ಮೈಸೂರು

ಅಂಚೆ ಮೂಲಕ 'ಕರ' ಪ್ರಚಾರ

Published On :

ಧರ್ಮಾಪುರ ನಾರಾಯಣ್
ಕ.ಪ್ರ.ವಾರ್ತೆ ಹುಣಸೂರು ಏ. 13
ಬೇಸಿಗೆ ಆರಂಭವಾಗುವ ಹೊತ್ತಿಗೆ ಚುನಾವಣೆ ಬರುವುದರಿಂದ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗುತ್ತಾರೆ. ಆದರೆ, ಬಿಸಿಲಿಗೆ ಹೆದರಿ ಮನೆಯಲ್ಲಿ ಕುಳಿತರೆ ಐದು ವರ್ಷ ಕೂರಬೇಕಾದೀತು ಎಂಬ ಆತಂಕ ಒಂದು ಕಡೆಯಾದರೆ ಮತ್ತೊಂದೆಡೆ ಹೇಗಾದರೂ ಮಾಡಿ ಜನರನ್ನು ತಲುಪಿ ತಮ್ಮತ್ತ ಸೆಳೆಯಬೇಕು ಎಂಬ ತಂತ್ರ ರೂಪಿಸುತ್ತಾರೆ.
ಈ ರೀತಿಯ ತಂತ್ರ ಮಾಡುವಲ್ಲಿ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯಥಿ ಎಚ್. ವಿಶ್ವನಾಥ್ ಯಶಸ್ವಿಯಾಗಿದ್ದಾರೆ. ತಮ್ಮ ಕ್ಷೇತ್ರದ ವ್ಯಾಪ್ತಿಯ ಹುಣಸೂರಿನಲ್ಲಿ ಮನೆ ಮನೆಗೆ ಹೋಗಿ ಕಾರ್ಯಕ್ರಮ ಹೇಳಿಕೊಳ್ಳುವ ಬದಲು ಪ್ರಣಾಳಿಕೆಯನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಅಂಚೆ ಇಲಾಖೆಯ ಮೊರೆ ಹೋಗಿದ್ದಾರೆ. ಕೇವಲ 2 ರು. ಖರ್ಚು ಮಾಡಿ, ಪ್ರಣಾಳಿಕೆಯನ್ನು ತಲುಪಿಸಿದ್ದಾರೆ
ಪ್ರತಿ ಮನೆಯಲ್ಲೂ ಚರ್ಚೆ: ಅಪರೂಪಕ್ಕೆ ಅಂಚೆ ಮೂಲಕ ಕಾಗದ ಪತ್ರ ಬರುತ್ತಿದ್ದ ಮನೆಗಳಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಪತ್ರ ಬಂದಿದೆ. ಇದರಿಂದ ಬಾರಿ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ಪಕ್ಷದವರು ಕರ ಪತ್ರ ಕಳುಹಿಸಿದ್ದಾರೆ ಬಾಯಿಗೆ ಬಂದಾಗೆ ಶಾಪ ಹಾಕುತ್ತಿದ್ದಾರೆ. ಕೆಲವರು ರಾಜಕೀಯದವರಿಗೆ ಕೆಲಸ ವಿಲ್ಲ ಎಂದರೆ, ಇನ್ನೂ ಕೆಲವರು ಮತ ಕೇಳುವ ಬದಲು ಪೋಸ್ಟ್ ಬಂದಿದೆ. ಮುಂದೆ ಏನು ಬರುತ್ತದೆ ಗೊತ್ತಿಲ್ಲಾ.. ಹೀಗೆ ನಾನಾ ರೀತಿಯಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಮೂಟೆ- ಮೂಟೆ ಕರಪತ್ರ: ಮೊಬೈಲ್, ಅಂತರ್ಜಾಲ ತಾಣಗಳು ಆಸ್ತಿತ್ವಕ್ಕೆ ಬಂದ ಮೇಲೆ ಅಂಚೆ ಇಲಾಖೆಗೆ ಅಂತಹ ಪತ್ರಗಳ ಹಾವಳಿ ಇರಲಿಲ್ಲ. ಆದರೆ ಈಗ ಮೂಟೆಗಟ್ಟಲೇ ಕಾಗ್ರೆಸ್ಸಿನ ಕರ ಪತ್ರಗಳು ಬರುತ್ತಿವೆ. ಅಂಚೆ ಇಲಾಖೆ ಪೇದೆ ಆಯ್ಯೋ ಏನಪ್ಪ ಕರ ಪತ್ರಗಳ ಮೂಟೆ ಮೂಟೆ ಬೀಳುತ್ತಿದೆ. ಬಿರು ಬಿಸಿಲಿನಲ್ಲಿ ನೀರು ಕುಡಿದು ಸೈಕಲ್ ತುಳಿದು ಮನೆ ಮನೆಗೆ ತಲುಪಿಸಬೇಕಲ್ಲಾ ಎಂದು ಸುಸ್ತು ಹೊಡೆದಿದ್ದಾರೆ.
ಇಲಾಖೆ ನಿಯಮ ಪಾಲಿಸಬೇಕು: ಕೆಲವು ರಾಜಕೀಯ ಮುಖಂಡರು ಯಾವ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಈ ಕೆಲಸ ಯಾರಿಗೆ ಬೇಕು ಸಾರ್ ಹೊಟ್ಟೆ ಜೀವನ. ಕುಟುಂಬ ನಿರ್ವಹಿಸಲು ಇರುವ ಉದ್ಯೋಗ ಮಾಡುತ್ತಿದ್ದೇವೆ. ಅಂಚೆ ಇಲಾಖೆ ನಿಯಮ ಪಾಲಿಸಲೇಬೇಕು. ಆದ್ದರಿಂದ ಇಲಾಖೆ ಏನೇ ಕೆಲಸ ಕೊಡಲಿ ಮಾಡಬೇಕಲ್ವ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಂಚೆ ಪೇದೆ.

ಬನ್ನಿಕುಪ್ಪೆಯಲ್ಲಿ ಕಾಂಗ್ರೆಸ್ ಮತಬೇಟೆ
ಹುಣಸೂರು: ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಎಲ್ಲ ವರ್ಗಗಳ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿ ಮಾಡಲು ಸಾಧ್ಯ ಎಂಬುದನ್ನು  ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಭಾನುವಾರ ಮೈಸೂರು- ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಪರ ಮಾತಯಾಚಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ರಾಜ್ಯ ಮತ್ತು ಮೈಸೂರು ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಹುಣಸೂರು ಕ್ಷೇತ್ರದ ಅಭಿವೃದ್ಧಿಗಾಗಿ ರು.450 ಕೋಟಿ  ಅನುದಾನ ನೀಡಿದ್ದಾರೆ. ಅಲ್ಲದೆ, ನೀರಾವರಿ ಕ್ಷೇತ್ರಕ್ಕೆ ರು. 600 ಕೋಟಿ ಹಣ ನೀಡಿದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ. ಅಂತವರ ಕೈಬಲ ಪಡಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು. ತಮಗೆ ಇನ್ನೂ ನಾಲ್ಕು ವರ್ಷ ಅಧಿಕಾರವಿದ್ದು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸುವೆ ಎಂದು ತಿಳಿಸಿದರು.
ಕಾಂಗ್ರೆಸ್ ಸೇರ್ಪಡೆ: ಬನ್ನಿಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲು ಸೇರಿದಂತೆ ಹಲವಾರು ಮುಖಂಡರು ಬೇರೆ ಬೇರೆ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಮುಖಂಡರಾದ ಹಂದನಹಳ್ಳಿ ಸೋಮಶೇಖರ್, ದಿನೇಶ್, ರಮೇಶ್, ಚಿಕ್ಕಸ್ವಾಮಿ, ಸುರೇಶ್, ಎ.ಆರ್. ಸುಧಾಮಣಿ, ಕುಮಾರಸ್ವಾಮಿ, ಈರೇಗೌಡ, ತಾಪಂ ಸದಸ್ಯ ಪ್ರಸನ್ನ, ಜಿಪಂ ಸದಸ್ಯ ರಮೇಶ್, ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ರಾಜ್ಯ ಸಂಘದ ಅಧ್ಯಕ್ಷ ಸಿ. ನರೇಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.