ಮೈಸೂರು

ಕನಕ ಪೀಠದಲ್ಲಿ ನವರಾತ್ರಿ ಉತ್ಸವ

Published On :

ಕೆ.ಆರ್. ನಗರ: ಕನಕ ಗುರುಪೀಠದಲ್ಲಿ ದಸರಾ ಅಂಗವಾಗಿ ನವರಾತ್ರಿ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಅ.6ರಿಂದ 9ರವರೆಗೆ ನಡೆಸಲಾಗುತ್ತದೆ.
ಮಠದ ಶಿವಾನಂದಪುರಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಪ್ರತಿದಿನ ಬೆಳಗ್ಗೆ 10ಕ್ಕೆ ಜನಪದ ಮೇಳಗಳು ಜರುಗಲಿದ್ದು, ಸಂಗೀತ, ಸಾಹಿತ್ಯ, ಕಲೆ, ಭಜನೆ, ತತ್ವಪದ, ಡೊಳ್ಳು ಕುಣಿತ, ಕೋಲು ಕುಣಿತ, ಕಂಸಾಳೆ, ನಂದಿಕಂಬ ಸ್ಪರ್ಧೆಗಳನ್ನು ಆಯೋಜಿಸಿದೆ. ಭಾಗವಹಿಸುವ ತಂಡಗಳಿಗೆ ಮಠದ ವತಿಯಿಂದ ಬಹುಮಾನ ನೀಡಲಾಗುವುದು. ಅ.10ರಂದು ಮಧ್ಯಾಹ್ನ 2.30ಕ್ಕೆ ಸಂಗೊಳ್ಳಿ ರಾಯಣ್ಣ ಕಾಟಾ ಕುಸ್ತಿಗಳನ್ನು ನಡೆಸಲಾಗುತ್ತದೆ. ಅ.12ರಂದು ಮಧ್ಯಾಹ್ನ 3ಕ್ಕೆ ಸಂಗೋಳ್ಳಿ ರಾಯಣ್ಣ ನಾಟಕ, ಅ.13ರಂದು ಮಧ್ಯಾಹ್ನ 3ಕ್ಕೆ ಭಕ್ತ ಕನಕದಾಸ ನಾಟಕ, ಅ.14ರಂದು 3ಕ್ಕೆ ಶನಿ ಪ್ರಭಾವ ನಾಟಕ ಏರ್ಪಡಿಸಿದೆ.
ಮಠದ ವ್ಯಾಪ್ತಿಯ ಮೈಸೂರು, ಮಂಡ್ಯ, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯ ಜನಪದ ಕಲಾ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ವಿವರಕ್ಕೆ ಮೊ. 99012 06607, 98808 03167 ಸಂಪರ್ಕಿಸುವಂತೆ ಕೋರಿದೆ.

ನಾಳೆ ಹೃದ್ರೋಗ ತಪಾಸಣಾ ಶಿಬಿರ
ಕೆ.ಆರ್. ನಗರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೃದ್ರೋಗ ತಪಾಸಣಾ ಶಿಬಿರವನ್ನು ತಾಲೂಕಿನ ಡೋರ್ನಹಳ್ಳಿ ಗ್ರಾಮದ ಸಂತ ಅಂತೋಣಿ ಚರ್ಚ್‌ನ ಆವರಣದಲ್ಲಿ ಸೆ.23ರಂದು ಏರ್ಪಡಿಸಿದೆ.
ಅಂದು ಬೆಳಗ್ಗೆ 10ಕ್ಕೆ ಫಾದರ್ ಗಿಲ್ಬರ್ಟ್ ಡಿಸಿಲ್ವಾ ಶಿಬಿರ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷ ಬಿ.ಎಂ.ಗಿರೀಶ್ ಅಧ್ಯಕ್ಷತೆ ವಹಿಸುವರು. ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬಿ. ಅಶೋಕ್, ವಿಕ್ರಮ್ ಆಸ್ಪತ್ರೆಯ ಡಾ. ಚಂದ್ರಶೇಖರ್ ರೆಡ್ಡಿ, ಗ್ರಾಪಂ ಸದಸ್ಯೆ ನೇತ್ರಾವತಿ ಮಹದೇವ್, ತಾಪಂ ಮಾಜಿ ಸದಸ್ಯ ಎಂ. ತಮ್ಮಣ್ಣ ಭಾಗವಹಿಸುವರು. ಮೈಸೂರಿನ ವಿಕ್ರಂ ಆಸ್ಪತ್ರೆಯ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಪ್ರಯೋಜನವನ್ನು ಪಡೆಯಬೇಕೆಂದು ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.