ಗೋವಿಂದರಾಜು ಪುನರಾಯ್ಕೆ
ಮೈಸೂರು: 2013-2018ನೇ ಸಾಲಿಗೆ ನಡೆದ ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಚುನಾವಣೆಯಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ (ಸರ್ಕಾರಿ ಐಟಿಐ) ಸ್ಪರ್ಧಿಸಿದ್ದ ಕಿರಿಯ ತರಬೇತಿ ಅಧಿಕಾರಿ ಗೋವಿಂದರಾಜು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ನಾಳೆ ರಾಮಮೂರ್ತಿ ಒಂದು ನೆನಪು
ಕರ್ನಾಟಕ ಕಾವಲುಪಡೆ ವತಿಯಿಂದ ಕನ್ನಡಪರ ಹೋರಾಟಗಾರ ಮ. ರಾಮಮೂರ್ತಿ- ಒಂದು ನೆನಪು ಕಾರ್ಯಕ್ರಮವನ್ನು ಜು.28ರ ಬೆಳಗ್ಗೆ 10.30ಕ್ಕೆ ನಗರದ ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಲಾಗಿದೆ.
ಚಿತ್ರಕಲಾ ಸ್ಪರ್ಧೆ ಮುಂದೂಡಿಕೆ
ಯೂನಿವರ್ಸಲ್ ಅಕಾಡೆಮಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ಜು.28 ರಂದು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯನ್ನು ಆ.4ರ ಬೆಳಗ್ಗೆ 10.30ಕ್ಕೆ ಮುಂದೂಡಲಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಸಿದ್ಧ ಸಮಾಧಿ ಯೋಗ ಶಿಬಿರ
ಕುವೆಂಪುನಗರದಲ್ಲಿರುವ ಋಷಿ ಸಾಂಸ್ಕೃತಿಕ ವಿದ್ಯಾ ಕೇಂದ್ರದಲ್ಲಿ ಜು.28 ರಿಂದ 14 ದಿನಗಳ ಸಿದ್ಧ ಸಮಾಧಿ ಯೋಗ ಶಿಬಿರ ಏರ್ಪಡಿಸಲಾಗಿದ್ದು, ಮೊ. 94484- 58050 ಸಂಪರ್ಕಿಸಬಹುದು.
ಬ್ರಾಹ್ಮಣ ಸಂಘದ ವಾರ್ಷಿಕೋತ್ಸವ
ಜೆ.ಪಿ. ನಗರ ಬ್ರಾಹ್ಮಣ ಸಂಘದ 17ನೇ ವಾರ್ಷಿಕೋತ್ಸವವನ್ನು ಜು.28ರ ಮಧ್ಯಾಹ್ನ 3ಕ್ಕೆ ಜೆ.ಪಿ. ನಗರದ ಚಾಣಕ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದು, ಸಚಿವ ದಿನೇಶ್ ಗುಂಡೂರಾವ್, ಶಾಸಕ ಗೋ. ಮಧುಸೂದನ್ ಭಾಗವಹಿಸುವರು. 80 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 60 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಡಾ. ಶಶಿಧರ ಕೋಟೆ ಅವರಿಂದ ಸಂಗೀತ ಸೌರಭ ಕಾರ್ಯಕ್ರಮ ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

