ಆರೋಗ್ಯ ಉಚಿತ ತಪಾಸಣಾ ಶಿಬಿರ
ಹುಣಸೂರು: ಇಲ್ಲಿನ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು.
ಮೈಸೂರಿನ ಡಿಆರ್ಸಿಯಿಂದ ಆಗಮಿಸಿದ್ದ ನುರಿತ 10ಕ್ಕೂ ಹೆಚ್ಚು ತಜ್ಞ ವೈದ್ಯರು ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ವಿವಿಧ ಅಂಗವಿಕಲತೆ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವಿದ್ಯಾರ್ಥಿಗಳಿಗೆ ತಪಾಸಣೆ ನಡೆಸಿದರು. ತಾಲೂಕು ಶಿಕ್ಷಣ ಇಲಾಖೆ ಆರ್ಎಂಎಸ್ಎ ಯೋಜನೆಯಡಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ನ್ಯೂನತೆಯುಳ್ಳ ಮಕ್ಕಳು ಹಾಗೂ ಪ್ರಾಥಮಿಕ ಹಂತ ಮಕ್ಕಳಿಗಾಗಿ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣ ಶಿಬಿರದಲ್ಲಿ 42 ವಿಕಲಚೇತನ ಮಕ್ಕಳು ತಪಾಸಣೆ ಮಾಡಿ, ಅಗತ್ಯವಿರುವ ಸಲಹೆ, ಸಾಧನ ಸಲಕರಣೆಗಳನ್ನು ಶಿಫಾರಸ್ಸು ಮಾಡಿದರು. ಶಿಬಿರದಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಐಇಆರ್ಟಿಗಳಾದ ಕೆ. ರಾಮಚಂದ್ರ, ಎಚ್.ಜೆ. ಪ್ರಭಾಕರ್ ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ಡೆಂಘೀ ವಿರುದ್ಧ ಜಾಗೃತಿ; ಸೊಳ್ಳೆ ಪರದೆ ವಿತರಣೆ
ಕ.ಪ್ರ. ವಾರ್ತೆ, ಬೈಲುಕುಪ್ಪೆ, ಸೆ.21
ಡೆಂಘೀ ಜ್ವರ ಹರಡುತ್ತಿರುವ ಹಿನ್ನೆಲೆ ಮಕ್ಕಳ ಪ್ರಾಣ ರಕ್ಷಣೆಗಾಗಿ ಪಂಚಾಯಿತಿ ವತಿಯಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ರವಿಮಾನು ಹೇಳಿದರು.
ಇಲ್ಲಿನ ಗ್ರಾಪಂ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಸೊಳ್ಳೆ ಪರದೆ ವಿತರಿಸಿ ಮಾತನಾಡಿದ ಅವರು, ಅಂಗನವಾಡಿ ಶಿಕ್ಷಕಿಯರು ಕಷ್ಟಪಟ್ಟು ಗೌರವಧನವನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ, ಇವರಿಗೆ ನೀಡುವ ಗೌರವಧನ ಯಾವುದಕ್ಕೂ ಸಾಲದಾಗಿದೆ, ಜೊತೆಗೆ ಇವರನ್ನು ಕಾಯಂ ಮಾಡಬೇಕು, ಈ ನಿಟ್ಟಿನಲ್ಲಿ ಸರ್ಕಾರ ಇತ್ತ ಗಮನ ಹರಿಸಬೇಕೆಂದು ತಿಳಿಸಿದರು.
ಪಿಡಿಒ ಶಿವಯೋಗ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ 13 ಹಳ್ಳಿಗಳಲ್ಲಿರುವ 13 ಅಂಗನವಾಡಿ ಕೇಂದ್ರಗಳಿಗೂ ಡೆಂಘೀ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೊಳ್ಳೆ ಪರದೆ ನೀಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ತಾಲೂಕಿನಲ್ಲಿಯೆ ಪ್ರಥಮವಾಗಿ ನಮ್ಮ ಪಂಚಾಯಿತಿಯಲ್ಲಿ ಸೊಳ್ಳೆ ಪರದೆ ನೀಡಿರುವುದು ಹೆಗ್ಗಳಿಕೆಯ ವಿಷಯ ಎಂದು ತಿಳಿಸಿದರು. ಗ್ರಾಪಂ ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ಉತ್ತಯ್ಯ, ಖತೀಜ, ಮಹದೇವ, ರಾಜು, ಗೋವಿಂದಯ್ಯ, ಅಂಗನವಾಡಿ ಶಿಕ್ಷಕಿಯರಾದ ಗೌರಮ್ಮ, ಅಭಿಲಾಷ, ಸರಸು, ಸುಧಾ, ಜಕಲಿನ್, ಮೀನಾಕ್ಷಿ, ನೇತ್ರಾವತಿ, ನವೀದಾ, ಭಾಗೀರಥಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

