ಎಸ್ಜೆಸಿಇ ಪದವಿ ಪ್ರದಾನ
ಕ.ಪ್ರ.ವಾರ್ತೆ ಮೈಸೂರು ಅ. 22
ಜೆಎಸ್ಎಸ್ ಮಹಾವಿದ್ಯಾಪೀಠದ ಅಂಗಸಂಸ್ಥೆಯಾದ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ನಾಲ್ಕನೇ ಪದವಿ ಪ್ರದಾನ ಸಮಾರಂಭವು ಅ.26 ರಂದು ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 11.30ಕ್ಕೆ ನಡೆಯುವ ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ನಿವೃತ್ತ ನ್ಯಾ.ಎಂ.ಎನ್. ವೆಂಕಟಾಚಲಯ್ಯ ಪದವೀಧರರಿಗೆ ಪದವಿ ಪ್ರದಾನ ಮಾಡುವರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್. ಬೆಟ್ಕೆರೂರ್, ತಾಂತ್ರಿಕ ವಿಭಾಗದ ಡೀನ್ ಪ್ರೊ.ಎಂ.ಎಚ್. ಧನಂಜಯ ಅತಿಥಿಗಳಾಗಿ ಭಾಗವಹಿಸುವರು ಎಂದು ಎಸ್ಜೆಸಿಇ ಪ್ರಾಂಶುಪಾಲ ಡಾ.ಬಿ.ಜಿ. ಸಂಗಮೇಶ್ವರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2012-13ನೇ ವರ್ಷದ ಬಿಇ ಪದವಿಯ 840, ಎಂ.ಟೆಕ್ ಪದವಿಯ 189, ಎಂಸಿಎ ಪದವಿಯ 56 ಹಾಗೂ ಎಂಬಿಎ ಪದವಿಯ 89 ವಿದ್ಯಾರ್ಥಿಗಳು ಸ್ವಾಯತ್ತತೆಯ ನಿಬಂಧನೆಗಳ ಅನುಸಾರ ಪದವಿ ಪ್ರಮಾಣ ಪತ್ರ ನೀಡಲಾಗುತ್ತದೆ. ಒಟ್ಟು 38 ಪದಕಗಳನ್ನು ವಿತರಿಸಲಾಗುತ್ತಿದ್ದು, ಇದರಲ್ಲಿ ಪ್ರತಿ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 15 ಪದಕಗಳು ಮತ್ತು 11 ದತ್ತಿ ಪದಕಗಳನ್ನು ವಿತರಿಸಲಾಗುವುದು ಎಂದರು.
ದತ್ತಿ ಪ್ರಶಸ್ತಿಯನ್ನು ಬಿ.ಇ ವಿಭಾಗದ ಪ್ರಣಿತಾ ವಸಂತ ಪಾಟೀಲ, ಮಧುಸೂದನ್ ಜಿ ಕಲಿಭಟ್, ಜಿ. ರಶ್ಮೀ, ಪ್ರತಿಭಾ ಶೆಣೈ, ಎಂ.ಸಿ. ಕಿರಣ್, ಶಿಲ್ಪಾ, ಎನ್. ನಂದಿತಾ, ಎಂ.ಆರ್. ಭಾರದ್ವಾಜ್, ಎಂಬಿಎ ವಿಭಾಗದ ಪಿ. ನಾಗಚಾರ್, ಎಂ.ಟೆಕ್ ವಿಭಾಗದ ವಿ.ಎಸ್. ನಿರಂಜನ್ ಕುಮಾರ್ ಅವರಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಎಸ್ಜೆಸಿಇ ಉಪಪ್ರಾಂಶುಪಾಲ ಪ್ರೊ.ಶಕೀಬ್ ಉರ್ ರೆಹಮಾನ್, ಡಾ. ಉದಯಕುಮಾರ್, ಉದ್ಯೋಗವಕಾಶ ಮತ್ತು ತರಬೇತಿ ಕೇಂದ್ರದ ಪ್ರೊ.ಮಹಾನಂದ ಇದ್ದರು.
28ಕ್ಕೆ ಬಾನುಲಿ ಕೃಷಿ ಬೆಳಗು
ಮೈಸೂರು: ಮೈಸೂರಿನ ಪ್ರಸಾರಭಾರತಿ ಆಕಾಶವಾಣಿ ವತಿಯಿಂದ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ಅ.28ರ ಬೆಳಗ್ಗೆ 10.30ಕ್ಕೆ ಮಂಡ್ಯ ಜಿಲ್ಲೆಯ ಕೆರಗೋಡು ಹೋಬಳಿಯ ಪಂಚೇಗೌಡನದೊಡ್ಡಿ ಗ್ರಾಮದ ಸಣ್ಣಮ್ಮ ಮತ್ತು ಪಿ. ರಾಮಣ್ಣ ಹಾಗೂ ಮಂಜುಳಾ ಪಿ. ಕೃಷ್ಣೇಗೌಡರ ಜಮೀನಿನಲ್ಲಿ ಹಮ್ಮಿಕೊಂಡಿದೆ.
ಮಂಡ್ಯ ಜಿಲ್ಲೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಸಿ. ಜಯಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಸಾಮರ್ಥ್ಯ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರದ ನಿರ್ದೇಶಕ ಪ್ರೊ.ನಿರಂಜನ ವಾನಳ್ಳಿ ಅಧ್ಯಕ್ಷತೆ ವಹಿಸುವರು. ಉತ್ತರ ಕನ್ನಡ ತಾಲೂಕಿನ ಕೃಷಿಕರು ಹಾಗೂ ಬರಹಗಾರರಾದ ಶಿವಾನಂದ ಕಳವೆ ಮಾತನಾಡುವರು.ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಜಿ.ಕೆ. ರವೀಂದ್ರಕುಮಾರ್, ಆಯುರ್ವೇದ ವೆಲ್ನೆಸ್ ಎಲೂಸಿಯಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್. ಕೃಷ್ಣಪ್ರಸಾದ್, ಮಂಡ್ಯ ನಬಾರ್ಡ್ ಸಹಾಯಕ ಮಹಾ ಪ್ರಬಂಧಕ ಬಿಂದುಮಾಧವ ವಡವಿ, ಸಮಾಜ ಕಲ್ಯಾಣಾಧಿಕಾರಿ ಮಾಲತಿ, ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್ ಚಂದ್ರಗುರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

