ಡಿಕ್ಕಿ: ಬೈಕ್ ಸವಾರ ಸಾವು
ಶಿಡ್ಲಘಟ್ಟ: ಗೆಜ್ಜಗಾನಹಳ್ಳಿ ಸಮೀಪ ರಸ್ತೆ ತಿರುವಿನಲ್ಲಿ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರನು ತೀವ್ರ ಗಾಯಗಳಿಂದ ಮೃತಪಟ್ಟ ಘಟನೆ ನಡೆದಿದೆ. ಪಿಂಡಪಾನಹಳ್ಳಿಯ ನಿವಾಸಿಯಾದ ಮದು(ಮಂಜುನಾಥ್) ನಂಜುಂಡಾಚಾರಿಯ ಮಗನಾಗಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾನೆ. ಮದು ಜೆ.ಸಿ.ಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದು ಆಂಧ್ರಪ್ರದೇಶಕ್ಕೂ ಜೆ.ಸಿ.ಬಿ ಚಾಲಕನಾಗಿ ಹೋಗಿಬರುತ್ತಿದ್ದ ಎಂದು ಹೇಳಲಾಗುತ್ತಿದೆ. ನಿನ್ನೆ ಸಂಜೆ ಪಲ್ಸರ್ನಲ್ಲಿ ಹೋಗುತ್ತಿದ್ದಾಗ ಗೆಜ್ಜಗಾನಹಳ್ಳಿಯ ಸಮೀಪ ರಸ್ತೆ ತಿರುವಿನಲ್ಲಿ ಕ್ರಾಸ್ ಮಾಡುವಾಗ ಎದುರಿಗೆ ಬರುವ ಮೋರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಿಂದ ತೀವ್ರ ಗಾಯಗೊಂಡ ಮದುವನ್ನು ಶಿಡ್ಲಘಟ್ಟ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆಯಲ್ಲಿಯೇ ಮೃತಪಟ್ಟಿದ್ದಾನೆ. ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸಲಾಗುತಿದೆ.
ಎಎಸ್ಐ ಲೋಕಾ ಬಲೆಗೆ
ಶಿಡ್ಲಘಟ್ಟ: ದಿಬ್ಬೂರಹಳ್ಳಿಯ ಎ.ಎಸ್.ಐ ರಾಜೇಂದ್ರ ಪ್ರಸಾದ್ ಲಂಚ ಪಡೆಯಲು ಹೋಗಿ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿರುವ ಪ್ರಕರಣ ದಿಬ್ಬೂರಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.
ದಿಬ್ಬೂರಹಳ್ಳಿಯಲ್ಲಿ ಪೋಲಿಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಎ.ಎಸ್.ಐ ರಾಜೇಂದ್ರ ಪ್ರಸಾದ್ ವೆಂಕಟೇಶ್ ಎಂಬುವರಿಂದ ಲಂಚ ಪಡೆಯಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ವೆಂಕಟೇಶ್ ಕೌಟುಂಬಿಕ ಕಲಹಕ್ಕೆ ಸಂಬಂಧಪಟ್ಟ ಕೇಸು ದಿಬ್ಬೂರಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದು ಬಗೆಹರಿಸಲು 3000 ರು. ಲಂಚ ಕೇಳಿದ್ದಾನೆ. ವೆಂಕಟೇಶ್ ಲೋಕಾಯುಕ್ತರಿಗೆ ನೀಡಿದ ಮಾಹಿತಿಯ ಮೇರೆಗೆ 2000 ರು. ಮುಂಗಡ ಕೊಟ್ಟಿದ್ದು 1000 ರು. ಕೊಡುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದಿದ್ದು ಲೋಕಾಯುಕ್ತ ಇನ್ಸೆಪೆಕ್ಟರ್ ಮಂಜೇಗೌಡ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

