ಮತದಾನಕ್ಕೆ ವೇದಿಕೆ ಸಜ್ಜು
ಕ.ಪ್ರ.ವಾರ್ತೆ ಮೈಸೂರು ಏ. 15
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಸಂಬಂಧ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಜಿಲ್ಲಾಡಳಿತ ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ 17,21,197 ಮತದಾರರಿದ್ದಾರೆ. ಇವರಲ್ಲಿ 8,66,391 ಪುರುಷರು, 8,54,665 ಮಹಿಳೆಯರು.
ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 1,973 ಮತಗಟ್ಟೆಗಳಿಗೆ ಒಟ್ಟು 2,367 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 2,367 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 4,734 ಮತದಾನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧ್ಯಕ್ಷಾಧಿಕಾರಿ, ಒಬ್ಬರು ಸಹಾಯಕ ಅಧ್ಯಕ್ಷಾಧಿಕಾರಿ ಮತ್ತು ಇಬ್ಬರು ಮತದಾನಾಧಿಕಾರಿಗಳನ್ನು ಹಾಗೂ ಇವರೊಂದಿಗೆ ಸ್ಥಳೀಯವಾಗಿ ಒಬ್ಬರು ಗ್ರೂಪ್ ಡಿ ಮತ್ತು ಮತದಾರರನ್ನು ಗುರುತಿಸಲು ಪ್ರತಿ ಮತಗಟ್ಟೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಂಬಂಧಪಟ್ಟ ಮಸ್ಟರಿಂಗ್ ಕೇಂದ್ರಗಳಿಂದ ಏ.16ರ ಬೆಳಗ್ಗೆ 6ಕ್ಕೆ ಬಸ್ಗಳು ಹೊರಡಲಿವೆ. ಏ.17ರಂದು ಮತದಾನವು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ.
ಮತದಾನಾಧಿಕಾರಿಗಳಿಗೆ ಮತಗಟ್ಟೆಗಳಿಗೆ ತಲುಪಿಸಲು ಜಿಲ್ಲೆಯಲ್ಲಿ ಒಟ್ಟು 331 ಕೆಎಸ್ಆರ್ಟಿಸಿ ಬಸ್ಗಳು, 68 ಮೆಟಾಡಾರ್ಗಳು, 329 ಲಘು ಮೋಟಾರ್ ವಾಹನಗಳು ಸೇರಿ ಒಟ್ಟು 423 ವಾಹನ ಉಪಯೋಗಿಸಲಾಗುತ್ತಿದೆ.
ಅಧಿಕೃತ ವೋಟರ್ ಸ್ಲಿಪ್ ವಿತರಣೆ
ಮತದಾರರ ಪಟ್ಟಿಯ ಭಾಗದ ಸಂಖ್ಯೆ, ಕ್ರಮ ಸಂಖ್ಯೆ ಹಾಗೂ ಮತ ಚಲಾಯಿಸಿಬೇಕಾಗಿರುವ ಮತಗಟ್ಟೆಯ ವಿವರಗಳನ್ನು ಮುಂಚಿತವಾಗಿ ತಿಳಿದುಕೊಳ್ಳಲು ಈಗಾಗಲೇ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಚೀಟಿಗಳನ್ನು ಮತದಾನ ಮಾಡುವ ಕುರಿತು ಮನವಿಯೊಂದಿಗೆ ಮತಗಟ್ಟೆ ಅಧಿಕಾರಿ, ಸ್ಥಳೀಯ ಆರ್ಐ ಮೂಲಕ ವಿತರಿಸಲಾಗಿದೆ. ಮತದಾರರಿಗೆ ತಲುಪದಿದ್ದಲ್ಲಿ ಮತಗಟ್ಟೆ ಸಮೀಪ ತೆರೆಯುವ ಸಹಾಯ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.
ಬೂತ್ ಸ್ಥಾಪನೆ ಹೇಗೆ?
ಸ್ಪರ್ಧಿಸಿರುವ ಅಭ್ಯರ್ಥಿಗಳು ಮತಗಟ್ಟೆ ಸ್ಥಳದಿಂದ ಕನಿಷ್ಠ ಎರಡು ನೂರು ಮೀಟರ್ ದೂರದಲ್ಲಿ ತಮ್ಮ ಬೂತ್ ಸ್ಥಾಪಿಸಲು ಅವಕಾಶವಿದೆ. ಆದರೆ ಯಾವುದೇ ರೀತಿಯ ಪ್ರಚಾರವನ್ನು ಮಾಡುವಂತಿಲ್ಲ. ಮತದಾರರಿಗೆ ನೀಡುವ ಸ್ಲಿಪ್ನಲ್ಲಿ ಅವರು ಮತದಾರರ ಭಾಗ ಸಂಖ್ಯೆ, ಕ್ರಮ ಸಂಖ್ಯೆ ಮತ್ತು ಹೆಸರನ್ನು ಮಾತ್ರ ಬರೆಯಬಹುದಾಗಿದ್ದು, ಯಾವುದೇ ರೀತಿಯ ಚಿಹ್ನೆಗಳು, ಅಭ್ಯರ್ಥಿಗಳ ಭಾವಚಿತ್ರಗಳು ಇರದಂತೆ ಎಚ್ಚರ ವಹಿಸಲು ಸೂಚಿಸಿದೆ. 2 ಚೇರ್, ಒಂದು ಮೇಜು, 3್ಢ4 ಅರ್ಧ ಅಡಿ ಬ್ಯಾನರ್ಗಳನ್ನು ಹಾಕಿಕೊಳ್ಳಲು ಅವಕಾಶವಿದ್ದು, ಚುನಾವಣಾಧಿಕಾರಿ ಹಾಗೂ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯಬೇಕು. ಎಲ್ಲ ಅಭ್ಯರ್ಥಿಗಳು ಮತಗಟ್ಟೆಗೆ ಒಬ್ಬರಂತೆ ಮತದಾನ ಎಜೆಂಟರನ್ನು ನೇಮಿಸಬಹುದಾಗಿದೆ. ಈ ಎಜೆಂಟರು ಮತಗಟ್ಟೆಯಲ್ಲಿ ಕುಳಿತುಕೊಳ್ಳಲು ಮತದಾನಾಧಿಕಾರಿಗಳು ಅವಕಾಶವನ್ನು ಮಾಡಿಕೊಡುತ್ತಾರೆ. ಬದಲಿ ಎಜೆಂಟನ್ನು ನೇಮಿಸಿಕೊಂಡಿದ್ದರು ಸಹ ಏಕ ಕಾಲದಲ್ಲಿ ಒಬ್ಬ ಎಜೆಂಟ್ ಮಾತ್ರ ಮತಗಟ್ಟೆಯಲ್ಲಿ ಇರಲು ಅವಕಾಶವಿರುತ್ತದೆ.
ಚುನಾವಣಾ ಅಪರಾಧಗಳು
ಭಾರತ ದಂಡ ಸಂಹಿತೆ (ಐಪಿಸಿ) ರ ಕಲಂ 171ಬಿ ರಂತೆ ಮತದಾರರಿಗೆ ಹಣದ ಆಮಿಷ ತೋರಿಸುವುದು ಅಪರಾಧವಾಗಿದ್ದು, ಹಣ ನೀಡುವುದು ಹಾಗೂ ಹಣ ಪಡೆಯುವುದು ಲಂಚಗುಳಿತನದ ಅಪರಾಧವಾಗಿರುತ್ತದೆ. ಇದು ಹಣದ ರೂಪದಲ್ಲಿರಬಹುದು ಅಥವಾ ವಸ್ತು ರೂಪದಲ್ಲಿರಬಹುದು. ಸುಳ್ಳು ದಾಖಲಾತಿಗಳನ್ನು ನೀಡಿ ಬೇರೆ ಮತದಾರರ ಹೆಸರಿನಲ್ಲಿ ಮತದಾನ ಮಾಡುವುದು ಸಹ ಭಾರತ ದಂಡ ಸಂಹಿತೆಯ ಸೆಕ್ಷನ್ 171 ಡಿ ಣ 171 ಎಫ್ ರನ್ವಯ ಚುನಾವಣಾ ಅಪರಾಧವಾಗಿರುತ್ತದೆ. ಈ ಪ್ರಕರಣಗಳಲ್ಲಿ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಈ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಮತದಾನ ಎಲ್ಲರ ಸಾಂವಿಧಾನಕ ಹಕ್ಕು, ಏ.17ರಂದು ನಡೆಯಲಿರುವ ಮತದಾನದ ದಿನದಂದು ಎಲ್ಲರು ಕಡ್ಡಾಯವಾಗಿ ಮತದಾನ ಮಾಡುವಂತೆ ಹಾಗೂ ಶಾಂತಿಯುತ ಮತದಾನಕ್ಕೆ ಎಲ್ಲರೂ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ. ನಡೆಸಲು ಅಗತ್ಯ ಸಹಕಾರ ನೀಡುವಂತೆ ಕೋರಿದ್ದಾರೆ.
ವಿಶೇಷ ಸೂಚನೆ
ಮತದಾರರು ಮೊಬೈಲ್ ಆಗಲೀ ಅಥವಾ ಕ್ಯಾಮೆರಾಗಳನ್ನಾಗಲೀ ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವಂತಿಲ್ಲ. ಪ್ರತಿಯೊಂದು ಮತಗಟ್ಟೆಗಳಲ್ಲಿಯೂ ಸಹ ಸಮವಸ್ತ್ರಧಾರಿ Ú ಆರಕ್ಷಕ ಅಥವಾ ರಕ್ಷಣಾ ಪಡೆಗಳನ್ನು ನೇಮಿಸಲಾಗಿದೆ. ಇದರೊಂದಿಗೆ ಆಯ್ದೆ ಮತಗಟ್ಟೆಗಳಲ್ಲಿ ವೀಡಿಯೋ ಕ್ಯಾಮರಾ ಮತ್ತು ಮೈಕ್ರೋ ಅಬ್ಸರ್ವರ್ಗಳನ್ನು ಸಹ ನೇಮಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅತೀಸೂಕ್ಷ್ಮ ಹಾಗೂ ವಲ್ನರೇಬಲ್ ಇರುವಂತಹ ಆಯ್ದ 120 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಮೇ16 ಮತಎಣಿಕೆ
ಮೇ 16ರ ಬೆಳಗ್ಗೆ 8ಕ್ಕೆ ಮೈಸೂರಿನ ಮಾನಸ ಗಂಗೋತ್ರಿಯ ಜಯಚಾಮರಾಜೇಂದ್ರ ಕಾಲೇಜ್ ಆಫ್ ಎಂಜಿನಿಯರಿಂಗ್, ಗೋಲ್ಡನ್ ಜ್ಯೂಬಿಲಿ ಹಾಲ್ನಲ್ಲಿ ಮತಎಣಿಕೆ ನಡೆಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

