ಕೋಲಾರ

ಭ್ರಷ್ಟರಿಂದ ರಾಜಕೀಯ ಕಲುಷಿತ

Published On :

ಕೋಲಾರ: ಮಾಜಿ ಮುಖ್ಯಮಂತ್ರಿ ರಾಮಕೃಷ ್ಣಹೆಗಡೆ, ಮಾಜಿ ಸಚಿವ ಸಿ.ಭೈರೇಗೌಡ ಅವರು ದೂರದೃಷ್ಟಿಯುಳ್ಳ ನಾಯಕರು. ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದರು. ಪ್ರಸಕ್ತ ರಾಜಕಾರಣ ಕಲುಷಿತಗೊಳ್ಳಲು ಭ್ರಷ್ಟಾಚಾರವೇ ಪ್ರಮುಖ ಕಾರಣ ಎಂದು ಜನತಾ ಪರಿವಾರದ ಹಿರಿಯ ಮುಖಂಡ, ಮಾಜಿ ಸಚಿವ ಸಿ.ಜಿ.ಆರ್.ಸಿಂಧ್ಯಾ ವಿಷಾದಿಸಿದರು.
ನಗರದ ಹೊರ ವಲಯದ ಶ್ರೀನಿವಾಸಪುರ ರಸ್ತೆಯ ಸಿ.ಭೈರೇಗೌಡ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಿ.ಭೈರೇಗೌಡ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿದ್ದ ಸಿ. ಬೈರೇಗೌಡರ 11ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಿಂದ ಕಲುಷಿತವಾಗಿರುವ ರಾಜಕಾರಣ ಸರಿ ಹೋಗಬೇಕಾದರೆ ರಾಜ್ಯಕ್ಕೆ ಹೆಗಡೆ ಮತ್ತು ಭೈರೇಗೌಡರಂತಹ ಸಮರ್ಥ ನಾಯಕತ್ವ ಬೇಕಾಗಿದೆ ಎಂದು ಪ್ರತಿಪಾದಿಸಿದರು. ಸಿ. ಭೈರೇಗೌಡರ ಪುಣ್ಯ ತಿಥಿಯ ಸಂದರ್ಭದಲ್ಲಿ ತನಗೆ ಸನ್ಮಾನಿಸುತ್ತಿರುವುದು ಜೀವನದ ದೊಡ್ಡ ಸಾಧನೆ ಎಂದು ಹೇಳಿದರು. ಉಪಸ್ಥಿತರಿದ್ದ ಕೃಷಿ ಸಚಿವ ಸಿ. ಕೃಷ್ಣಭೈರೇಗೌಡ ಅವರು, ರಾಮಕೃಷ ್ಣಹೆಗಡೆ ಹಾಗೂ ಸಿ.ಭೈರೇಗೌಡರ ಕಾಲದಲ್ಲಿ ಆಡಳಿತ ಚೆನ್ನಾಗಿ ನಡೆಯುತ್ತಿತ್ತು. ಈಗ ಸಮರ್ಥ ನಾಯಕತ್ವದ ಕೊರತೆ ಎದುರಾಗಿದೆ. ರಾಜ್ಯಕ್ಕೆ ಈಗ ಅಂತಹ ನಾಯಕರು ಅವಶ್ಯವೆನಿಸುತ್ತಿದೆ ಎಂದರು. ಸಿಬಿಐಟಿ ಅಧ್ಯಕ್ಷ,ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಿ.ಕೆ.ರವಿ, ಕಾರ್ಯದರ್ಶಿ ಕೃಷ್ಣಾರೆಡ್‌ಡಿ, ಖಜಾಂಚಿ ಡಾ.ಪ್ರಭಾಕರರೆಡ್‌ಡಿ, ಸಿಬಿಐಟಿ ಕಾಲೇಜಿನ ಪ್ರಾಂಶುಪಾಲ ಗೋವಿಂದಗೌಡ ಇದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು.

ರಾಮಕೃಷ ್ಣಹೆಗಡೆ, ಸಿ. ಭೈರೇಗೌಡರ ಕಾಲದಲ್ಲಿ ಆಡಳಿತ ಚೆನ್ನಾಗಿ ನಡೆಯುತ್ತಿತ್ತು. ಈಗ ಸಮರ್ಥ ನಾಯಕತ್ವದ ಕೊರತೆ ಎದುರಾಗಿದೆ.
 ಸಿ.ಜಿ.ಆರ್.ಸಿಂಧ್ಯಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.