ವ್ಯಕ್ತಿ ಬಂಧನ: 4 ವಾಹನ ವಶ
ಕ.ಪ್ರ.ವಾರ್ತೆ ಮೈಸೂರು ಮೇ 26
ಜಯಲಕ್ಷ್ಮೀಪುರಂ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ, 1.60 ಲಕ್ಷ ಮೌಲ್ಯದ 4 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಕೊತ್ತೂರು ಬಳಿಯ ಮಣ್ಣಕಾನೂರು ನಿವಾಸಿ ಎಂ.ಆರ್. ಜೀವನ್ (23) ಬಂಧಿತ ಆರೋಪಿ. ಬೋಗಾದಿ ಕಡೆಯಿಂದ ಮಾನಸಗಂಗೋತ್ರಿಯ ಪಿಜಿ ಹಾಸ್ಟೆಲ್ ಕಡೆಗೆ ಗುರುವಾರ ಮಧ್ಯರಾತ್ರಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಈತನನ್ನು ಪೊಲೀಸರು ನಿಲ್ಲಿಸಿ ವಿಚಾರಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ನಂತರ ಬಂಧಿತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆತ ನೀಡಿದ ಮಾಹಿತಿ ಮೇರೆಗೆ 1.60 ಲಕ್ಷ ಮೌಲ್ಯದ 4 ದ್ವಿಚಕ್ರವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎನ್.ಆರ್. ಉಪ ವಿಭಾಗದ ಎಸಿಪಿ ಟಿ.ಸಿ ನಾಗರಾಜು ಮಾರ್ಗದರ್ಶನದಲ್ಲಿ ಜಯಲಕ್ಷ್ಮೀಪುರಂ ಠಾಣೆ ಇನ್ಸ್ಪೆಕ್ಟರ್ ಎನ್.ಜಿ. ಕೃಷ್ಣಪ್ಪ, ಎಸ್ಐ ರಘುಪ್ರಸಾದ್ ಮತ್ತು ಸಿಬ್ಬಂದಿ ಮಹದೇವನಾಯ್ಕ, ರಾಮಕೃಷ್ಣ, ಲಕ್ಷ್ಮೀನಾರಾಯಣ, ಮಾರುತಿ. ಚಂದ್ರನಾಯ್ಕ, ಪವನ್, ಲೋಕೇಶ್, ಸಂತೋಷ್ ಈ ಪತ್ತೆ ಕಾರ್ಯದಲ್ಲಿ ಶ್ರಮಿಸಿದ್ದಾರೆ.
ಬಾಲಕ ಸೇರಿ ಇಬ್ಬರು ನಾಪತ್ತೆ
ಮೈಸೂರು: ಎನ್.ಆರ್. ಠಾಣೆ ವ್ಯಾಪ್ತಿಯ ನಿವಾಸಿ ಶಿವಕುಮಾರ ಎಂಬವರ ಪುತ್ರಿ ಸೌಮ್ಯ (18) ನಾಪತ್ತೆಯಾಗಿದ್ದಾರೆ.
ಚಹರೆ- 5 ಅಡಿ ಎತ್ತರ, ಸಾಧಾರಣ ಶರೀರ, ಬಿಳಿ ಮೈಬಣ್ಣ, ದುಂಡು ಮುಖ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418312 ಸಂಪರ್ಕಿಸಲು ಎನ್.ಆರ್. ಠಾಣೆ ಪೊಲೀಸರು ಕೋರಿದ್ದಾರೆ.
ಬಾಲಕ ನಾಪತ್ತೆ
ಮಂಡಿ ಠಾಣೆ ವ್ಯಾಪ್ತಿಯ ನಿವಾಸಿ ರೆಹಾನ್ ಎಂಬವರ ಅಕ್ಕನ ಪುತ್ರ ಮುತಾಹಿರ್ ಅಹಮದ್ (16) ಗುರುವಾರ ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418313 ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.
ಭಿಕ್ಷೆ ಬೇಡುತ್ತಿದ್ದ ಮಹಿಳೆ ಕೊಲೆ
ಮೈಸೂರು: ಎನ್.ಆರ್. ಮೊಹಲ್ಲಾ ರಬ್ಬಾನಿ ಮಸೀದಿ ಬಳಿ ಭಿಕ್ಷೆ ಬೇಡುತ್ತಿದ್ದ ಪಾರ್ವತಮ್ಮ (65) ಎಂಬವರು ಫೆ.28 ರಂದು ಕೊಲೆಯಾಗಿದ್ದು, ಇವರ ವಾರಸುದಾರರು ಇನ್ನೂ ಪತ್ತೆಯಾಗಿಲ್ಲ. ಚಹರೆ- ಎಣ್ಣೆಗೆಂಪು ಮೈಬಣ್ಣ, ದಢಕಾಯ ಶರೀರ, ಪಿಂಕ್ ಮಾಸಲು ಬಣ್ಣದ ಸೀರೆ ಧರಿಸಿದ್ದಾರೆ. ಎಡಮಂಡಿ ಬಳಿ ಹಳೆಯ ಗಾಯದ ಗುರುತಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418312 ಸಂಪರ್ಕಿಲು ಎನ್.ಆರ್. ಠಾಣೆ ಪೊಲೀಸರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

