ಎಂಜಿನಿಯರ್‌ಗಳ ಸೇವೆ ವಾಪಸ್
Published On :
ಮೈಸೂರು: ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಿವಿಲ್ ಕಾಮಗಾರಿಗಳ ಮೇಲ್ವಿಚಾರಣೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮತ್ತು ಬ್ಲಾಕ್ ಎಂಜಿನಿಯರ್‌ಗಳ ಸೇವೆಯನ್ನು ಬೆಂಗಳೂರಿನ ಸರ್ವಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರ ನಿರ್ದೇಶನದಂತೆ ಹಿಂಪಡೆಯಲಾಗಿದೆ ಎಂದು ಉಪನಿರ್ದೇಶಕ ಎಚ್.ಆರ್.ಬಸಪ್ಪ ಹೇಳಿದ್ದಾರೆ. ಎಂ.ಜೆ.ರಮೇಶ್ (ಜಿಲ್ಲಾ ಎಂಜಿನಿಯರ್ ಹಾಗೂ ಮೈಸೂರು ತಾಲೂಕು), ಸತ್ಯನಾರಾಯಣ (ಎಚ್.ಡಿ. ಕೋಟೆ, ಮೈಸೂರು ಉತ್ತರ, ಹುಣಸೂರು), ಸುರೇಶ್ (ನಂಜನಗೂಡು ಮತ್ತು ಟಿ.ನರಸೀಪುರ ತಾಲೂಕು), ದೇವರಾಜು (ಪಿರಿಯಾಪಟ್ಟಣ, ಕೆ.ಆರ್. ನಗರ ಹಾಗೂ ಮೈಸೂರು ದಕ್ಷಿಣ ವಲಯ) ಅವರ ಸೇವೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಸ್ಪರ್ಧೆಗೆ ಸಿದ್ಧತೆ ಅವಶ್ಯ: ಶಶಿಧರ್
ಮೈಸೂರು: ಯಾವುದೇ ಸ್ಪರ್ಧೆ ಎದುರಿಸಲು ಪೂರ್ವಸಿದ್ಧತೆ ಅವಶ್ಯಕ ಎಂದು ಸೆಂಟರ್ ಫಾರ್ ಕಾನ್‌ಷಿಯಸ್ ಅವೇರ್‌ನೆಸ್ ಸದಸ್ಯ ಡಾ.ಬಿ.ಎನ್. ಶಶಿಧರ್ ಹೇಳಿದರು. ಟಿಟಿಎಲ್ ವ್ಯವಹಾರ ನಿರ್ವಹಣಾ ಕಾಲೇಜು ವತಿಯಿಂದ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಸಮೃದ್ಧಿ ಅಂತರ ಕಾಲೇಜು ವ್ಯವಹಾರಶಾಸ್ತ್ರ ಉತ್ಸವ ಹಾಗೂ ಕಾಲೇಜು ವಾರ್ಷಿಕೋತ್ಸವವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಯಾವುದೇ ಹಿಂಜರಿಕೆ ಇರಬಾರದು. ಸ್ಪರ್ಧೆಯಲ್ಲಿ ಸೋಲು ಗೆಲವು ಮುಖ್ಯವಲದೇಶದಲ್ಲಿ ಜಾಗತಿಕ ವ್ಯವಹಾರವು ಪ್ರಗತಿ ಸಾಧಿಸುತ್ತಿದೆ ಎಂದರು. ಸಂಸ್ಥೆಯ ಟ್ರಸ್ಟಿ ಪ್ರಸಾದ್ ತೊಲೀಗೌಡ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ. ವೆಂಕಟರಾಮಯ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಸವೇಗೌಡ ಇದ್ದರು. ಕಾರ್ಯಕ್ರಮದ ಸಂಯೋಜಕಿ ಡಾ.ಕೆ. ಸಾಯಿಲತಾ ಇದ್ದರು.
ನೇತ್ರ ತಪಾಸಣೆ
ಮೈಸೂರು: ಶ್ರೀ ಅನ್ನಪೂರ್ಣೇಶ್ವರಿ ಚಾರಿಟಬಲ್ ಕಣ್ಣಿನ ಆಸ್ಪತ್ರೆ ಮತ್ತು ಮಹಾಜನ ಸ್ನಾತಕೋತ್ತರ ಪದವಿ ಕೇಂದ್ರದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಇತ್ತೀಚೆಗೆ ನಾಚನಹಳ್ಳಿಪಾಳ್ಯದಲ್ಲಿ ಕಣ್ಣಿನ ಪೂರೆ ತಪಾಸಣೆ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಮಹಾಜನ ಸ್ನಾತಕೋತ್ತರ ಪದವಿ ಕೇಂದ್ರದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಸುಮನ್ ಕೆ.ಮೂರ್ತಿ, ಡಾ.ವಿದ್ಯಾಶಂಕರ್, ಸಹ ಪ್ರಾಧ್ಯಾಪಕ ನೂತನ, ಆರ್‌ಎಲ್‌ಎಚ್‌ಪಿ ಸಂಯೋಜಕ ಅನುಸೂಯ ಹಾಗೂ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಎಚ್.ಆರ್. ಅರ್ಜುನ್, ಧನಂಜಯ್, ಕಿರಣ್, ಪುರುಷೋತ್ತಮ್, ರಂಗರಾಜು, ಮಹೇಶ್, ಆಶಿತ್ ಹಾಗೂ ಇತರ ವಿದ್ಯಾರ್ಥಿಗಳು ಭಾಗವಹಿಸಿ, ಶಿಬಿರವನ್ನು ಯಶಸ್ವಿಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

