ಯೋಗಭೂಷಣ ಪ್ರಶಸ್ತಿ ಪ್ರದಾನ
ಕ.ಪ್ರ.ವಾರ್ತೆ ಮೈಸೂರು ಏ. 20
ಯೋಗ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ಯೋಗಭೂಷಣ ಪ್ರಶಸ್ತಿ ನೀಡಿ ಭಾನುವಾರ ಗೌರವಿಸಲಾಯಿತು.
ಮಹಾರಾಜ ಸಂಸ್ಕೃತ ಪಾಠ ಶಾಲೆಯ ಸಭಾಂಗಣದಲ್ಲಿ ಹಿಮಾಲಯ ಯೋಗ ಪ್ರತಿಷ್ಠಾನ ಹಾಗೂ ಮೈಸೂರು ಯೋಗ ಶಾಲಾ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಿಎಸ್ಎಸ್ ಯೋಗಿಕ್ ಫೌಂಡೇಷನ್ ಸಂಸ್ಥಾಪಕ ಶ್ರೀಹರಿ ಗುರೂಜಿ ಉದ್ಘಾಟಿಸಿದರು.
ಯೋಗ ಸಾಧಕರಾದ ಎಸ್.ವಿ. ವೆಂಕಟೇಶಯ್ಯ, ಟಿ.ಜಲೇಂದ್ರ ಕುಮಾರ್, ಶೈಲಜಾ ಲೋಕನಾಥ್, ಜಿ. ನಂದಿನಿ, ಸಿ.ರಮೇಶ್ ಹಾಗೂ ಬಾಲಪ್ರತಿಭೆ ಎಸ್. ಪುರುಷೋತ್ತಮ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯೋಗನರಸಿಂಹಸ್ವಾವು ದೇವಸ್ಥಾನದ ಸಂಸ್ಥಾಪಕ ಡಾ.ಭಾಷ್ಯಂ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್ ಸನ್ಮಾನಿತರನ್ನು ಅಭಿನಂದಿಸಿದರು. ವಿವೇಕಾನಂದ ಅಷ್ಟಾಂಗ ಯೋಗ ಸಂಶೋಧನಾ ಕೇಂದ್ರದ ಸಂಸ್ಥಾಪಕ ಡಾ.ಪಿ.ಎನ್. ಗಣೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಯೋಗ ಸಂಘದ ಅಧ್ಯಕ್ಷ ವಿ. ಸೋಮಸುಂದರ್, ಉದ್ಯಮಿ ಟಿ.ಎಸ್. ದೀಪಕ್ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಸಭಿಕರಿಗೆ ಆಯುರ್ವೇದ ತಜ್ಞ ಡಾ.ಎ.ಎಸ್. ಚಂದ್ರಶೇಖರ್ ಯೋಗ ಪ್ರತಿಜ್ಞೆ ಬೋಧಿಸಿದರು.
ಚಮ್ಮಾರನ ಹೆಂಡತಿ ನಾಟಕ ಪ್ರದರ್ಶನ
ಮೈಸೂರು: ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಲೋರ್ಕಾನ ದ ಶೂ ಮೇಕರ್ಸ್ ಪ್ರಾಡಿಜಿಯಸ್ ವೈಫ್ ನಾಟಕ ಆಧಾರಿತ ಚಮ್ಮಾರನ ಹೆಂಡತಿ ಎಂಬ ನಾಟಕ ಅಭಿನಯಿಸಿದರು. ಕನ್ನಡಕ್ಕೆ ಕೆ.ವಿ. ಅಕ್ಷರ ತಂದಿದ್ದು, ಎಚ್.ಕೆ. ದ್ವಾರಕನಾಥ್ ರಂಗವಿನ್ಯಾಸಗೊಳಿಸಿದ್ದಾರೆ. ಗಣೇಶ ಮರಕಾಲ, ಸತೀಶ್ ತಿಪಟೂರು ನಿರ್ದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

