ಪರೀಕ್ಷೆ: ನಿಷೇಧಾಜ್ಞೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಾದ್ಯಂತ ಮಾ. 28 ರಿಂದ ಏ. 9ರವೆರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ ಆದೇಶ ಹೊರಡಿಸಿದ್ದಾರೆ.
ಆಕಸ್ಮಿಕ ಬೆಂಕಿ: ಅಪಾರ ಹಾನಿ
ಕಲಘಟಗಿ: ತಾಲೂಕಿನ ಉಗ್ನಿಕೆರಿ ಗ್ರಾ ಮದ ರೈತ ಜಂಗುಲಿಂಗಪ್ಪ ಗಬ್ಬೂರ ಅವರ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರುಪಾಯಿ ಹಾನಿಗೀಡಾದ ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಗಬ್ಬೂರರ ತೋಟಕ್ಕೆ ಹೊಂದಿಕೊಂಡಿರುವ ನಿಲಗಂಗವ್ವ ಕುಸುಗಲ್ಲ ಅವರ ಸೋಯಾಬೀನ್ ಬಣವೆಗೂ ಬೆಂಕಿ ತಗುಲಿ 30 ಕ್ವಿಂ. ಸೋಯಾ ಹಾನಿಗೀಡಾಗಿದೆ. ಪರಿಹಾರಕ್ಕಾಗಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ವೀಕ್ಷಕರಾಗಿ ನೇಮಕ
ಹುಬ್ಬಳ್ಳಿ: ಕಾರವಾರ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕರಾಗಿ ಕೃಷ್ಣಪ್ಪ ವೀರಗಂಟಿ ನೇಮಕಗೊಂಡಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸೇವಾ ದಳದ ಮುಖ್ಯ ಸಂಘಟಿಕ ಮಹೇಂದ್ರ ಜೋಶಿ ಅವರ ನಿರ್ದೇಶನದ ಮೇರೆಗೆ ಪ್ರದೇಶ ಕಾಂಗ್ರೆಸ್ ಸೇವಾದಳದ ಪ್ರಧಾನ ಸಂಘಟನಾಕಾರ ಭೀಮಾಶಂಕರ ವಿ.ಎಚ್. ಅವರು ವೀರಗಂಟಿ ಅವರನ್ನು ನೇಮಕಗೊಳಿಸಿದ್ದಾರೆ.
ನಾಳೆ ಸಮಾರೋಪ
ಹುಬ್ಬಳ್ಳಿ: ನಗರದ ಸರ್ಕಾರಿ ಪಾಲಿಟೆಕ್ನಿಕ್ನ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭ ಮಾ. 28ರಂದು ಆಯೋಜಿಸಲಾಗಿದೆ. ಜಿಟಿಎಸ್ ಆವರಣದಲ್ಲಿ ಅಂದು ಸಂಜೆ 4.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಪ್ರಾಧ್ಯಾಪಕಿ ಡಾ. ಸಪ್ನಾರಾಣಿ ದಾಸ ಹಾಗೂ ಕೆವಿಜಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಎಸ್.ಜಿ. ಗಚ್ಚಿನಮಠ ಅತಿಥಿಗಳಾಗಿದ್ದು, ಪ್ರಾಚಾರ್ಯ ಗೀತಾ ಎಂ. ಅಧ್ಯಕ್ಷತೆ ವಹಿಸುವರು.
29ರಿಂದ 'ನೃತ್ಯ ಮತ್ತು ಸಾಹಸ'
ಹುಬ್ಬಳ್ಳಿ: ರಾಧಾಕೃಷ್ಣ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಮತ್ತು ಏಜ್ಯುಕೇಶನ್ ಹಾಗೂ ಕಿಡ್ಜ್ ವರ್ಲ್ಡ್ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಮಾ. 29 ರಿಂದ ಏ. 14ರವರೆಗೆ 'ನೃತ್ಯ ಮತ್ತು ಸಾಹಸ' ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ನೃತ್ಯ, ಕರಾಟೆ, ಯೋಗಾಸನ, ಶಿಸ್ತು, ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. 15 ದಿನಗಳ ಸ್ಕೇಟಿಂಗ್ ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗೆ ಮನೀಶ ಶಿಂಧೆ 9342690444ಗೆ ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

