ಕೋಲಾರ

ನೇತ್ರ ತಪಾಸಣಾ ಉಚಿತ ಶಿಬಿರ

Published On :

ಚಿಂತಾಮಣಿ: ಕಣ್ಣುಗಳನ್ನು ಮಣ್ಣುಪಾಲು ಮಾಡದೆ ನೇತ್ರದಾನ ಮಾಡಿ ಪ್ರಾಣದಾತರಾಗಿ ಎಂದು ನಗರಸಭಾ ಸದಸ್ಯ ಕೆ. ಮಂಜುನಾಥ್ ಕರೆ ನೀಡಿದರು.
ನಗರದ ಜೆ.ಜೆ. ಕಾಲೋನಿಯಲ್ಲಿ ತಾಲೂಕು ಆರೋಗ್ಯ ಇಲಾಖೆ ಹಾಗೂ ನಗರ ಸಭೆ ಸಹಯೋಗದೊಂದಿಗೆ ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯಡಿ ಕಣ್ಣಿನ ತಪಾಸಣೆ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಅರಿಯದ ಹಲವರು ಅಪಘಾತ, ಆಕಸ್ಮಿಕ ಸಾವು ಸೇರಿದಂತೆ ಹಲವು ಸಂದರ್ಭಗಳಲ್ಲಿ ಪವಿತ್ರವಾದ ನೇತ್ರವನ್ನು  ದಾನ ಮಾಡದೇ ಮಣ್ಣು ಪಾಲು ಮಾಡುವುದರಿಂದ ಕಣ್ಣಿನ ಮಹತ್ವದ ಬಗ್ಗೆ ನಗರಸಭಾ ಸದಸ್ಯ ಕೆ. ಮಂಜುನಾಥ್ ಅರಿವು ಮೂಡಿಸಿದರು.
ನಂತರ ಕಣ್ಣಿನ ವೈದ್ಯಾಧಿಕಾರಿ ರಾಧಾ ಕೃಷ್ಣ ಕಣ್ಣಿನ ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸಿ ಸೂಕ್ತ ಚಿಕೆತ್ಸೆ ನೀಡಿ ಉಚಿತ ಔಷಧ ನೀಡಿದರು. ಸುಮಾರು 65 ಮಂದಿಗೆ ಕಣ್ಣಿನ ಉಚಿತ ತಪಾಸಣೆ ನಡೆಸಲಾಯಿತು. ಅಂಗನವಾಡಿ ಶಿಕ್ಷಕಿಯರಾದ ಅನಿತಾ ಕುಮಾರಿ, ನಾಗರತ್ನಮ್ಮ ಇದ್ದರು.

ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ನಾರಾಯಣಸ್ವಾಮಿ ಮನವಿ
ಕೆಜಿಎಫ್: ಶಿಕ್ಷಕರ ಕ್ಷೇತ್ರದಲ್ಲಿ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಬಿಜೆಪಿಗೆ ಈ ಬಾರಿಯ ಪದವೀಧರ ಕ್ಷೇತ್ರದ ಮತದಾರರು ಮತ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮನವಿ ಮಾಡಿದರು. ನಗರದಲ್ಲಿ ಏರ್ಪಡಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಎರಡು ವೇತನ ಶ್ರೇಣಿಗಳನ್ನು ಜಾರಿಗೆ ತಂದಿದೆ, 2500 ಪದವಿ ಕಾಲೇಜು ಮತ್ತು 2600 ಪಿಯು ಉಪನ್ಯಾಸಕರನ್ನು ಕಾಯಂಗೊಳಿಸಿದೆ. ಮಕ್ಕಳಿಗೆ ಸೈಕಲ್ ವಿತರಣೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ್ದು ಈ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಯೋಗಿಸ್ವಾವು ಅವರಿಗೆ ಮತ ನೀಡಬೇಕು ಎಂದರು.
ದೇಶದಲ್ಲಿ ಈಗಾಗಲೇ ಸಿಪಿಎಂ, ಸಿಪಿಐನಂತಹ ಪಕ್ಷಗಳು ಅವಶೇಷವಾಗುವ ಸ್ಥಿತಿಯಲ್ಲಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎಂಬ ಎರಡು ಪಕ್ಷಗಳು ಮಾತ್ರ ಇರುತ್ತದೆ. ಜೆಡಿಎಸ್ ಕೂಡ ಅತಿ ಶೀಘ್ರದಲ್ಲಿಯೇ ನಿರ್ಮಾಣವಾಗಲಿದೆ ಎಂದರು. ಸಭೆಯಲ್ಲಿ ಮಾಜಿ ಶಾಸಕ ವೈ. ಸಂಪಂಗಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಸುರೇಶ್‌ನಾರಾಯಣ್, ಮುಖಂಡರಾದ ಮುನಿಸ್ವಾಮಿರೆಡ್ಡಿ, ಶಿಕ್ಷಣ ಇಲಾಖೆಯ ಎಂ. ಸುಬ್ರಮಣಿ, ಕದಿರಪ್ಪ, ಚೌಡಪ್ಪ, ರವಿರೆಡ್ಡಿ, ನಗರಸಭಾ ಸದಸ್ಯ ವಿಜಯಕುಮಾರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.