'ಮುದುಕನ ಮದುವೆ' 21ರಂದು
ಹುಣಸೂರು: ತಾಲೂಕಿನ ಮರಳಯ್ಯನಕೊಪ್ಪಲಿನಲ್ಲಿ ಬಸವೇಶ್ವರ ಭಕ್ತ ಮಂಡಳಿಯಿಂದ ಬಸವೇಶ್ವರ ದೇವಸ್ಥಾನದ ಪ್ರಾರಂಭೋತ್ಸವ ಅಂಗವಾಗಿ ಏ. 21ರ ರಾತ್ರಿ 8ಕ್ಕೆ ಮುದುಕನ ಮದುವೆ ಎಂಬ ಸಾಮಾಜಿಕ ಏರ್ಪಡಿಸಿದ್ದು, ನಾಟಕ ನೋಡಿ ನಗದಿದ್ದವರಿಗೆ ರು. 501ಬಹುಮಾನ ಘೋಷಿಸಲಾಗಿದೆ ಎಂದು ಕಲಾವಿದ ಕುಮಾರ್ ಅರಸೇಗೌಡ ತಿಳಿಸಿದ್ದಾರೆ.
ಆಲಿಕಲ್ಲು ಮಳೆಯಿಂದಾಗಿ ಹಾನಿ
ಹುಣಸೂರು: ತಾಲೂಕಿನ ಕಾಡಾಂಚಿನ ಪ್ರದೇಶ ಹಾಗೂ ಹನಗೋಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಬಿದ್ದ ಬಿರುಗಾಳಿ ಸಹಿತ ಮಳೆಗೆ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಕಚುವಿನಹಳ್ಳಿ, ಉಡುವೇಪುರದಲ್ಲಿ 15ಕ್ಕೂ ಹೆಚ್ಚು ಮನೆಗಳು, 4 ಬ್ಯಾರನ್ಗಳ ಛಾವಣಿ ಹಾರಿಹೋಗಿದ್ದು, ಲಕ್ಷಾಂತರ ರು. ನಷ್ಟವಾಗಿದೆ.
ಆಲಿಕಲ್ಲು ಮಳೆಯಿಂದಾಗಿ ತಂಬಾಕು ಸಸಿ ಮಡಿ, ಮಾವು, ಶುಂಠಿ ಬೆಳೆಗೆ ಅಪಾರ ನಷ್ಟವಾಗಿದೆ. ಬಿರುಗಾಳಿಗೆ ಉಡುವೇಪುರದಲ್ಲಿ 8 ಮನೆ 1 ಬ್ಯಾರನ್, ಕಚುವಿನಹಳ್ಳಿಯಲ್ಲಿ ಒಂದು ಮನೆ ಹಾಗೂ 3 ಬ್ಯಾರನ್ಗಳ ಛಾವಣಿಯ ಕಲ್ನಾರ್ ಶೀಟ್ ಹಾಗೂ ಹೆಂಚುಗಳು ಹಾರಿಹೋಗಿವೆ.
ಶ್ರೀ ಸುಶಿಮೀಂದ್ರರ 8ನೇ ವರ್ಷದ ಆರಾಧನೆ
ನಂಜನಗೂಡು: ನಂಜನಗೂಡು ಮೂಲಮಠ ಶ್ರೀ ರಾಘವೇಂದ್ರ ಸನ್ನಿಧಿಯಲ್ಲಿ ಸುಶಿಮೀಂದ್ರ ತೀರ್ಥರ 8ನೇ ವರ್ಷದ ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ಇದರ ಅಂಗವಾಗಿ ಮುಂಜಾನೆ ರಾಯರಿಗೆ ಕ್ಷೀರಾಭಿಷೇಕ, ಕನಕಾಭಿಷೇಕ, ವಿಶೇಷ ಪೂಜೆ ಅಲಂಕಾರ ಹಾಗೂ ನೂರಾರು ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿನಿಯೋಗ ಮಾಡಲಾಯಿತು. ಧಾರ್ಮಿಕ ಕೈಂಕರ್ಯಗಳಲ್ಲಿ ವ್ಯವಸ್ಥಾಪಕ ಕೆ. ಸುಧಾಕರ, ಧರ್ಮಾಧಿಕಾರಿ ರಾಜಾವೇ ವ್ಯಾಸರಾಜಾಚಾರ್ಯ, ಟೀಕಾಚಾರ್ಯ, ವೆಂಕಟೇಶ್ ಜೋಷಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

