6 ವರ್ಷದ ನಂತರ ಭರ್ತಿಯಾದ ತಾರಕ ಜಲಾಶಯ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಆ. 3
ತಾಲೂಕಿನಲ್ಲಿ ಹೆಚ್ಚು ಅಣೆಕಟ್ಟೆಗಳನ್ನು ಹೊಂದಿದ್ದರೂ ಪ್ರತಿ ವರ್ಷವು ತುಂಬಿ ಹರಿಯುವ ಜಲಾಶಯ ಮಾತ್ರ ಕಬಿನಿಯಾಗಿರುತ್ತದೆ. ಆದರೆ, ತಾಲೂಕಿನ ತಾರಕ ಜಲಾಶಯವು 6 ವರ್ಷಗಳ ನಂತರ ತುಂಬಿದೆ.
ತಾರಕ ಜಲಾಶಯವು ಭರ್ತಿಯಾಗಲು ನಾಗರಹೊಳೆ, ಸಾರಥಿಹೊಳೆ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಈ ಬಾರಿ ತಾರಕ ಜಲಾಶಯವು ಭರ್ತಿಯಾಗಿದೆ ಎಂದು ಇಇ ಮರಿಸ್ವಾಮಿ ತಿಳಿಸಿದ್ದಾರೆ.
ಜಲಾಶಯದ ನೀರಿನ ಗರಿಷ್ಠ ಮಟ್ಟ 2,425 ಅಡಿಗಳಾಗಿದ್ದು, 2007 ರಲ್ಲಿ ಜಲಾಶಯವು 2423 ಅಡಿಗಳಷ್ಟು ತುಂಬಿತ್ತು.
ಈಗ ಜಲಾಶಯಕ್ಕೆ 1,500 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 2000 ಸಾವಿರ ಕ್ಯುಸೆಕ್ ನೀರನ್ನು ಜಲಾಶಯದಲ್ಲಿ ಹರಿದು ಬಿಡಲಾಗುತ್ತಿದೆ.
ನದಿ ಪಾತ್ರದಲ್ಲಿ ಇರುವ ರೈತರು ತಗ್ಗು ಪ್ರದೇಶದಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಇಇ ಮರಿಸ್ವಾಮಿ ಹಾಗು ತಾರಕ ಎಇಇ ಅಚ್ಚುತ್ ತಿಳಿಸಿದ್ದಾರೆ.
ತಾರಕ ಅಚ್ಚುಕಟ್ಟು ಪ್ರದೇಶಕ್ಕೆ ಈ ಬಾರಿ ಬತ್ತದ ಬೆಳೆಗೆ ನೀರನ್ನು ಬಿಡಲಾಗುವುದು ಹಾಗೂ ಈ ಸಂಬಂಧ ಅಚ್ಚುಕಟ್ಟು ಪ್ರದೇಶದ ರೈತರು ಹಾಗು ಶಾಸಕರ ಜೊತೆ ಚರ್ಚಿಸಿ ನೀರು ಬಿಡುವ ದಿನಾಂಕವನ್ನು ರೈತರಿಗೆ ತಿಳಿಸಲಾಗುವುದೆಂದು ಅಚ್ಚುತ್ ತಿಳಿಸಿದ್ದಾರೆ.
ಪಂಪ್ಹೌಸ್ ಜಲಾವೃತ
ಎಚ್.ಡಿ. ಕೋಟೆ: ಇಲ್ಲಿನ ಕಬಿನಿ ಜಲಾಶಯದಿಂದ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದು, ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರಗೆ ಬಿಡುತ್ತಿರುವುದರಿಂದ ತಾಲೂಕಿನ ಬೊಪ್ಪನಹಳ್ಳಿ ಗ್ರಾಮದ ಹತ್ತಿರವಿರುವ ಪಂಪ್ಹೌಸ್ ನೀರಿನಿಂದ ತುಂಬಿದೆ. ಪಟ್ಟಣಕ್ಕೆ ಸರಬರಾಜಾಗುತ್ತಿರುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಪಪಂ ಮುಖ್ಯಾಧಿಕಾರಿ ಕೊಳವಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

