ಮೈಸೂರು

ಭಾರಿ ಮಳೆ, ಮನೆ ಕುಸಿತ

Published On :

ಎಚ್.ಡಿ. ಕೋಟೆ: ತಾಲೂಕಿನ ಅಂತರಸಂತೆ ಹೋಬಳಿಯಲ್ಲಿ ಹಲವಾರು ಗ್ರಾಮಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ  ಮಳೆಯಿಂದಾಗಿ ಮನೆಗಳು ಕುಸಿದಿವೆ. ಅಂತರಸಂತೆ ಗ್ರಾಮಕ್ಕೆ ಸೇರಿದ ಫರಿದಾಭಾನು ಎಂಬವರ ಮನೆ ಕುಸಿದುಬಿದ್ದಿದೆ. ಇದೇ ಗ್ರಾಮದ ಕೆಂಪಾಲಮ್ಮ, ಸೋಗಹಳ್ಳಿ ಗ್ರಾಮದ ಸಣ್ಣಗೋಪಮ್ಮ, ಮಚ್ಚರೆ ಗ್ರಾಮದ ಹೆದ್ದೂರಯ್ಯ, ಯಲಮತ್ತೂರು ಗ್ರಾಮದ ರಾಜಣ್ಣ ಎಂಬವರಿಗೆ ಸೇರಿದ ಮನೆಗಳು ಕುಸಿದಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದಾರೆ.

ಇಂದಿನಿಂದ ರಾಜ್ಯಮಟ್ಟದ ಕ್ರೀಡಾಕೂಟ
ಹುಣಸೂರು: ವಿದ್ಯಾಭಾರತಿ ಮೈಸೂರು ಘಟಕವು ಪಟ್ಟಣದ ಮಾಧವ ವಿದ್ಯಾಸಂಸ್ಥೆ ಹಾಗೂ ಶಾಸ್ತ್ರಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ 19ನೇ ಪ್ರಾಂತೀಯ ಕ್ರೀಡಾಕೂಟದ ಅಂಗವಾಗಿ ಜು. 27 ಮತ್ತು 28ರಂದು ರಾಜ್ಯ ಮಟ್ಟದ ಥ್ರೋಬಾಲ್, ವಾಲಿಬಾಲ್ ಕ್ರೀಡಾಕೂಟವನ್ನು ಪಟ್ಟಣದ ಶಾಸ್ತ್ರಿ ವಿದ್ಯಾ ಸಂಸ್ಥೆಯ ಅವರಣದಲ್ಲಿ ಏರ್ಪಡಿಸಿದೆ. ಜು.27ರ ಬೆಳಗ್ಗೆ 9ಕ್ಕೆ ಜಾನಪದ ವಿದ್ವಾಂಸ ಆಲೂರು ನಾಗಪ್ಪ ಕ್ರೀಡಾಕೂಟ ಉದ್ಘಾಟಿಸಲಿದ್ದು, ಶಾಸಕ ಎಚ್.ಪಿ. ಮಂಜುನಾಥ್ ಅಧ್ಯಕ್ಷತೆ ವಹಿಸುವರು ಎಂದು ವಿದ್ಯಾಭಾರತಿ ಕರ್ನಾಟಕ ವಿಭಾಗ ಪ್ರಮುಖ್ ರಘುವೀರ್‌ಜೀ ತಿಳಿಸಿದ್ದಾರೆ.  ಕ್ರೀಡಾಕೂಟವನ್ನು ಬಾಲಕ ವರ್ಗ, ಕಿಶೋರ ವರ್ಗ ಮತ್ತು ತರುಣ ವರ್ಗವಾಗಿ ವಿಂಗಡಿಸಲಾಗಿದ್ದು, ಬೆಂಗಳೂರು, ಗುಲ್ಬರ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 40ಕ್ಕೂ ಹೆಚ್ಚು ತಂಡ ಆಗಮಿಸಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.