ಮರ ಉರುಳಿ ಕೋಳಿ ಫಾರಂ ನೆಲಸಮ
ಕ.ಪ್ರ.ವಾರ್ತೆ ಕೆ.ಆರ್. ನಗರ ಏ. 20
ಶನಿವಾರ ರಾತ್ರಿ ಬಿದ್ದ ಗಾಳಿ ಮಳೆಗೆ ಮಾವಿನ ಮರ ಉರುಳಿ ಬಿದ್ದ ಪರಿಣಾಮ ಕೋಳಿ ಸಂಪೂರ್ಣ ನೆಲಸಮಗೊಂಡಿರುವ ಘಟನೆ ತಾಲೂಕಿನ ಹಂಪಾಪುರ ಗ್ರಾಮದಲ್ಲಿ ನಡೆದಿದೆ.
ಶನಿವಾರ ರಾತ್ರಿ ಗುಡುಗು ಸಹಿತ ಬಿದ್ದ ಮಳೆಗೆ ಗ್ರಾಮದ ಹರೀಶ್ ಅವರ ಕೋಳಿ ಫಾರಂ ನೆಲಸಮಗೊಂಡಿರುವುದರ ಜತೆಗೆ ಫಾರಂನಲ್ಲಿದ್ದ ಸುಮಾರು 300 ಕೋಳಿಗಳು ಸತ್ತಿವೆ. ಇತರೆ ಪರಿಕರಗಳು ಹಾನಿಗೊಳಗಾಗಿವೆ. ಸ್ಥಳಕ್ಕೆ ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ತಾಲೂಕಿನಾದ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಅದರೆ ಬಿರುಗಾಳಿಗೆ ಹಲವಾರು ಗ್ರಾಮಗಳಲ್ಲಿ ಮನೆಗಳ ಚಾವಣಿ ಹಾನಿಗೊಳಗಾಗಿದ್ದು ಗೋಡೆಗಳು ಕುಸಿದುಬಿದ್ದಿವೆ.
ತಾಲೂಕಿನ ತಿಪ್ಪೂರು ಗ್ರಾಮದ ನಾಯಕ ಸಮುದಾಯ ಭವನದ ಗೋಡೆ ಕುಸಿದು ಚಾವಣಿ ಹಾನಿಯಾಗಿರುವುದರ ಜತೆಗೆ ಅಕ್ಕ ಪಕ್ಕದ ಮನೆಗಳಿಗೂ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ರಾಮನವಮಿ: ಓಕುಳಿಯಲ್ಲಿ ಮಿಂದೆದ್ದ ಮಕ್ಕಳು
ಪಿರಿಯಾಪಟ್ಟಣ: ಪಟ್ಟಣದ ಶ್ರೀ ಕೋದಂಡರಾಮ ಸೇವಾ ಮಂಡಳಿ ವತಿಯಿಂದ ಶ್ರೀರಾಮನವಮಿ ಅಂಗವಾಗಿ ಭಾನುವಾರ ಶ್ರೀ ಕೋದಂಡರಾಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿ ಶ್ರೀರಾಮನ ಭಾವಚಿತ್ರದ ಮೆರವಣಿಗೆ ನಡೆಸಿ ಓಕುಳಿ ಆಚರಿಸಲಾಯಿತು.
ಬ್ರಾಹ್ಮಣರ ಬೀದಿಯ ರಸ್ತೆ ಉದ್ದಕ್ಕೂ ಬಣ್ಣ ಬಣ್ಣದ ರಂಗೋಲಿ ಹಾಕುವ ಮೂಲಕ ಮಹಿಳೆಯರು ಶ್ರೀರಾಮನ ಮೆರವಣಿಗೆಗೆ ಸ್ವಾಗತ ಬಯಸುವುದರೊಂದಿಗೆ ಓಕುಳಿಗಾಗಿ ಬಣ್ಣ ಕಲೆಸಿದ ನೀರನ್ನು ಸಿದ್ದಪಡಿಸಿಟ್ಟಿದ್ದರು. ಪ್ರತಿ ಮನೆಯ ಮುಂಭಾಗ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಕ್ಕಳ ಹಾಗೂ ಪುರುಷರ ತಂಡಗಳು ಪರಸ್ಪರ ಮನೆಗಳ ಮುಂದೆ ಇಡಲಾಗಿದ್ದ ಬಣ್ಣದ ನೀರನ್ನು ಎರಚಿಕೊಂಡು ಓಕುಳಿ ಆಡುವ ಮೂಲಕ ಸಂಭ್ರಮಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

