ಜಾತಿ ನಿಂದನೆ: ಪ್ರಕರಣ ದಾಖಲು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 26
ಹಳೆಯ ವೈಷಮ್ಯದಿಂದಾಗಿ ಮಹಿಳೆಯೊಬ್ಬರ ಮೇಲೆ ಜಾತಿ ನಿಂದನೆ ಮಾಡಿದ ನಾಲ್ವರ ವಿರುದ್ಧ ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತೋಷ ತಾತುಷ್ಕರ್, ನಾರಾಯಣ ತಾತುಷ್ಕರ್, ಶ್ರೀನಿವಾಸರಾವ್ ತಾತುಷ್ಕರ್ ಹಾಗೂ ಲಕ್ಷ್ಮಣರಾವ್ ತಾತುಷ್ಕರ್ ಎಂಬುವರ ವಿರುದ್ಧ ಗೋಕುಲ ರಸ್ತೆ ನಿವಾಸಿ ಸುಜಾತಾ ಗೋವಿಂದರಾಜ ಹರಿವಾಣ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಆರೋಪಿತರೆಲ್ಲರೂ ಪ್ಲಾಟ್ ಮಾರಾಟ ವ್ಯವಹಾರ ನಡೆಸುತ್ತಿರುವಾಗ ಸುಜಾತಾ ಅವರಿಗೆ ಪ್ಲಾಟ್ ನೀಡುವುದಾಗಿ ಹೇಳಿ ಹಣ ಪಡೆದು ನಿವೇಶನ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಗೋವಿಂದರಾಜ, ಆರೋಪಿತರ ವಿರುದ್ಧ ದೂರು ದಾಖಲಿಸಿದ್ದರು.
ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ನಾಲ್ವರು ಆರೋಪಿತರು 13-1-2014 ರಂದು ಬೆಳಗ್ಗೆ 11ಕ್ಕೆ ಹರಿವಾಣ ಅವರ ಮನೆಗೆ ತೆರಳಿ ಗೇಟ್ ಮುರಿದು ಹಾಕಲು ಯತ್ನಿಸಿದ್ದನ್ನು ಆಕ್ಷೇಪಿಸಿದ್ದಕ್ಕೆ ಸುಜಾತಾ ಅವರನ್ನು ಜಾತಿಯಿಂದ ನಿಂದಿಸಿದ್ದರು ಎಂದು ಪತಿ ಗೋವಿಂದರಾಜ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ, ಬುಧವಾರ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.
ನಾಪತ್ತೆ: ಗೋಕುಲ ರಸ್ತೆ ಅಕ್ಷಯ ಕಾಲನಿ ನಿವಾಸಿ ಪುಷ್ಪಾ ಪ್ರಕಾಶ ಸುನಗದ (30) ಕಾಣೆಯಾಗಿರುವ ಬಗ್ಗೆ ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ. 25ರಂದು ಮಧ್ಯಾಹ್ನ 12ಕ್ಕೆ ಬ್ಯೂಟಿ ಪಾರ್ಲರ್‌ಗೆ ಹೋಗಿ ಬರುವುದಾಗಿ ಹೇಳಿ ಹೋದ ಪುಷ್ಪಾ ಮನೆಗೆ ವಾಪಸ್ಸಾಗಿಲ್ಲ ಎಂದು ಆಕೆಯ ಪತಿ ಪ್ರಕಾಶ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ದಂಡ: ಸಂಚಾರ ನಿಯಮ ಉಲ್ಲಂಘಿಸಿರುವ 807 ಪ್ರಕರಣಗಳನ್ನು ಬುಧವಾರ ಪತ್ತೆ ಹಚ್ಚಿದ ಸಂಚಾರ ಪೊಲೀಸರು, ಒಟ್ಟು ರು. 1,12,800 ದಂಡ ವಸೂಲಿ ಮಾಡಿದ್ದಾರೆ ಎಂದು ಪೊಲೀಸ್ ಪ್ರಕರಣೆ ತಿಳಿಸಿದೆ.
ಕಲಘಟಗಿ: ನಾಳೆಯಿಂದ ಉರೂಸ್
ಕಲಘಟಗಿ: ತಾಲೂಕಿನ ಹಿರೆಹೊನ್ನಳ್ಳಿ ಗ್ರಾಮದಲ್ಲಿ ಮಾ. 27, 28 ರಂದು ಉರೂಸ್ ಜರುಗಲಿದೆ. ಬೆಳಗ್ಗೆ 7ಕ್ಕೆ ಗ್ರಾಮದ ಬಾವಾನ ಕೇರಿಯಲ್ಲಿ ಕುರಾನ್ ಕಹಾನಿ ಪಠಣ, ಸಂಜೆ 4ಕ್ಕೆ ನಾಗಲಾವಿ ಬಾಬಾ ಹಜರತ್ ಸೈಯದ್ ಹಾಜಿ ಮೆಹಬೂಬ್ ವಲಿಸಾ ಅವರಿಂದ ಸಂದಲ್(ಗಂಧ)ಜರುಗುವುದು. ರಾತ್ರಿ 10ಕ್ಕೆ ಸವಾಲ್ ಭಜನಾ ಕಾರ್ಯಕ್ರಮ ನಡೆಯಲಿದ್ದು, 28ರಂದು ಶಿವನಾಪುರ ಮಂಡಲ್ ಫಕೀರಗಳಿಂದ ಜಲ್ವಾ ಖವಾಲಿ, ತಡಸ್ ಮುಕ್ತಿ ಸಲ್ಮಾನ್ಕಿಬಲಾ ಅವರಿಂದ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಪರೀಕ್ಷೆ: ನಕಲಿ ವಿದ್ಯಾರ್ಥಿ ಬಂಧನ
ನವಲಗುಂದ: ಇಲ್ಲಿಯ ಶಂಕರ ಪ.ಪೂ.ಮಹಾವಿದ್ಯಾಲಯದಲ್ಲಿ ನಡೆಯುತ್ತಿದ್ದ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಬದಲಿಗೆ ಪರೀಕ್ಷೆ ಬರೆಯುತ್ತಿದ್ದ ನಕಲಿ ವಿದ್ಯಾರ್ಥಿಯನ್ನು ವಿಚಕ್ಷಣಾ ದಳದ ಸಿಬ್ಬಂದಿ ಬುಧವಾರ ಬಂಧಿಸಿದ್ದಾರೆ. ಸುನೀಲ ಶಿವನಪ್ಪ ಭೋವಿ ಬದಲಾಗಿ ಆತನ ಸ್ನೇಹಿತ ಕಿರಣ ಕಮೀತಕರ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ಪರೀಕ್ಷಾ ಮುಖ್ಯ ಅಧಿಕ್ಷಕ ಎಸ್.ಕೆ. ಕಮಡೊಳ್ಳಿ ವಿಚಕ್ಷಣಾ ಸಿಬ್ಬಂದಿಗೆ ದೂರು ನೀಡಿದ್ದರು. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

