಟ್ಟಿತ್ತು. ಆದರೆ, ಇದನ್ನು ಒಪ್ಪಲು ಕಿರಿಯರ ತಂಡ ಸಿದ್ಧರಿರಲಿಲ್ಲ. ಕೇವಲ ಮೌಲ್ಯಗಳನ್ನು ರಕ್ಷಿಸುವುದರಿಂದ ಪ್ರಯೋಜನವಿಲ್ಲ. ಅದನ್ನು ಬೆಳೆಸಬೇಕು. ಅದನ್ನು ಬೆಳೆಸಲು ಕಿರಿಯರಿಂದ ಮಾತ್ರ ಸಾಧ್ಯ ಎಂದು ಕಿರಿಯರು ಮರುವಾದ ಮಂಡಿಸಿದರು. ಸಂಪದ ಸಾಲು ಪತ್ರಿಕೆಯ ಸಂಪಾದಕ ವೆಂಕಟೇಶ್ ಸಂಪ, ವಾಗ್ಮಿಗಳಾದ ಪೂರ್ಣಾತ್ಮರಾಮ ಈಶ್ವರಮಂಗಲ, ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಜೆ ಹಿರಿಯರ ತಂಡದ ಪರವಾಗಿ ವಾದಿಸಿದರೆ, ತುಮಕೂರಿನ ನಿಕೇತ್ರಾಜ್, ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮೂಡಿತ್ತಾಯ, ಹವ್ಯಾಸಿ ಬರಹಗಾರ್ತಿ ಸೌಮ್ಯಾ ಭಾಗ್ವತ್ ಕಮಟ ಕಿರಿಯರ ತಂಡದ ಪರವಾಗಿ ಹರಟೆಯಲ್ಲಿ ಭಾಗವಹಿಸಿದ್ದರು. ಶ್ರೀ ಕೃಷ್ಣ ಉಪಾಧ್ಯಾಯ ಸಮನ್ವಯಕಾರರಾಗಿದ್ದರು.
--
ಸುಳ್ಯ: ಅರೆಭಾಷೆ ಸಾಹಿತ್ಯ ಸಂವಾದ, ಪುಸ್ತಕ ಬಿಡುಗಡೆ
ಸುಳ್ಯ: ಪ್ರಾಧ್ಯಾಪಕ ಡಾ. ಕರುಣಾಕರ ನಿಡಿಂಜಿಯವರ ಅರೆಭಾಷೆ ಕವನ ಸಂಕಲನ 'ನೀಲಿ ದಾರಿ' ಬಿಡುಗಡೆ ಸಮಾರಂಭ ಹಾಗೂ ಅರೆಭಾಷೆ ಸಾಹಿತ್ಯ ಸಂವಾದ ಚೆಂಬು ಗ್ರಾಮದ ನಿಡಿಂಜಿ ಮನೆಯಲ್ಲಿ ನಡೆಯಿತು. ನಿವಣತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಭಾಷಾ ತಜ್ಞ ಹಾಗೂ ಸಾಹಿತಿ ಪ್ರೊ. ಕೆ. ಕುಶಾಲಪ್ಪ ಗೌಡರು ಪುಸ್ತಕ ಬಿಡುಗಡೆ ಮಾಡಿದರು. ಸಂವಾದದಲ್ಲಿ ವಿದ್ಯಾಧರ ಬಡ್ಡಡ್ಕ, ಗೋಪಾಲ್ ಪೆರಾಜೆ, ಡಾ. ಪ್ರಭಾಕರ ಶಿಶಿಲ, ಲೋಕನಾಥ ಅಮೆಚೂರು ಮೊದಲಾದವರು ತಮ್ಮ ಅಭಿಪ್ರಾಯ ಮಂಡಿಸಿದರು. ಬಿ.ಎ. ಗಣಪತಿ, ಕಾವೇರಮ್ಮ ಸೋಮಣ್ಣ, ಚಂದ್ರಶೇಖರ ಹೊಸೂರು, ಶೀಲಾವತಿ ಕೊಳಂಬೆ, ಜಯಮ್ಮ ಚೆಟ್ಟಿಮಾಡ, ಸುಬ್ರಹ್ಮಣ್ಯ ಉಪಾಧ್ಯಾಯ, ಸಂಜೀವ ಕುದ್ಪಾಜೆ, ಕರುಣಾಕರ ನಿಡಿಂಜಿ ಸಂವಾದದಲ್ಲಿ ಭಾಗವಹಿಸಿದ್ದರು. ಸಾಹಿತ್ಯದ ಚರ್ಚೆಗಿಂತ ಭಾಷೆ ಉಳಿಸಬೇಕಾದ ಕುರಿತು ಹಲವರು ತಮ್ಮ ಕಾಳಜಿಯನ್ನು ಪ್ರಬಲವಾಗಿ ವ್ಯಕ್ತಪಡಿಸಿದರು. ನಗರೀಕರಣದಿಂದಾಗಿ ಮತ್ತು ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಅರೆಭಾಷೆಯನ್ನು ಮಾತನಾಡುವುದರಿಂದ ಮಕ್ಕಳನ್ನು ದೂರ ಮಾಡುವ ಪೋಷಕರು ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕೆಂದು ಸಲಹೆಗಳು ಸಭೆಯಲ್ಲಿ ಬಂದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

