ಮೈಸೂರು

ಮಳೆ ಬಂತು; ಬೆಳೆ ಹೋಯ್ತು

Published On :

ಕ.ಪ್ರ.ವಾರ್ತೆ ಹುಣಸೂರು ಏ. 19
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಹನಗೋಡು ಹೋಬಳಿ ಕಾಡಂಚಿನ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಎರಡು- ಮೂರು ಬಾರಿ ಬಿರುಗಾಳಿ ಹಾಗೂ ಸಿಡಿಲಿನ ಹೊಡೆತಕ್ಕೆ 100ಕ್ಕೂ ಹೆಚ್ಚು ಮನೆಗಳು, ವಿದ್ಯುತ್ ಕಂಬ ಮತ್ತು ಮರಗಳು ಧರೆಗುರುಳಿದರೆ, ಜಾನುವಾರುಗಳು ಮೃತಪಟ್ಟು, ಲಕ್ಷಾಂತರ ರು. ಗಳ ಬೆಳೆ ನಾಶವಾಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ತಾಲೂಕಿನ ಹನಗೋಡು ಹೋಬಳಿಯ ದೊಡ್ಡಹೆಜ್ಜೂರು ಗ್ರಾಪಂ ವ್ಯಾಪ್ತಿಯ ಕೊಳವಿಗೆ ಹಾಗೂ ಚಿಕ್ಕಹೆಜ್ಜೂರಿನ ಗಿರಿಜನ ಹಾಡಿಯಲ್ಲಿ ಶುಕ್ರವಾರ ರಾತ್ರಿ ಬಿರುಗಾಳಿ ಹಾಗೂ ಸಿಡಿಲಿನ ಹೊಡೆತಕ್ಕೆ 15 ಮನೆಗಳ ಚಾವಣಿ ಹಾರಿ ಹೋಗಿದೆ. ಕೋಣನ ಹೊಸಳ್ಳಿಯಲ್ಲಿ ನಾಲ್ಕಾರು ವಿದ್ಯುತ್ ಕಂಬಗಳು ಮುರಿದಿವೆ. ಮನೆಯಲ್ಲಿದ್ದ ದವಸ ಧಾನ್ಯಗಳು ಮಳೆ ನೀರಿಗೆ ತೋಯ್ದು ಹೋಗಿವೆ. ತಂಬಾಕು ಸಸಿ ಮಡಿ ಹಾಗೂ ಶುಂಠಿ, ಮಾವು ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ.
ಸ್ಥಳಕ್ಕೆ ಶಾಸಕ ಎಚ್.ಪಿ. ಮಂಜುನಾಥ್ ಭೇಟಿ ನೀಡಿ, ಹಾನಿಗೊಂಡ ಮನೆಗಳನ್ನು ಪರಿಶೀಲಿಸಿ, ನಷ್ಟಕ್ಕೊಳಗಾದ ಮನೆ ಮಾಲೀಕರಿಗೆ ಹಂಚು ಹಾಗೂ ಕಲ್ನಾರ್ ಶೀಟ್‌ಗಳನ್ನು ನೀಡಿದ್ದಲ್ಲದೇ, ಆರ್ಥಿಕವಾಗಿ ಧನಸಹಾಯ ಮಾಡಿದರು.
ಬಳಿಕ ಮಾತನಾಡಿದ ಅವರು, ಅಧಿಕಾರಿಗಳು ಚನಾವಣಾ ಕರ್ತವ್ಯದಲ್ಲಿ ತೋರುವ ನಿಷ್ಠೆ, ದಕ್ಷತೆ, ಪ್ರಾಮಾಣಿಕತೆಯನ್ನು ಸಾರ್ವಜನಿಕ ಕೆಲಸಗಳಲ್ಲು ತೋರಿ, ಸಾರ್ವಜನಿಕ ಸಮಸ್ಯೆಗಳು ಸಕಾಲದಲ್ಲಿ ಪರಿಹರಿಸುವಂತೆ ತಾಕೀತು ಮಾಡಿದರು.ಹನಗೋಡಿನ ಆರ್‌ಐ ವೆಂಕಟಸ್ವಾಮಿ, ಗ್ರಾಮ ಲೆಕ್ಕಿಗ ಶಾಮಣ್ಣ ಮಳೆ ಹಾನಿ ಬಗ್ಗೆ ಮಾಹಿತಿ ಕಲೆ ಹಾಕಿದರು. ತಕ್ಷಣವೇ ಪ್ರಕೃತಿ ವಿಕೋಪ ನಿಧಿ ಯೋಜನೆಯಡಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.  ತಾಪಂ ಸದಸ್ಯೆ ಸುಂದರಮ್ಮ, ದೊಡ್ಡಹೆಜ್ಜೂರು ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ್, ಸದಸ್ಯ ಶಾವರ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಸವರಾಜ್, ಮುಖಂಡರಾದ ಮಹದೇವ, ಶಿವನಂಜಪ್ಪ, ನಾಗರಾಜ್, ಶ್ರೀನಿವಾಸ್ ಇದ್ದರು.

ಗೋ ಹತ್ಯೆ ನಿಷೇಧ ಘೋಷಣೆ ಸ್ವಾಗತಾರ್ಹ
ಮೈಸೂರು: ಗೋ ಹತ್ಯೆ ನಿಷೇಧ ಕುರಿತು ಬಿಜೆಪಿಯು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನು ಕರ್ನಾಟಕ ಗೋ ಶಾಲಾ ಮಹಾಸಂಘ ಸ್ವಾಗತಿಸಿದೆ. ದೇಶದ ಕೃಷಿ ಕಾಯಕಕ್ಕೆ ಹಾಗೂ ಜನರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹೈನುಗಾರಿಕೆಯು ಮಹತ್ವವಾದುದು. ಭಾರತದ ಸಂಸ್ಕೃತಿಯೂ ಆಗಿರುವ ಪ್ರಾಣಿಗಳ ಸಂರಕ್ಷಣೆಗೆ ಮಹತ್ವ ನೀಡಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಇಂತಹ ಘೋಷಣೆ ಮಾಡಿರುವುದು ಹರ್ಷದಾಯಕ ಎಂದು ಸಂಘದ ಅಧ್ಯಕ್ಷ ಡಾ.ಎಸ್. ಕೆ. ಮಿತ್ತಲ್ ತಿಳಿಸಿದ್ದಾರೆ. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೆ ಗ್ರಾಮೀಣ ಭಾಗದ ಮಹಿಳೆಯರ ಸ್ವಾವಲಂಬನೆ ಹಾಗೂ ಯುವಕರ ಉದ್ಯೋಗಕ್ಕೆ ವರದಾನವಾಗಲಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.