ಕೋಲಾರ

ಧರ್ಮ ಕಾರ್ಯದಿಂದ ಏಕಾಗ್ರತೆ

Published On :

ಚಿಕ್ಕಬಳ್ಳಾಪುರ: ಧಾರ್ಮಿಕ ಕಾರ್ಯಗಳಿಂದ ಚಂಚಲ ಮನಸ್ಸಿನ ನಿಯಂತ್ರಣ ಸಾಧಿಸಬಹುದು ಎಂದು ಪ್ರವಚನಕಾರ ತಳಗವಾರ ಟಿ.ಎಲ್ .ಆನಂದ್ ಅಭಿಪ್ರಾಯಪಟ್ಟರು.
ತಾಲೂಕಿನ ಯಾತ್ರಾಸ್ಥಳ ರಂಗಸ್ಥಳದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ರಾಜು ಕ್ಷತ್ರಿಯ ವಟುಗಳ ಸಾಮೂಹಿಕ ಉಪನಯನ ಮಹೋತ್ಸವದಲ್ಲಿ ಉಪನಯನದ ಮಹತ್ವ ವಿಷಯವಾಗಿ ಉಪನ್ಯಾಸ ನೀಡಿ, ಗಾಯತ್ರಿ ಮಂತ್ರ 24 ಅಕ್ಷರಗಳಿಂದ ಕೂಡಿದ್ದು ಒಂದೊಂದು ಅಕ್ಷರ ಬೀಜಾಕ್ಷರವಾಗಿದೆ. ಒಂಬತ್ತು ಎಳೆಗಳಿಂದ ಮೂರು ಸುತ್ತುಗಳುಳ್ಳ ತಂತು ವಿಶೇಷವೇ ಯಜ್ಞೋಪವೀತ ಎಂದರು.
ತಾನೂ ಉದ್ದಾರವಾಗಿ, ಪರೋಪಕಾರಿಯಾಗಿ, ಸತ್ಪ್ರಜೆಯಾಗಿ ಬದುಕಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು.  ಹರೆಯ ಮುಗಿದು ವೃದ್ಧಾಪ್ಯ ಆವರಿಸಿದಾಗ ತನ್ನ ಕಳೆದ ಜೀವನವನ್ನು ಅವಲೋಕಿಸಿದಾಗ ತೃಪ್ತಿ ತಂದರೆ ಸಾಕು, ಅದೇ ಶ್ರೇಷ್ಠತೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 40 ಕ್ಷತ್ರಿಯ ವಟುಗಳಿಗೆ ಉಪನಯನವನ್ನು ಉಚಿತವಾಗಿ ಸಂಘದ ವತಿಯಿಂದ ನೆರವೇರಿಸಲಾಯಿತು. ಆರ್. ವೆಂಕಟಾಚಲರಾಜು, ಕಾಂತರಾಜು, ಲಕ್ಷಣರಾಜು, ಜಿ.ಎನ್. ಲಕ್ಷ್ಮೀಪತಿ, ಆನಂದರಾಜು, ಶಿಕ್ಷಣ ಇಲಾಖೆಯ ಕೆ.ಎನ್. ರಾಮಚಂದ್ರ, ಪುರೋಹಿತ ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.