ರೈಲು ಡಿಕ್ಕಿ: ವ್ಯಕ್ತಿಗೆ ಗಾಯ
ಕೆಜಿಎಫ್: ವ್ಯಕ್ತಿಯೊಬ್ಬರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಆತನನ್ನು ಕೋಲಾರದ ಆಸ್ಪತ್ರೆಗೆ ಸೇರಿಸಿರುವ ಘಟನೆ ಉರಿಗಾಂ ರೈಲ್ವೆ ನಿಲ್ದಾಣದ ಬಳಿ ಭಾನುವಾರ ನಡೆದಿದೆ. ಬೆಂಗಳೂರಿಗೆ ಹಿಂತಿರುಗುತ್ತಿದ್ದ ಪ್ಯಾಸೆಂಜರ್ ರೈಲು ಉರಿಗಾಂ ನಿಲ್ದಾಣದಿಂದ ಹೊರಡುತ್ತಿದ್ದಾಗ ರೈಲ್ವೆ ಗೇಟ್ ಸಮೀಪ ವ್ಯಕ್ತಿ ಹಳಿಯ ಮೇಲೆ ಕುಳುತ್ತಿದ್ದು ಚಾಲಕ ವೇಗ ಕಡಿಮೆ ಮಾಡಿ ಹಾರನ್ ಮಾಡಿದಾಗ ವ್ಯಕ್ತಿ ಎದ್ದು ನಿಂತಿದ್ದು ಆಗ ರೈಲಿನ ಮೆಟ್ಟಿಲು ಅವರ ತಲೆಗೆ ಬಡಿದು ಗಾಯವಾಗಿದೆ. ಕೋಲಾರದ ನಾರಾಯಣಸ್ವಾಮಿ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ತರಬೇತಿಗೆ ಅರ್ಜಿ ಆಹ್ವಾನ
ಕೆಜಿಎಫ್: ಕೋಲಾರ ಜಿಲ್ಲೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆವತಿಯಿಂದ ಮುಸ್ಲಿಮರಿಗೆ ಮಾತ್ರ ಉಚಿತ ಕಾಲ್ ಸೆಂಟರ್, ಎಂ.ಎಸ್.ಆಫೀಸ್ ಮತ್ತು ಟ್ಯಾಲಿ ತರಬೇತಿಯನ್ನು ನೀಡಲಾಗುವುದು. ಎಸ್ಸೆಸ್ಸೆಲ್ಸಿ ಅಥವಾ ಐಟಿಐ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಮೂರು ತಿಂಗಳ ತರಬೇತಿ ಮತ್ತು ತರಬೇತಿ ಅವಧಿಯಲ್ಲಿ ಸ್ಟೈಫಂಡ್ ಹಾಗೂ ಜಾಬ್ ಪ್ಲೇಸ್ಮೆಂಟ್ ನೀಡಲಾಗುತ್ತದೆ. ಅರ್ಜಿಯನ್ನು ಜು.28 ರೊಳಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕೋಲಾರ ಅಥವಾ ಕೆಜಿಎಫ್ನ ಸಲ್ಡಾನಾ ವೃತ್ತದಲ್ಲಿರುವ ಎಸಿಸಿಪಿಎಲ್ ಟ್ರೈನಿಂಗ್ ತರಬೇತಿ ವಿಭಾಗ, ಫರ್ಪೆಕ್ಟ್ ಇನ್ಸ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಬಳಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ 9141896930, 8453577388, 08153-271231ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೀರಿನ ಪೈಪ್ ದುರಸ್ತಿಗೆ ಆಗ್ರಹ
ಚಿಂತಾಮಣಿ: ಕುಡಿಯುವ ನೀರಿನ ಪೈಪು ಒಡೆದು ನೀರು ವ್ಯರ್ಥವಾಗುತ್ತಿದ್ದರು ನಗರಸಭಾ ಅಧಿಕಾರಿಗಳು ಗಮನ ಹರಿಸದ ಬಗ್ಗೆ ಸಾರ್ವಜನಿಕರು ಕಿಡಿ ಕಾರಿದ್ದಾರೆ. ನಗರದ ಸರ್ಕಾರಿ ಪಾಲಿಟೆಕ್ನಿಕ್ ರಸ್ತೆ ಚರಂಡಿ ನಿರ್ಮಾಣಕ್ಕಾಗಿ ರಸ್ತೆ ಅಗೆದ ಪರಿಣಾಮ ನೀರಿನ ಪೈಪು ಒಡೆದು ನೀರು ಪೋಲಾಗುತ್ತಿದೆ. ನೀರಿನ ಸಮಸ್ಯೆ ನಗರದಲ್ಲಿ ತಾಂಡವಾಡುತ್ತಿದ್ದರೂ ಅಧಿಕಾರಿಗಳು ಈ ಬಗ್ಗೆ ಗಮನ ನೀಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ನಗರಸಭೆ ಅಧಿಕಾರಿಗಳು ಈಗಲಾದರು ಗಮನ ಹರಿಸಿ ಪೈಪ್ ಸರಿಪಡಿಸಬೇಕೆಂದು ಜಿಲ್ಲಾ ಸಫಾಯಿ ಕರ್ಮಚಾರಿ ಅಧ್ಯಕ್ಷ ನರಸಿಂಹಪ್ಪ ಆಗ್ರಹಿಸಿದ್ದಾರೆ.
ತರಬೇತಿಗೆ ಅರ್ಜಿ ಆಹ್ವಾನ
ಕೆಜಿಎಫ್: ಕೋಲಾರ ಜಿಲ್ಲೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆವತಿಯಿಂದ ಮುಸ್ಲಿಮರಿಗೆ ಮಾತ್ರ ಉಚಿತ ಕಾಲ್ ಸೆಂಟರ್, ಎಂ.ಎಸ್.ಆಫೀಸ್ ಮತ್ತು ಟ್ಯಾಲಿ ತರಬೇತಿಯನ್ನು ನೀಡಲಾಗುವುದು. ಎಸ್ಸೆಸ್ಸೆಲ್ಸಿ ಅಥವಾ ಐಟಿಐ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಮೂರು ತಿಂಗಳ ತರಬೇತಿ ಮತ್ತು ತರಬೇತಿ ಅವಧಿಯಲ್ಲಿ ಸ್ಟೈಫಂಡ್ ಹಾಗೂ ಜಾಬ್ ಪ್ಲೇಸ್ಮೆಂಟ್ ನೀಡಲಾಗುತ್ತದೆ. ಅರ್ಜಿಯನ್ನು ಜು.28 ರೊಳಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕೋಲಾರ ಅಥವಾ ಕೆಜಿಎಫ್ನ ಸಲ್ಡಾನಾ ವೃತ್ತದಲ್ಲಿರುವ ಎಸಿಸಿಪಿಎಲ್ ಟ್ರೈನಿಂಗ್ ತರಬೇತಿ ವಿಭಾಗ, ಫರ್ಪೆಕ್ಟ್ ಇನ್ಸ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಬಳಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ 9141896930, 8453577388, 08153-271231ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
'ಇದು ಜೆನ್ ಅಲ್ಲ' ಕೃತಿ ಲೋಕಾರ್ಪಣೆ
ತುಮಕೂರು: ಜಾತಿ ವಿಮೋಚನೆಗಾಗಿಯೇ ಬೌದ್ಧ ಧರ್ಮ ಎಂಬುದು ತಪ್ಪು. ಬೌದ್ಧ ಧರ್ಮವನ್ನು ಜಾತಿ ವಿಮೋಚನೆಯ ದಾರಿಯಾಗಿ ನೋಡುವುದು ಸರಿಯಲ್ಲ. ಇದು ಸಾಮಾಜಿಕ ಸಿದ್ದಾಂತ. ಬುದ್ಧ ಹೇಳುವ ಹಾಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುವ ಆದರ್ಶ ಸಿದ್ಧಾಂತ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ಮಟ್ಟು ಪ್ರತಿಪಾದಿಸಿದರು. ತುಮಕೂರಿನ ಓಶೋ ಧ್ಯಾನ ಕೇಂದ್ರದಲ್ಲಿ ಬೋಧಿ ಮಂಡಲ ಮತ್ತು ಸಹಜ ಪ್ರಕಾಶನದ ವತಿಯಿಂದ ಹಮ್ಮಿಕೊಂಡಿದ್ದ ಲೇಖಕ, ಪತ್ರಕರ್ತ ಕುಚ್ಚಂಗಿ ಪ್ರಸನ್ನ ಅವರ “B¥Úß ಜೆನ್ @ÄÇ’ ಕೃತಿ ಬಿಡುಗಡೆ ಕಾರ್ಯಕ್ರಮದ ನಂತರ ಏರ್ಪಾಟಾಗಿದ್ದ “eÛ~¿ßM¥Ú ಬಿಡುಗಡೆ ಹೊಂದುವ ಹಾದಿಯಲ್ಲಿ ಬೌದ್ಧ ಧರ್ಮದೊಂದಿಗೆ @«ÚßÑÚM¨Û«Ú’ ಗೋಷ್ಠಿಯಲ್ಲಿ ಮಾತನಾಡಿದರು. ಜಾತಿ ವಿನಾಶಕ್ಕೆಂದು ರೂಪಿಸಲಾದ ಬಸವಣ್ಣನವರ ವೀರಶೈವ ಧರ್ಮ ಇಂದು ಏನಾಗಿದೆ ಎಂಬ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಬೌದ್ಧ ಧರ್ಮವನ್ನು ಜಾತಿ ನಿರ್ಮೂಲನೆ ದೃಷ್ಟಿಯಿಂದ ನೋಡುವುದು ಅಷ್ಟಾಗಿ ಸರಿಯಲ್ಲ ಎಂದರು. ಸಮಾರಂಭದಲ್ಲಿ ಡಾ. ನಟರಾಜ್ ಬೂದಾಳ್, ಡಾ.ಎಚ್.ವಿ. ರಂಗಸ್ವಾಮಿ, ಲೇಖಕ ಕುಚ್ಚಂಗಿ ಪ್ರಸನ್ನ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಕೆ.ಟಿ. ಶಿವಪ್ರಸಾದ್ ಇತರರಿದ್ದರು.
ಕಪ್ಪು ಬಾವುಟ ಪ್ರದರ್ಶನ
ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಗೆ ಕನ್ನಡಪರ, ರೈತಪರ ಸಂಘಟನೆಗಳ ಪದಾಧಿಕಾರಿಗಳಿಗೆ ಆಹ್ವಾನ ನೀಡದಿರುವ ತಾಲೂಕು ಕಸಾಪ ಅಧ್ಯಕ್ಷ ಮತ್ತು ತಹಸೀಲ್ದಾರ್ ದೋರಣೆ ಖಂಡಿಸಿ ಸಮ್ಮೇಳನದ ದಿನ ಕಪ್ಪು ಬಾವುಟ ಪ್ರದರ್ಶಿಸಲು ತೀರ್ಮಾನಿಸಿರುವುದಾಗಿ ಬಾಬಾ ಸಾಹೇಬ್ ಬಹುಜನ ಯುವ ವೇದಿಕೆ ಅಧ್ಯಕ್ಷ ಬೀಡಾ ಶ್ರೀನಿವಾಸ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಹಸೀಲ್ದಾರ್ ಮತ್ತು ಕಸಾಪ ಅಧ್ಯಕ್ಷರು ಬೇಜವಾಬ್ದಾರಿಯಿಂದ ನಡೆದುಕೊಂಡು ಸಂಘ ಸಂಸ್ಥೆಗಳಿಗೆ ಮಾಹಿತಿ ನೀಡದೆ ಸಭೆ ನಡೆಸಿದ್ದಾರೆಂದು ಆರೋಪಿಸಿದರು. ಈ ಸಂದರ್ಭದಲ್ಲಿ ಬದ್ರಿನಾಥ್, ವಿ.ಜಿ. ನಾಗರಾಜ್, ಮಂಜು, ನರೇಶ್, ಮಣಿ, ಶ್ರೀನಿವಾಸ್, ಚಂದ್ರ, ನವೀನ್ ಇದ್ದರು.
ಗಾಯತ್ರಿ ಮಂದಿರಕ್ಕೆ ಚ್ಯುತಿ
ಮುಳಬಾಗಲು: ಪಟ್ಟಣದ ವಿಠಲಕುಂಟೆ ಬಳಿಯ ಗಾಯತ್ರಿ ಮಂದಿರದ ಭಕ್ತಾದಿಗಳ ಅನುಕೂಲಕ್ಕಾಗಿ 2013ರ ಆ. 8 ರಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಭೂಮಿಪೂಜೆ ನಡೆಸಿದರು. ನಂತರ ಸಮುದಾಯ ಭವನದ ಕಾಮಗಾರಿಗಳಿಗಾಗಿ ಟೆಂಡರ್ ಮೂಲಕ ಗುತ್ತಿಗೆದಾರರು ಕೆಲಸ ಶುರು ಮಾಡಿದರು. ಮೊದಲ ಹಂತವಾಗಿ ಮಂದಿರದ ಪಕ್ಕ ಭವನಕ್ಕಾಗಿ ಅಗೆಯಲಾಯಿತು. ಕಳೆದ ಮೂರು ತಿಂಗಳ ಹಿಂದೆ ಅಗೆದು ಹಾಗೇ ಬಿಡಲಾಗಿದೆ. ಹಾಗಾಗೀ ಗಾಯತ್ರಿ ಮಂದಿರದ ಕಟ್ಟಡಕ್ಕೆ ಕುತ್ತು ಬಂದಿದೆ. ಸದರಿ ಪ್ರದೇಶದಲ್ಲಿ ಮಣ್ಣು ಟೊಳ್ಳಗಿದ್ದು, ಮಂದಿರದ ನಿರ್ವಹಕರು ಮಂದಿರದ ಕಟ್ಟಡದ ಭದ್ರತೆಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ತಕ್ಷಣ ಕಾಮಗಾರಿಗಳನ್ನು ನಡೆಸಲು ದೇವಾಲಯದ ಭಕ್ತಾದಿಗಳು ಶಾಸಕರು ಮತ್ತು ಪುರಸಭೆ ಅಧಿಕಾರಿಗಳನ್ನು ಕೋರಿದ್ದಾರೆ.
ಶೀಘ್ರ ಫುಡ್ಪಾರ್ಕ್ ಸ್ಥಾಪನೆ
ಮುಳಬಾಗಲು: ತಾಲೂಕಿನಲ್ಲಿ ಶೀಘ್ರವೇ ಫುಡ್ಪಾರ್ಕ್ ಸ್ಥಾಪನೆ ಮಾಡಲಾಗುವುದೆಂದು ಮಾಜಿ ಶಾಸಕ ಅಮರೇಶ್ ನುಡಿದರು. ತಾಲೂಕಿನ ಅಗ್ರಹಾರದ ಎಂಐಟಿಸಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು. ಪುಡ್ಪಾರ್ಕ್ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಲಾಗಿದೆ. ದೊಡ್ಡಮಟ್ಟದ ಕೈಗಾರಿಕೆಗಳನ್ನು ತಾಲೂಕಿಗೆ ನೀಡಲು ಒತ್ತಾಯಿಸಿರುವುದಾಗಿ ನುಡಿದರು. ಜಿಲ್ಲಾ ಕಾಂಗ್ರೆಸ್ ಖಜಾಂಚಿ ಕೆ.ವಿ. ರಾಮಪ್ರಸಾದ್ ಮಾತನಾಡಿ, ಮರಳು ಮಾಫಿಯ, ಕಲ್ಲುಗಣಿಗಾರಿಕೆ ಅರಣ್ಯ ಸಂಪತ್ತು ನಾಶದ ವಿರುದ್ಧ ಜನರಲ್ಲಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು. ಎಂದು ನುಡಿದ ಅವರು ಮನೆಗೊಂದು ಮರ ಬೆಳೆಸುವ ಮೂಲಕ ಪ್ರಕೃತಿ ಉಳಿವಿಗೆ ಶ್ರಮಿಸಬೇಕೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

