ವಿಶೇಷ ಚಿಕಿತ್ಸಾ ಶಿಬಿರ
ಮೈಸೂರು: ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅ.21ರಿಂದ 31ರವರೆಗೆ ಮಧುಮೇಹ ಹಾಗೂ ರಕ್ತಹೀನತೆ ಕಾಯಿಲೆಗೆ ತಪಸಾಣೆ ಶಿಬಿರ ಏರ್ಪಡಿಸಿದ್ದು, ಮೈಸೂರು ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಪ್ರಾಂಶುಪಾಲ ಸತ್ಯನಾರಾಯಣ ಭಟ್ ತಿಳಿಸಿದ್ದಾರೆ. ಮೊ. 96638 32468 ಸಂಪರ್ಕಿಸಬಹುದು.
ಉಪನಿಷತ್ ಪ್ರವಚನ
ಮೈಸೂರು: ಚಿನ್ಮಯ ಮಿಷನ್ ಮತ್ತು ಶ್ರೀ ರಮಣ ಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಅ.20ರಿಂದ 27ರವರೆಗೆ ಪ್ರತಿದಿನ ಸಂಜೆ 6.30ರಿಂದ 8ರವರೆಗೆ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀ ರಮಣ ಜ್ಞಾನ ಕೇಂದ್ರದಲ್ಲಿ ಹುಬ್ಬಳ್ಳಿ ಕೇಂದ್ರದ ಸ್ವಾಮಿ ಗಹನಾನಂದ ಅವರಿಂದ ಉಪನಿಷತ್ ಪ್ರವಚನ ನಡೆಯಲಿದೆ. ಪ್ರತಿದಿನ ಸಂಜೆ 6 ರಿಂದ 6.30 ರವರೆಗೆ ವಿಷ್ಣುಸಹಸ್ರನಾಮ ಸಾಮೂಹಿಕ ಪಾರಾಯಣ ಮಾಡಲಾಗುವುದು.
ಆರ್ಟ್ ಆಫ್ ಲೀವಿಂಗ್ ಶಿಬಿರ
ಮೈಸೂರು: ವಿಜಯನಗರದ ವ್ಯಕ್ತಿ ವಿಕಾಸ ಕೇಂದ್ರದ ವತಿಯಿಂದ ಅ.22ರಿಂದ 27ರವರೆಗೆ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲೀವಿಂಗ್ ಶಿಬಿರ ಹಮ್ಮಿಕೊಂಡಿದೆ. ವಿವರಕ್ಕೆ ಮೊ. 98459 63387 ಸಂಪರ್ಕಿಸಬಹುದು.
ನೋಂದಣಿ
ಮೈಸೂರು: ಚಾಮುಂಡಿಪುರಂನ ವಿಪ್ರ ಪರಿವಾರದ ವತಿಯಿಂದ ಎ ಟು ಝಡ್ ಬ್ರಾಹ್ಮಿನ್ಸ್ ಕೈಪಿಡಿಯ ನೋಂದಣಿ ಪ್ರಾರಂಭವಾಗಿದ್ದು, ವಿವಿಧ ಕ್ಷೇತ್ರದ ಆಸಕ್ತ ಬ್ರಾಹ್ಮಣರು ನೋಂದಾಯಿಸಿಕೊಳ್ಳಬಹುದು. ವಿವರಕ್ಕೆ ಮೊ. 98451 33927 ಸಂಪರ್ಕಿಸುವಂತೆ ಸಂಚಾಲಕ ವಿನಯ್ ಕಣಗಾಲ್ ತಿಳಿಸಿದ್ದಾರೆ.
ಫುಡ್ ಪ್ಲಾಜಾಗೆ ಟೋಲ್ ಫ್ರೀ ಇಲ್ಲ
ಮೈಸೂರು: ಮೈಸೂರು ರೈಲು ನಿಲ್ದಾಣದಲ್ಲಿ ಆರಂಭಿಸಿರುವ ಫುಡ್ ಫ್ಲಾಜಾದಲ್ಲಿ ಟೋಲ್ ಫ್ರೀ ವ್ಯವಸ್ಥೆ ಇಲ್ಲ ಎಂದು ವಿಭಾಗೀಯ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಕೆ. ಅನಿಲ್ಕುಮಾರ್ ತಿಳಿಸಿದ್ದಾರೆ. ಟೋಲ್ ಫ್ರೀ ನಂಬರ್ ಚಾಲನೆಗೊಳಿಸಿ ಗ್ರಾಹಕರಿಗೆ ಆಹಾರದ ಸೇವೆ ಒದಗಿಸುವ ಗುರಿ ಇದೆಯೆ ಹೊರತು, ಪ್ರಸ್ತುತ ಸಂದರ್ಭದಲ್ಲಿ ಈ ವ್ಯವಸ್ಥೆ ಚಾಲ್ತಿಯಲ್ಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸ್ತನ ಕ್ಯಾನ್ಸರ್ ಅರಿವು ಕಾರ್ಯಕ್ರಮ
ಮೈಸೂರು: ಕುವೆಂಪುನಗರದಲ್ಲಿರುವ ಅಪೊಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಅ.21ರಿಂದ 31ರವರೆಗೆ ಸ್ತನ ಕ್ಯಾನ್ಸರ್ ಅರಿವು ಕಾರ್ಯಕ್ರಮ ಆಯೋಜಿಸಿದ್ದು, ಗಂಥಿತಜ್ಞ ಡಾ. ಸಿ.ಬಿ. ಅವಿನಾಶ್ ನಡೆಸಿಕೊಡುವರು. ದೂ. 0821- 2568888 ಸಂಪರ್ಕಿಸಬಹುದು.
ಶೀಘ್ರ ಲಿಪಿಕಾರ ಹುದ್ದೆಗೆ ಅರ್ಜಿ
ಮೈಸೂರು: ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಶೀಘ್ರ ಲಿಪಿಕಾರ ಹುದ್ದೆಗಳಿಗೆ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಅ.24ರೊಳಗೆ ಡಿಡಿಠ///ಡಡ್ಛ್ಟಟಿಟ್ಝಟಿಜ.ಟ್ಝ್ಛಿ.್ಝಟಿ ಅಥವಾ ಢಿಢಿಢಿ.ಡಡ್ಛ್ಟಟಿಟ್ಝಟಿಜ2.್ಜ್ಟಢ.್ಝಟಿ ವೆಬ್ಸೈಟ್ನಲ್ಲಿ ಅಥವಾ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿವಿ, ಮೈಸೂರು- ಇಲ್ಲಿ ಅರ್ಜಿ ಸಲ್ಲಿಸಬಹುದು. ದೂ. 0821- 2516844, ಮೊ. 94496 86641 ಸಂಪರ್ಕಿಸಬಹುದು.
23ರಂದು ವಿಚಾರ ಸಂಕಿರಣ
ಮೈಸೂರು: ವಿಜಯನಗರದ ಮೊದಲನೇ ಹಂತದ ಕರ್ನಾಟಕ ಬುದ್ಧ ಭೂಮಿ ಬಳಗ ಹಾಗೂ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದೊಂದಿಗೆ ಅ.23ರಂದು ಸಂಸ್ಥೆಯ ಸಭಾಂಗಣದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಅಧ್ಯಯನಶೀಲ ಪ್ರಬಂಧಗಳನ್ನು ಮಂಡಿಸಲು ಸ್ನಾತಕ ವಿದ್ಯಾರ್ಥಿಗಳು, ಪದವೀಧರರು, ಅಧ್ಯಾಪಕರು ಹಾಗೂ ಸಂಶೋಧಕರಿಗೆ ಮುಕ್ತ ಅವಕಾಶವಿದೆ. ವಿವರಕ್ಕೆ ಮೊ. 99640 18112 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

