ಸಹಕಾರ ಸಂಘಕ್ಕೆ 2.23 ಲಕ್ಷ ಲಾಭ
ಕ.ಪ್ರ.ವಾರ್ತೆ ಭೇರ್ಯ ಸೆ. 19
ಹೊಸಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2012-13ನೇ ಸಾಲಿನಲ್ಲಿ 5 ಕೋಟಿ ವಹಿವಾಟು ನಡೆಸಿ, 2.23 ಲಕ್ಷ ಆದಾಯ ಬಂದಿದ್ದು, ಸಂಘವು ಉತ್ತಮ ರೀತಿಯಲ್ಲಿ ರೈತರಿಗೆ ಸಾಲ ಸೌಲಭ್ಯ ನೀಡುತ್ತ ಬಂದಿದೆ ಎಂದು ಮೈಸೂರು- ಚಾಮರಾಜನಗರ ಜಿಲ್ಲಾ ಬ್ಯಾಂಕ್ ಉಪಾಧ್ಯಕ್ಷ ಎಸ್. ಸಿದ್ದೇಗೌಡ ಹೇಳಿದರು.
ಹೊಸ ಅಗ್ರಹಾರದ ಸಹಕಾರ ಸಂಘದ ಆವರಣದಲ್ಲಿ ಗುರುವಾರ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳಲ್ಲಿ ಪ.ಜಾತಿ ಮತ್ತು ಜನಾಂಗದವರು ಎಷ್ಟೇ ಜನರು ಬಂದು ನಮಗೆ ಸಾಲ ಕೊಡಿ ಎಂದು ಕೇಳಿದರೆ ಕೊಡಲಾಗುವುದು. ಆದರೆ ಪಹಣಿ ಇರಬೇಕು. ಏಕೆಂದರೆ ಇದು ರೈತರ ಬ್ಯಾಂಕ್. ತಾಲೂಕಿನಲ್ಲಿ ಪಹಣಿ ಹಿಡಿದುಕೊಂಡ ಬಂದ ರೈತರಿಗೆ ಸಾಲ ಕೊಡದೇ ವಾಪಸ್ ಕಳುಹಿಸುವುಲ್ಲ ಎಂದು ತಿಳಿಸಿದರು.
ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ. ಓಬೇಗೌಡ ಮಾತನಾಡಿ, ನಮ್ಮ ಸಹಕಾರ ಸಂಘದ ನೆರವಿಗೆ ಸ್ಪಂದಿಸುತ್ತಿರುವ ಮೈಸೂರು-ಚಾಮರಾಜನಗರ ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಬಸವೇಗೌಡ ಮತ್ತು ಉಪಾಧ್ಯಕ್ಷ ಎಸ್.ಸಿದ್ದೇಗೌಡ ಅವರಿಗೆ ಸಂಘ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದರು.
ಸಹಕಾರ ಸಂಘದಲ್ಲಿ ಬೆಳೆ ಸಾಲ, ರೈತರಿಗೆ ಗೊಬ್ಬರ ಮಾರಾಟ, ಪಂಪ್‌ಸೆಟ್, ಟ್ರ್ಯಾಕ್ಟರ್ ಮತ್ತು ಪವರ್ ಟ್ರಿಲ್ಲರ್ ಸಾಲ ನೀಡುವುದು ಜೊತೆಗೆ ರೈತರಿಗೆ ಕೃಷಿ ಸಲಕರಣೆಗಳ ಮಾರಾಟ, ಪಶು ಆಹಾರ ಮಾರಾಟ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ನಂತರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿ 2012-13ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ಸಂಘದ ನಿದೇರ್ಶಕರು ಮತ್ತು ಸದಸ್ಯರು ಒಪ್ಪಿಗೆ ಸೂಚಿಸಿದರು.
ಬ್ಯಾಂಕ್ ಉಪಾಧ್ಯಕ್ಷ ಎಸ್. ಸಿದ್ದೇಗೌಡ ಅವರನ್ನು ಅಭಿನಂದಿಸಲಾಯಿತು. ನಿರ್ದೇಶಕರಾದ ಚಂದ್ರೇಗೌಡ, ಎಚ್.ಬಿ. ರಂಗಪ್ಪ, ಎಚ್.ಎಸ್. ರಾಜು, ಗೋಪಾಲ್, ರಾಜಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿ, ಗುಮಾಸ್ತ ನರಸಿಂಹೇಗೌಡ, ಸಹಾಯಕ ಪುನೀತ್, ಸದಸ್ಯರಾದ ಡಿವಿಗುಡಿ ಯೋಗೇಶ್, ರಾಜೇಗೌಡ, ಶಂಕರ್, ಬಸವರಾಜಪ್ಪ, ಬಿ.ಎಸ್. ರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

