ಮೈಸೂರು

ಇಬ್ಬರು ಅಪರಿಚಿತರ ಸಾವು

Published On :

ಮೈಸೂರು: ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಇಬ್ಬರು ಅಪರಿಚಿತ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಕೆ.ಆರ್. ಆಸ್ಪತ್ರೆ ಆವರಣದಲ್ಲಿ 40 ವರ್ಷದ ಅಪರಿಚಿತ ವ್ಯಕ್ತಿ ಯಾವುದೋ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಚಹರೆ- 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗುಂಡು ಮುಖ, ಗೋದಿ ಮೈಬಣ್ಣ ಹೊಂದಿದ್ದಾರೆ. ಚೆಲುವಾಂಬ ಆಸ್ಪತ್ರೆ ಗೇಟ್ ಬಳಿಯ ಫುಟ್‌ಪಾತ್‌ನಲ್ಲಿ(ಇರ್ವಿನ್ ರಸ್ತೆ) 50 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಚಹರೆ- 5.6 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಣಕಲು ದೇಹ, ಹಣೆಯ ಬಲಭಾಗದಲ್ಲಿ ಕಪ್ಪು ಕಾರೆ ಹರಳಿದೆ. ನಶ್ಯ ಬಣ್ಣದ ಚೆಕ್ಸ್ ಶರ್ಟ್, ಕಪ್ಪು ಗೆರೆಯುಳ್ಳ ಪ್ಯಾಂಟ್ ಧರಿಸಿದ್ದಾರೆ. ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಿ.

ವ್ಯಕ್ತಿ ನಾಪತ್ತೆ
ಮೈಸೂರು:
ವಿಜಯನಗರ ಠಾಣೆ ವ್ಯಾಪ್ತಿ ನಿವಾಸಿ ಸೋಮಾಚಾರಿ ಎಂಬವರ ಪುತ್ರ ವಸಂತಕುಮಾರ(38) ನಾಪತ್ತೆಯಾಗಿದ್ದಾರೆ. ಇವರು ಸೆ.1 ರಂದು ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದರು. ಚಹರೆ- 5.9 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418117, 317 ಸಂಪರ್ಕಿಸಬಹುದು.

ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಚಾಲನೆ
ಮೈಸೂರು:
ಮೈಸೂರು ಹ್ಯಾಂಡ್‌ಬಾಲ್ ಸಂಘವು ಹಲವು ಸಂಸ್ಥೆಗಳ ಜತೆಗೂಡಿ ಜೆ.ಪಿ. ನಗರದ ಪುಟ್ಟರಾಜ ಗವಾಯಿ ಕ್ರೀಡಾ ಸಮುಚ್ಛಯದಲ್ಲಿ ಏರ್ಪಡಿಸಿರುವ ಎರಡು ದಿನಗಳ ಎಟಿಎಂಇ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್ ಪಂದ್ಯಾವಳಿಗೆ ಶಾಸಕ ಎಂ.ಕೆ. ಸೋಮಶೇಖರ್ ಚಾಲನೆ ನೀಡಿದರು. ನಂತರ ಮಾತನಾಡಿದರು. ನಂತರ ನಡೆದ ಪಂದ್ಯಾವಳಿಯಲ್ಲಿ ಎಟಿಎಂಇ ಎ ತಂಡವು ರಾಮಕೃಷ್ಣ ಆಶ್ರಮ ತಂಡದ ವಿರುದ್ಧ 18-13 ಗೋಲುಗಳನ್ನು ಬಾರಿ 5 ಗೋಲುಗಳ ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು. ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ಉಪಾಧ್ಯಕ್ಷ ಕೆ. ಶಿವಶಂಕರ್, ಟ್ರಸ್ಟಿ ಆರ್. ವೀರೇಶ್, ಆಯೋಜಕ ಅಯ್ಯಣ್ಣ, ಸೇಂದಿಲ್‌ಕುಮಾರ್ ಟೆಕ್ಸ್‌ಟೈಲ್ಸ್ ಸಂಸ್ಥೆಯ ಪಿ. ಕುಮಾರಸನ್, ಪಾಲಿಕೆ ಸದಸ್ಯ ಬಿ.ಎಲ್. ಭೈರಪ್ಪ, ವೀರೇಂದ್ರಕುಮಾರ್, ನವೀನ್ ಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.