ಕಾಡುಕೋಣದ ಮೇಲೆ ಹುಲಿ ದಾಳಿ
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ನೀರು ಕುಡಿಯಲು ಬಂದ ಕಾಡುಕೋಣದ ಮೇಲೆ ಹುಲಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಬಿಲ್ಲೇನ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಹುಲಿ ದಾಳಿಯಿಂದ ಕಾಡುಕೋಣದ ಬಲಬಾಗದ ಕಿವಿ ಬಲ ಮುಂಗಾಲಿನ ತೊಡೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರವಾದ ಪೆಟ್ಟುಬಿದ್ದಿದೆ. ಅರಣ್ಯ ರಕ್ಷಕ ಯೋಗೇಶ್, ಅರಣ್ಯ ವೀಕ್ಷಕರಾದ ರಾಜಶೇಖರ, ಜಯರವಿ ಇವರು ಎಂದಿನಂತೆ ರಾತ್ರಿ ಗಸ್ತು ಮುಗಿಸಿ ಸಣ್ಣ ಗದ್ದೆ ಕ್ಯಾಂಪ್ಗೆ ಹಿಂದಿರುವಾಗ ದಾರಿ ಮಧ್ಯೆ ಸಾವು ಬದುಕಿನೊಡನೆ ಹೋರಾಡುತ್ತಿರುವ ಕಾಡುಕೋಣವನ್ನು ಗಮನಿಸಿ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.
ಈಶ್ವರನಗೌಡನಹಳ್ಳಿಯಲ್ಲಿ ವಿಜಯೋತ್ಸವ
ಕ.ಪ್ರ.ವಾರ್ತೆ ಟಿ.ನರಸೀಪುರ ಮೇ 19
ವರುಣ ಶಾಸಕ ಸಿದ್ದರಾಮಯ್ಯ ಅವರು ಸಿಎಂ ಆಗಿ, ಟಿ. ನರಸೀಪುರ ಶಾಸಕ ಡಾ.ಎಚ್.ಸಿ. ಮಹದೇವಪ್ಪ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಗ್ರಾಮಸ್ಥರು ವಿಜಯೋತ್ಸವ ಆಚರಿಸಿದರು. ವರುಣ ಕ್ಷೇತ್ರದ ಈಶ್ವರಗೌಡನಹಳ್ಳಿಯಲ್ಲಿ ಬೃಹತ್ ಕಟೌಟ್ಗೆ ಹಾರತುರಾಯಿಗಳನ್ನು ಹಾಕಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಮುಖಂಡ ಜಯರಾಮು, ಕೃಷ್ಣ, ವಾಟರ್ಮನ್ ಶಿವಣ್ಣ, ರಾಜು, ಮಹೇಶ್, ಸ್ವಾಮಿ, ನಿಂಗಯ್ಯ, ದೊರೆಸ್ವಾಮಿಗೌಡ, ನಂಜುಂಡೇಗೌಡ, ಪುಟ್ಟಸ್ವಾಮಿ, ಸುರೇಶ್, ಮಹದೇವ, ಕುಮಾರ ಇದ್ದರು.
ವಿದ್ಯೋದಯ ಕಾಲೇಜಿಗೆ ಶೇ. 83 ಫಲಿತಾಂಶ
ಕ.ಪ್ರ.ವಾರ್ತೆ ಟಿ.ನರಸೀಪುರ ಮೇ 19
ಪಟ್ಟಣದ ವಿದ್ಯೋದಯ ಬಾಲಿಕ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 83ರಷ್ಟು ಫಲಿತಾಂಶ ಲಭ್ಯವಾಗಿದೆ.
ಪರೀಕ್ಷೆಗೆ ಕುಳಿತಿದ್ದ 271 ವಿದ್ಯಾರ್ಥಿನಿಯರ ಪೈಕಿ 224 ಮಂದಿ ಉತ್ತೀರ್ಣರಾಗಿದ್ದು, ಐವರು ಅತ್ಯುನ್ನತ ಶ್ರೇಣಿಯಲ್ಲಿ, 126 ವಿದ್ಯಾರ್ಥಿಗಳು ಪ್ರಥಮ ದರ್ಜೆ, 58 ದ್ವಿತೀಯ ದರ್ಜೆ ಹಾಗೂ 40 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿಯರಾದ ಪಿ. ದುರ್ಗಶ್ರೀ 548 (ಶೇ.91.33), ಎಂ.ಎಂ. ಶ್ರುತಿ 518 (ಶೇ. 86.33), ಎನ್. ಸುಕನ್ಯ 514 (ಶೇ. 85.66), ಜೆ. ಕಾವ್ಯ 527 (ಶೇ. 85.66) ಹಾಗೂ ಬಿ.ರಾಜೇಶ್ವರಿ 525 (ಶೇ. 87.05) ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲ ಕುಮಾರಸ್ವಾಮಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

