ಕೋಲಾರ

ರಾಮಕ್ಕ ವಿರುದ್ಧ ಪ್ರಕರಣ

Published On :

ಕೆಜಿಎಫ್: ಜಮೀನೊಂದಕ್ಕೆ ಸಂಬಂಧಿಸಿದಂತೆ ನಕಲಿ ದಾಖಲಾತಿ ಸೃಷ್ಟಿಸಿ ಶಾಸಕಿ ವೈ.ರಾಮಕ್ಕ ಅವರಿಗೆ ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಜಮೀನು ಖರೀದಿಸಿದ ರಾಮಕ್ಕ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇತಮಂಗಲ ಠಾಣಾ ವ್ಯಾಪ್ತಿಯ ಅಡಂಪಲ್ಲಿ ನಿವಾಸಿ ಬೀರಪ್ಪ ಎಂಬವರಿಗೆ ಸೇರಿದ ಕಗ್ಗಿನಹಳ್ಳಿ ಪ್ರದೇಶದಲ್ಲಿರುವ 1.23 ಎಕರೆ ಜಮೀನನ್ನು ನಾಗಶೆಟ್ಟಿಹಳ್ಳಿ ನಿವಾಸಿ ಶ್ರೀರಾಮರೆಡ್ಡಿ, ಶ್ರೀರಾಮಪ್ಪ, ರವಿಕುಮಾರ್, ವೆಂಕಟಮ್ಮ ಹಾಗೂ ಕೊತ್ತೂರು ನಾರಾಯಣಪ್ಪ ಅವರು ನಕಲಿ ದಾಖಲಾತಿ ಸೃಷ್ಟಿಸಿ ಕೆಜಿಎಫ್ ಕ್ಷೇತ್ರದ ಶಾಸಕಿ ವೈ.ರಾಮಕ್ಕ ಅವರಿಗೆ ಮಾರಾಟ ಮಾಡಿ ತಮಗೆ ವಂಚಿಸಿದ್ದಾರೆ ಎಂದು ಬೀರಪ್ಪ ಕೆಜಿಎಫ್ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಪರಿಶೀಲಿಸಿದ ಹಿರಿಯ ನ್ಯಾಯಾಧೀಶ ಮಮದಾಪುರ ಅವರ ಆದೇಶದ ಮೇರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕಿ ವೈ.ರಾಮಕ್ಕ, ಶ್ರೀರಾಮರೆಡ್ಡಿ, ಶ್ರೀರಾಮಪ್ಪ, ರವಿಕುಮಾರ್, ವೆಂಕಟಮ್ಮ ಹಾಗೂ ಕೊತ್ತೂರು ನಾರಾಯಣಪ್ಪ ವಿರುದ್ದ ಬೇತಮಂಗಲ ಠಾಣಾ ಪಿಎಸ್‌ಐ ಜಗದೀಶ್ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: 1994ರಲ್ಲಿ ಬೀರಪ್ಪ ಕಗ್ಗಿನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 63-1ರಲ್ಲಿರುವ 1.23 ಎಕರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಆದರೆ ನಾಗಶೆಟ್ಟಿಹಳ್ಳಿ ಗ್ರಾಮದ ಶ್ರೀರಾಮಪ್ಪ ಎಂಬವರು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಈತನೇ ಬೀರಪ್ಪ ಎಂದು ಹೇಳಿ ಬಂಗಾರಪೇಟೆಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 2009ರಲ್ಲಿ ಜಿ.ಪಿ.ಎ ಮಾಡಿಸಿಕೊಂಡಿದ್ದಾರೆ. ಈ ಜಮೀನನ್ನು ಶ್ರೀರಾಮಪ್ಪ ಅವರಿಂದ 2010ರಲ್ಲಿ ಶಾಸಕಿ ವೈ.ರಾಮಕ್ಕ ಅವರು ಖರೀದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.