ಮೈಸೂರು

ವಿವಿಧೆಡೆ ಮಹಾವೀರ ಜಯಂತಿ

Published On :

ಕ.ಪ್ರ.ವಾರ್ತೆ ಮೈಸೂರು ಏ. 13
ಮಹಾವೀರ ಜಯಂತಿ ಅಂಗವಾಗಿ ಭಾನುವಾರ ಸಾವಿರಾರು ಮಂದಿ ಜೈನ ಬಂಧುಗಳು ನಗರದ ವಿವಿಧೆಡೆ ವಿಶೇಷ ಪೂಜೆ ಮತ್ತು ಮೆರವಣಿಗೆ ನಡೆಸಿದರು. ವಿವಿಧ ಜೈನ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ನಗರದ ವಿವಿಧ ಬಡಾವಣೆಗಳಲ್ಲಿ ಮಹಾವೀರರ ಪ್ರತಿಮೆ ಇಟ್ಟು ಶ್ರದ್ಧಾ ಭಕ್ತಿಯಿಂದ ಮೆರವಣಿಗೆ ನಡೆಸಿದರು. ನಗರದ ಹಳ್ಳದಕೇರಿಯ ದೇವಸ್ಥಾನದಿಂದ ಆರಂಭವಾದ ಒಂದು ಮೆರವಣಿಗೆಯು, ಅಶೋಕರಸ್ತೆ, ಚಂದ್ರಗುಪ್ತ ರಸ್ತೆಯ ಮೂಲಕ ಮತ್ತೆ ದೇವಸ್ಥಾನ ತಲುಪಿತು. ಜೈನ ಸಮಾಜದ ನೂರಾರು ಮಂದಿ ಮತ್ತು ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಡ್ಡಪಲ್ಲಕ್ಕಿಯಲ್ಲಿ ಮಹಾವೀರನ ಪ್ರತಿಮೆ ಮೆರವಣಿಗೆ ನಡೆಸಲಾಯಿತು. ಜೈನ ಸಮಾಜದ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು. ಕುರುಬಾರಹಳ್ಳಿಯ ಪ್ರಜ್ಞಾ ಜೈನ್ ಅಸೋಸಿಯೇಷನ್‌ನ ಪದಾಧಿಕಾ ರಿಗಳು ಮಹಾವೀರ ಪ್ರತಿಮೆ ಮೆರವಣಿಗೆ ನಡೆಸಿದರು. ರಾಜ್‌ಕುಮಾರ್ ರಸ್ತೆ, ಶಂಕರಮಠದ ರಸ್ತೆ, ಕುರುಬಾರಹಳ್ಳಿಯಲ್ಲಿ ಮೆರವಣಿಗೆ ನಡೆಯಿತು. ಇದೇ ವೇಳೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಕೃಷ್ಣ-ಸಿದ್ದು ಪ್ರಚಾರ ಇಂದು
ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಏ.14 ರಂದು ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಪರ ಮೈಸೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ. ಎಸ್.ಎಂ. ಕೃಷ್ಣ ಬೆಳಗ್ಗೆ 10.30ಕ್ಕೆ ಲಲಿತಮಹಲ್ ಹೆಲಿಪ್ಯಾಡ್‌ಗೆ ಆಗಮಿಸುವರು. 10.45ಕ್ಕೆ ಕೆ.ಜಿ. ಕೊಪ್ಪಲಿನಲ್ಲಿ ಪ್ರಚಾರ ನಡೆಸಿ, 11ಕ್ಕೆ ಶಾಸಕ ವಾಸು  ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸುವರು. ಬೆಳಗ್ಗೆ 11.30ಕ್ಕೆ ಪಡುವಾರಹಳ್ಳಿ, ಒಂಟಿಕೊಪ್ಪಲು, ಮಧ್ಯಾಹ್ನ 12ಕ್ಕೆ ಕುಂಬಾರಕೊಪ್ಪಲು, 12.30ಕ್ಕೆ ಸೂರ್ಯ ಬೇಕರಿ, 1ಕ್ಕೆ ಮಂಚೇಗೌಡನ ಕೊಪ್ಪಲು ಪ್ರಚಾರ ನಡೆಸಿ ಮಧ್ಯಾಹ್ನ 1.30ಕ್ಕೆ ಹೆಲಿಕಾಪ್ಟರ್ ಮೂಲಕ ನಿರ್ಗಮಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.14ರ ಸಂಜೆ 6ಕ್ಕೆ ಶಾಂತಿನಗರ, ಸಂಜೆ 7ಕ್ಕೆ ಉದಯಗಿರಿ, ರಾತ್ರಿ 8ಕ್ಕೆ ಹೆಬ್ಬಾಳು (ಮೋರ್ ಮಾರ್ಕೆಟ್ ಎದುರಿನ ಮೈದಾನ), ರಾತ್ರಿ 9ಕ್ಕೆ ಅಶೋಕ ರಸ್ತೆಯಲ್ಲಿರುವ ಚರ್ಚ್ ಹಾಗೂ ಮಿಲಾದ್ ಪಾರ್ಕ್ ಬಳಿ ಪ್ರಚಾರ ನಡೆಸುವರು. ವಿಶ್ವನಾಥ್ ಏ.14ರ ಬೆಳಗ್ಗೆ 7ಕ್ಕೆ ಕುರುಬಾರಹಳ್ಳಿಯಲ್ಲಿ ಪ್ರಚಾರ ಆರಂಭಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.