ರಂಗಭೂಮಿ ಜೀವಂತ ಕಲೆಗಳ ಸಂಗಮ
ಕ.ಪ್ರ.ವಾರ್ತೆ ಮೈಸೂರು ಏ. 18
ರಂಗಭೂಮಿಯು ಜೀವಂತ ಕಲೆಗಳ ಸಂಗಮ ಎಂದು ಹಿರಿಯ ಸಾಹಿತಿ ಡಾ.ಸಿಪಿಕೆ ಅಭಿಪ್ರಾಯಪಟ್ಟರು.
ಮೈಸೂರು ಆರ್ಟ್ ಗ್ಯಾಲರಿ ಆಯೋಜಿಸಿರುವ ಕದಂಬ ರಂಗ ವೇದಿಕೆಯ ರಂಗಯಾನ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯಲ್ಲಿ ಶುಕ್ರವಾರ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ರಂಗಭೂಮಿ ಹಾಗೂ ಛಾಯಾಚಿತ್ರ ಜೀವಂತ ಕಲೆಗಳ ಸಂಗಮ. ನಮ್ಮಲ್ಲಿ ದಾಖಲಾತಿ ಹಾಗೂ ಸಂಗ್ರಹದ ಕೊರತೆಯಿದೆ. ಆಗಿನ ಕಾಲದ ರಂಗ ಚಟುವಟಿಕೆಗಳ ಕುರಿತಾಗಿ ಛಾಯಾಚಿತ್ರವನ್ನು ಸಂಗ್ರಹಿಸುವ ಮೂಲಕ ಕದಂಬ ವೇದಿಕೆಯು ಉತ್ತಮ ಕಾರ್ಯ ನಡೆಸಿದೆ ಎಂದ ಅವರು, ನಮ್ಮ ನಡುವೆ ಇಲ್ಲದ ಗಣ್ಯರನ್ನು ಇಂತಹ ಪ್ರದರ್ಶನ ಸ್ಮರಿಸಲಿದೆ ಎಂದ ತಿಳಿಸಿದರು.
ರಂಗಯಾನ ಸಂಸ್ಥೆಯ ಮಹತ್ವದ ಮೈಲಿಗಲ್ಲು. ಇದು 50 ವರ್ಷ ಪೂರೈಸಿದೆ ಎನ್ನುವುದಕ್ಕಿಂತ ಅರ್ಧ ಶತಮಾನ ಬಾರಿಸಿದೆ ಎನ್ನುವುದು ಸೂಕ್ತ. ಈ ಛಾಯಾಚಿತ್ರ ಪ್ರದರ್ಶನ ಹೊಸ ಅನುಭವ ನೀಡಲಿದ್ದು, ಹೆಸರಾಂತ ಈ ನಾಟಕ ತಂಡದ ಸಾಧನೆ ಶ್ಲಾಘನೀಯ. ನಾಟಕ ರಂಗದಲ್ಲಿ ಶ್ರಮಿಸುವವರನ್ನು ರಂಗಕರ್ಮಿಗಳು ಎನ್ನುವುದಕ್ಕಿಂತ ರಂಗಧರ್ಮಿಗಳು ಎನ್ನಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಂಗಕರ್ಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ನ. ರತ್ನ, ಐವತ್ತು ವರ್ಷಗಳ ಕಾಲ ರಂಗಸಂಸ್ಥೆ ನಡೆಸುವುದು ಸುಲಭದ ಕೆಲಸವಲ್ಲ. ಒಳ್ಳೆಯ ನಿರ್ದೇಶಕರನ್ನು ಬಳಸಿಕೊಂಡು ಕದಂಬ ವೇದಿಕೆ ವೈವಿಧ್ಯಮಯ ನಾಟಕಗಳನ್ನು ನೀಡಿದೆ. ಇದೊಂದು ಸೃಜನಾತ್ಮಕ ತಂಡ ಎಂದು ತಿಳಿಸಿದರು.
ಕದಂಬ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಇದ್ದರು. ಆರ್ಟ್ ಗ್ಯಾಲರಿಯ ಸಂಸ್ಥಾಪಕ ಎಲ್. ಶಿವಲಿಂಗಪ್ಪ ಪ್ರಾಸ್ತಾವಿಕ ಮಾತುಗಳಾಡಿದರು. ಪ್ರದರ್ಶನದಲ್ಲಿ 100ಕ್ಕೂ ಹೆಚ್ಚಿನ ಛಾಯಾಚಿತ್ರವಿದ್ದು, ಏ.20 ರವರೆಗೆ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ವೀಕ್ಷಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

