ಮಲೇಷಿಯಾ ವಿದ್ಯಾರ್ಥಿಗಳ ಭೇಟಿ
ಮೈಸೂರು: ಮಲೇಷಿಯಾದ ಮಲಯ ವಿಶ್ವವಿದ್ಯಾನಿಲಯದಲ್ಲಿ ಭಾಷಾವಿಜ್ಞಾನ ಅಧ್ಯಯನ ನಡೆಸುತ್ತಿರುವ 20 ವಿದ್ಯಾರ್ಥಿಗಳ ತಂಡ ನಗರದ ಹುಣಸೂರು ರಸ್ತೆಯಲ್ಲಿರುವ ಭಾರತೀಯ ಭಾಷಾ ಸಂಸ್ಥೆಗೆ ಭೇಟಿ ನೀಡಿತ್ತು.
ಕೊಯಮತ್ತೂರಿನ ಭಾರತೀಯಾರ್ ವಿವಿಯ ಭಾಷಾವಿಜ್ಞಾನ ಅಧ್ಯಯನ ವಿಭಾಗದಲ್ಲಿ ಏರ್ಪಡಿಸಿರುವ 21 ದಿನಗಳ ಅನ್ವಯಿಕ ಭಾಷಾವಿಜ್ಞಾನ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಲೇಷಿಯಾ ವಿದ್ಯಾರ್ಥಿಗಳು ತರಬೇತಿಯ ಒಂದು ಭಾಗವಾಗಿ ಮೈಸೂರಿಗೆ ಭೇಟಿ ನೀಡಿದ್ದರು. ಸಿಐಐಎಲ್‌ನಲ್ಲಿರುವ ಶೈಕ್ಷಣಿಕ ಘಟಕಗಳಾದ ಗ್ರಂಥಾಲಯ, ಭಾಷಾ ಪ್ರಯೋಗಾಲಯ, ಭಾಷಾ ತಂತ್ರಜ್ಞಾನ, ಸ್ಟುಡಿಯೋ ಪರಿಚಯ ಮಾಡಿಕೊಡಲಾಯಿತು. ಇದೇ ವೇಳೆ ಸಿಐಐಎಲ್ ನಿರ್ದೇಶಕ ಪ್ರೊ. ಅವದೇಶಕುಮಾರ್ ಮಿಶ್ರಾ, ಎನ್‌ಟಿಎಸ್-ಐ ಮುಖ್ಯಾಧಿಕಾರಿ ಡಾ.ಎಂ. ಬಾಲಕುಮಾರ್, ಎಲ್‌ಡಿಸಿ- ಐಎಲ್ ಮುಖ್ಯಾಧಿಕಾರಿ ಡಾ.ಎಲ್. ರಾಮಮೂರ್ತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ನಾಳೆಯಿಂದ ಚಾತುರ್ಮಾಸ್ಯ
ಮೈಸೂರು: ನಗರದ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದಲ್ಲಿ 22ನೇ ಚಾತುರ್ಮಾಸ್ಯ ಸಂಕಲ್ಪ ವ್ರತವು ಜು. 26 ರಿಂದ ಸೆ. 19ರವರೆಗೆ ನಡೆಯಲಿದೆ. ಮಠದ ಶ್ರೀಮದಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿಗಳವರು 22ನೇ ಚಾತುರ್ಮಾಸ್ಯ ಕೈಗೊಳ್ಳುವರು. ಇದರ ಅಂಗವಾಗಿ ಜು. 26ರ ಬೆಳಗ್ಗೆ 11.30ಕ್ಕೆ ಪಂಚಶಾಂತಿ ನಡೆಯುತ್ತದೆ ಎಂದು ಮಠದ ಡಾ. ಎ.ಎಸ್. ವೆಂಕಟನಾಥನ್ ತಿಳಿಸಿದ್ದಾರೆ.
ಮಾಧ್ಯಮದೊಡನೆ ವ್ಯಾಪಾರ
ಭಾರತೀಯ ಕೈಗಾರಿಕೆಗಳ ಒಕ್ಕೂಟವು ಸಾಮಾಜಿಕ ಮಾಧ್ಯಮದೊಡನೆ ವ್ಯಾಪಾರ ಕುರಿತ ಒಂದು ದಿನದ ಕಾರ್ಯಾಗಾರವನ್ನು ಜು. 26ರ ಬೆಳಗ್ಗೆ 10ಕ್ಕೆ ಹೊಟೇಲ್ ಪೈ ವಿಸ್ತಾದಲ್ಲಿ ಏರ್ಪಡಿಸಿದೆ. ಯುಸಿ ಸರ್ವೀಸ್‌ನ ವ್ಯವಸ್ಥಾಪಕ ಪಾಲುದಾರ ಜಿ. ಶಂಕರ ನಾರಾಯಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುವರು. ಸಿಐಐನ ಅಧ್ಯಕ್ಷ ಎಸ್. ನಾಗರಾಜು ಪ್ರಾಸ್ತಾವಿಕ ಭಾಷಣ ಮಾಡುವರು.
ಬಿಜೆಪಿಗೆ ನೇಮಕ
ಮೈಸೂರು: ಕೃಷ್ಣರಾಜ ಕ್ಷೇತ್ರದ 10ನೇ ವಾರ್ಡ್ ಬಿಜೆಪಿ ಅಧ್ಯಕ್ಷರಾಗಿ ವಿದ್ಯಾರಣ್ಯಪುರಂ, 7ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ ನಿವಾಸಿ ಎಸ್. ಕೃಷ್ಣ, 65ನೇ ವಾರ್ಡ್ ಅಧ್ಯಕ್ಷರಾಗಿ ಜೆ. ಹರೀಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕ್ಷೇತ್ರದ ಅಧ್ಯಕ್ಷ ವಿ. ಸೋಮಸುಂದರ ತಿಳಿಸಿದ್ದಾರೆ.
ಧ್ಯಾನ ತರಗತಿ
ಉಪನಿಷತ್ ಯೋಗ ಕೇಂದ್ರ ಟ್ರಸ್ಟ್ ಜು. 26 ರಿಂದ 7 ದಿನಗಳ ಕಾಲ ಪ್ರಾಣಾಯಾಮ ಮತ್ತು ಧ್ಯಾನ ತರಗತಿಯನ್ನು ರಾತ್ರಿ 7.30 ರಿಂದ 8.30ರವರೆಗೆ ಏರ್ಪಡಿಸಿದೆ. ಉಪನಿಷತ್ ಯೋಗ ಕೇಂದ್ರ ಟ್ರಸ್ಟ್, ನಂ. 804, ಇ ಆ್ಯಂಡ್ ಎಫ್ ಬ್ಲಾಕ್, ಮನುಜಪಥ ರಸ್ತೆ, ಎಸ್‌ಬಿಐ ಹಿಂಭಾಗ, ಜ್ಞಾನಗಂಗಾ ವಿದ್ಯಾಪೀಠ ಶಾಲೆ ಹತ್ತಿರ, ಕುವೆಂಪುನಗರ, ಮೈಸೂರು- 23 ಇಲ್ಲಿ ನಡೆಯುತ್ತದೆ. ಹೆಚ್ಚಿನ ಮಾಹಿತಿಗೆ ದೂ. 2541801 ಸಂಪರ್ಕಿಸಬಹುದು.
ವೇದಿಕೆಗೆ ಆಯ್ಕೆ
ಮೈಸೂರು: ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ 2013-14ನೇ ಸಾಲಿನ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ವೇದಿಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪೂಜಾ ಅನುಧರ್, ಕಾರ್ಯದರ್ಶಿಯಾದಿ ಅಶ್ವಿಜಾ, ಕ್ರೀಡಾ ಕಾರ್ಯದರ್ಶಿಯಾಗಿ ರಂಜಿತ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ ಪ್ರೊ. ಪದಕಿ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

