ಮೈಸೂರು

ನೋಟಾ ಮೊರೆ ಹೋದೇವು...

Published On :

ಮೈಸೂರು: ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮೂರು ದಿನಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಬಹಿರಂಗ ಹೇಳಿಕೆ ನೀಡದಿದ್ದರೆ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳು ಇಷ್ಟವಿಲ್ಲ ಎಂದು (ನೋಟ) ಮತದಾನ ಮಾಡಬೇಕಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ.

ನೋಟಾ ಮೇಲೆ ಗಮನ
ಬೆಳಗಾವಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸದೇ ನೋಟಾ ಬಟನ್ ಒತ್ತುವ ಮೂಲಕ ಮರಾಠಾ ಭಾಷಿಕರು ತಮ್ಮ ಬಲಪ್ರದರ್ಶನ ಮಾಡಬೇಕೆಂದು ಹೇಳುವ ಮೂಲಕ ಮಹಾರಾಷ್ಟ್ರ ಏಕೀಕರಣ ಸಮಿತಿಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವ ಯತ್ನಕ್ಕೆ ಕೈ ಹಾಕಿದೆ. ಗುರುವಾರ ನಗರದ ರಾಮಲಿಂಗಖಿಂಡ ಗಲ್ಲಿಯಲ್ಲಿ ನಡೆದ ಎಂಇಎಸ್ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಈ ಸಭೆಯಲ್ಲಿ ಎಂಇಎಸ್ ಪ್ರಮುಖ ನಾಯಕರು ಉಪಸ್ಥಿತರಿರಲಿಲ್ಲ ಎಂದು ಹೇಳಲಾಗಿದೆ.

ಸಿದ್ದು ವರ್ತನೆ ಸರಿ ಇಲ್ಲ
ನಾಗಮಂಗಲ/ಕೆ.ಆರ್. ಪೇಟೆ: ಅಧಿಕಾರದ ಮದದಿಂದ ಮದವೇರಿದ ಆನೆಯಂತೆ ಸಿದ್ದರಾಮಯ್ಯ ಅಬ್ಬರಿಸುತ್ತಿದ್ದಾರೆ. ಅವರು ಚುನಾವಣೆ ನಂತರ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ಮಾಜಿ ಪ್ರಧಾನಿ ದೇವೇಗೌಡರು ಗುರುವಾರ ಭವಿಷ್ಯ ನುಡಿದರು. ಅವರು ಹಲವೆಡೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಸಕಾಲಕ್ಕೆ ಪ್ರಣಾಳಿಕೆ ಬಿಡುಗಡೆ ಇಲ್ಲ
ಹುಬ್ಬಳ್ಳಿ: ಚುನಾವಣೆ ಪೂರ್ವದಲ್ಲಿ ಸಕಾಲಕ್ಕೆ ಪ್ರಣಾಳಿಕೆಯನ್ನೇ ಬಿಡುಗಡೆ ಮಾಡಲಾಗದ ಬಿಜೆಪಿಗೆ ದೇಶವನ್ನು ನಡೆಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಸಚಿವ ಎಚ್.ಕೆ. ಪಾಟೀಲ, ಲೋಕಸಭೆಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ ಎನ್ನುವ ಕಾಲಕ್ಕೆ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತೋರಿದೆ ಎಂದು ದೂರಿದರು.

'ನಾನು ಹರಕೆ ಕುರಿಯಲ್ಲ'
ಬಿಜಾಪುರ: ನಾನು ಹರಕೆ ಕುರಿಯಲ್ಲ. ಕಾಂಗ್ರೆಸ್ ಸೋಲಿಸಲು ತನ್ನನ್ನು ಜೆಡಿಎಸ್ ಧುರೀಣರು ಚುನಾವಣೆ ಕಣಕ್ಕಿಳಿಸಿಲ್ಲ. ವಿರೋಧ ಪಕ್ಷಗಳ ಇಂಥ ಕೀಳು ಮಟ್ಟದ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಬಿಜಾಪುರ ಲೋಕಸಭೆ ಜೆಡಿಎಸ್ ಅಭ್ಯರ್ಥಿ ಕೆ. ಶಿವರಾಂ ಅವರು ಹೇಳಿದರು. ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜಾಪುರದ ಜನರು ಪ್ರೀತಿಯಿಂದ ತನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಹ್ವಾನಿಸಿದ್ದಾರೆ. ಜನರು ತನ್ನನ್ನು ಹರಕೆ ಕುರಿ ಮಾಡಲಾರರು ಎಂದರು.

ಹಣ ಎಣಿಸುವ ಯಂತ್ರ ವಶ
ಸಿರುಗುಪ್ಪ: ಬೆಂಗಳೂರಿನಿಂದ ರಾಯಚೂರಿಗೆ ಕಾರಿನಲ್ಲಿ ದಾಖಲೆ ರಹಿತವಾಗಿ ಸಾಗಿಸುತ್ತಿದ್ದ ಹಣ ಎಣಿಸುವ ಮೂರು ಯಂತ್ರಗಳನ್ನು ಹಾಗೂ ಕಾರು ಚಾಲಕನನ್ನು ಎಂಸಿಸಿ ತಂಡ ವಶಪಡಿಸಿಕೊಂಡ ಘಟನೆ ಬುಧವಾರ ಸಂಜೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಬಳ್ಳಾರಿ ರಸ್ತೆಯ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಇಂಧನ ತುಂಬಿಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಕಾರಿನ ಚಾಲಕ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ ಕಾರಣ ತಪಾಸಣೆ ನಡೆಸಲಾಗಿದೆ. ಆಗ ನೋಟು ಎಣಿಸುವ ಮೂರು ಯಂತ್ರಗಳು ದೊರೆತಿವೆ. ಪೊಲೀಸರು ಕಾರು ಚಾಲಕನನ್ನು, ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.