ಮೂರು ದಿನಗಳ ವೈನ್ ಉತ್ಸವ
ಮೈಸೂರು:ಆರೋಗ್ಯಕರ ವೈನ್ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ನಗರದ ತಾಳೆ ಬೆಳೆ ಯೋಜನೆ ಕಚೇರಿ ಆವರಣದಲ್ಲಿ ಏರ್ಪಡಿಸಿರುವ ಮೂರು ದಿನಗಳ ಮೈಸೂರು ದ್ರಾಕ್ಷಾರಸ(ವೈನ್) ಉತ್ಸವ ಶುಕ್ರವಾರ ಆರಂಭವಾಯಿತು.
ದ್ರಾಕ್ಷಾರಸ ಮಂಡಳಿ ಮತ್ತು ತೋಟಗಾರಿಕೆ ಇಲಾಖೆಯು ಮೂರು ದಿನಗಳ ಕಾಲ ಮಿತವಾದ ವೈನ್ ಸೇವನೆಯಿಂದಾಗುವ ಲಾಭಗಳ ಬಗೆಗಿನ ತರಬೇತಿ, ಮಾಹಿತಿ, ಸ್ವಾದಿಷ್ಟ ಆಹಾರದ ಜತೆಗೆ ವೈನ್ ಸೇವನೆಯಿಂದ ಬಗೆಗಿನ ಮಾಹಿತಿ, ವೈನ್ ಮೆಚ್ಚುಗೆ ಮತ್ತು ಗ್ರಾಹಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಾಗೆ ವೈನ್ ಸ್ವಾದನೆಗೆ ವೈನ್ ತಯಾರಕರು ಹಾಗೂ ಸಾರ್ವಜನಿಕರ ನಡುವೆ ಪರಸ್ಪರ ವಿಚಾರ ವಿನಿಮಯಯದ ಅಕಾಶವನ್ನು ಕಲ್ಪಿಸಲಾಗಿದೆ. ಉತ್ಸವದಲ್ಲಿ ಕರ್ನಾಟಕ ರಾಜ್ಯದ ಹೆರಿಟೇಜ್ ಗ್ರೇಪ್ ವೈನರಿ ಪ್ರೈ.ಲಿ., ಎಸ್ಡಿಯು ವೈನರಿ ಪ್ರೈ.ಲಿ., ಗ್ರೋವರ್ ವೈನಾರ್ಡ್ಸ್, ಎಲೈಟ್ ವಿಂಟೇಜ್ ವೈನರಿ ಇಂಡಿಯಾ ಪ್ರೈ.ಲಿ. ಕೃಷ್ಣಮೃಗ ವೈನರಿ, ಕಿಣ್ವ ವೈನ್ಸ್, ಲಿ ಅಂಬ್ರೋಸಿ ಬೇರೀಸ್ ವೈನ್, ಸೂರ್ಯ ಡಿವೈನ್, ಮಹಾರಾಷ್ಟ್ರದ ಸುಲಾ ವೈನಾರ್ಡ್ಸ್, ನೈನ್ ಹಿಲ್ಸ್, ಸೀಗ್ರಿಮ್ಸ್, ಗೋವಾದ ಬಿಗ್ ಬನ್ಯಾನ್ ಪ್ರೀಮಿಯಂ ವೈನ್ ಮಳಿಗೆಗಳು 40ಕ್ಕೂ ಹೆಚ್ಚು ಬಗೆಯ ವೈನ್ಗಳನ್ನು ಪ್ರದರ್ಶನಕ್ಕಿಟ್ಟಿವೆ. ಸದರಿ ಉತ್ಸವಕ್ಕೆ ಮೇಯರ್ ಎನ್.ಎಂ. ರಾಜೇಶ್ವರಿ, ಶಾಸಕ ತನ್ವೀರ್ ಸೇಠ್ ಚಾಲನೆ ನೀಡಿದರು.
ನಂತರ ತನ್ವೀರ್ ಸೇಠ್ ಮಾತನಾಡಿ, ತಂಬಾಕು ಬೆಳೆಯನ್ನು ನಿಷೇಧಿಸುತ್ತಿರುವುದರಿಂದ ರೈತರು ತಂಬಾಕಿಗೆ ಪರ್ಯಾಯಾಗಿ ದ್ರಾಕ್ಷಿಯನ್ನು ಬೆಳೆಯಲು ಇಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ವೈನ್ ಸೇವನೆ ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ದ್ರಾಕ್ಷಿ ಬೆಳೆಯನ್ನು ಬೆಳೆಯಲು ರೈತರು ಮುಂದಾಗಬೇಕು ಎಂದರು. ಕರ್ನಾಟಕ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ಕೃಷ್ಣ ಮಾತನಾಡಿ, ವೈನ್ ಸೇವನೆ ಆರೋಗ್ಯಕ್ಕೆ ಹಾನಿಕರವಲ್ಲ. ಹೃದಯಾಘಾತದಿಂದ ಪಾರಾಗುವಿಕೆ, ಜೀರ್ಣ ಪ್ರಕ್ರಿಯೆ, ಅಲ್ಸರ್ ತಡೆಗಟ್ಟುವಿಕೆಗೆ ವೈನ್ ಪೂರಕವಾದ ಆಹಾರ. ರೈತರ ಹಿತದೃಷ್ಟಿಯಿಂದಲೂ ಇದನ್ನು ಹೆಚ್ಚಾಗಿ ಬಳಸಬಹುದಾಗಿದೆ. ಕರ್ನಾಟಕದಲ್ಲಿ ಪ್ರಸ್ತುತ 41 ಲಕ್ಷ ಲೀ. ವೈನ್ ತಯಾರಿಸಲಾಗುತ್ತಿದೆ. ಇದರಲ್ಲಿ ಆಲ್ಕೋಹಾಲ್ನ ಅಂಶ ಶೇ.8ರಿಂದ 16ರ ತನಕ ಇದ್ದು, ಇದನ್ನು ನೈಸರ್ಗಿಕವಾಗಿ ತಯಾರಿಸಲಾಗಿದೆ. ಮಧುಮೇಹಿಗಳೂ ಇದನ್ನು ಸೇವಿಸಬಹುದು ಎಂದು ಮಾಹಿತಿ ನೀಡಿದರು.
ವೈನ್ ಸೇವನೆಯ ಲಾಭಗಳು
ವೈನ್ನಲ್ಲಿ ಅಡಗಿರುವ ಸ್ವಾಭಾವಿಕ ಆಂಟಿ ಆಕ್ಸಿಡೆಂಟ್ನಿಂದಾಗಿ ಸಾಮಾನ್ಯ ಆಯುಷ್ಯ ವೃದ್ಧಿಯಾಗುತ್ತದೆ. ವೈನ್ ಸೇವನೆಯಿಂದ ಜೀರ್ಣಕಾರಕ ರಸಗಳ ನಿರ್ಮಾಣ ಹೆಚ್ಚಾಗುತ್ತದೆ. ಆಹಾರವು ಉತ್ತಮವಾಗಿ ಜೀರ್ಣವಾಗುತ್ತದೆ ಮತ್ತು ಹಸಿವೂ ಕೂಡ ಹೆಚ್ಚಾಗುತ್ತದೆ.
ವೈನ್ ಸೇವನೆಯಿಂದ ರಕ್ತ ಸಂಚಾರ ಪ್ರಕ್ರಿಯೆಯಲ್ಲಿ ಸುಧಾರಣೆ ಉಂಟಾಗಿ ಕಾರ್ಯಕ್ಷಮತೆ ವೃದ್ಧಿಗೊಳ್ಳುತ್ತದೆ. ಮಾನಸಿಕ ಜಂಜಾಟಗಳಿಂದ ಮುಕ್ತಿ ದೊರೆಯುತ್ತದೆ.
ಥೈರಾಯ್ಡಿನ ಕ್ಯಾನ್ಸರ್, ಗಡ್ಡೆಗಳು, ವೃದ್ಧಾಪ್ಯ, ಪ್ರೋಸ್ಟೆಟ್, ಪ್ಯಾಂಕ್ರಿಯಾಟಿಕ್, ಗ್ಯಾಸ್ಟ್ರಿಕ್ ಮುಂತಾದ ಕಾಯಿಲೆಗಳಿಂದ ಮುಕ್ತಿ ದೊರೆಯುತ್ತದೆ. ಮೂತ್ರ ಜನಕಾಂಗಗಳ ಕಾರ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
ವೈನ್ನಲ್ಲಿ ಅಡಗಿರುವ ಗುಣಕಾರಿ ತತ್ವಗಳಿಂದಾಗಿ ರಕ್ತದಲ್ಲಿನ ಕೊಬ್ಬಿನಾಂಶದ ಪ್ರಮಾಣ ಕಡಿಮೆಯಾಗುತ್ತದೆ. ಆದ ಕಾರಣ ಹೃದಯ ತೊಂದರೆ, ರಕ್ತದೊತ್ತಡ ಮತ್ತು ಥ್ರೋಂಬೋಸಿಸ್ನಂತಹ ರೋಗಗಳು ಉಂಟಾಗುವ ಸಂಭವ ಕಡಿಮೆಯಾಗುತ್ತದೆ. ಇದೇ ತರಹ ಕ್ರೋಮಿನ್ಯುಕ್ತ ತತ್ವಗಳಿಂದಾಗಿ ಮಧುಮೇಹ ನಿವಾರಣೆಯಲ್ಲಿ ಸಹಾಯ ಉಂಟಾಗುತ್ತದೆ.
ಕ್ಯಾನ್ಸರ್, ಹೃದ್ರೋಗ ನಿವಾರಣೆಗೆ ದ್ರಾಕ್ಷಿ ಹಣ್ಣು ಹೆಚ್ಚು ಒಳ್ಳೆಯದು. ದ್ರಾಕ್ಷಿ ಹಣ್ಣಿನಲ್ಲಿ 20 ರೀತಿಯ ಆಂಟಿ ಆಕ್ಸಿಡೆಂಟ್ ಲಭಿಸುತ್ತದೆ. ದ್ರಾಕ್ಷಿ ರಸವನ್ನು ಕುಡಿಯುವದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.
ವೈನ್ನಲ್ಲಿಯ ಅಂತರ್ಗತ ಕ್ಯಾಲ್ಸಿಯಂನಿಂದಾಗಿ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

