ಮೈಸೂರು

ಶಿಕ್ಷಣದಿಂದ ಸಮಾಜ ಬದಲಾವಣೆ

Published On :

ಪಿರಿಯಾಪಟ್ಟಣ: ಸಮಾಜವನ್ನು ಬದಲಾವಣೆ ಮಾಡುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಪಟ್ಟಣದ ಧರ್ಮಪ್ರವರ್ತಕ ಬೆಂಗಳೂರು ಸುಬ್ಬಣ್ಣನವರ ಸರ್ಕಾರಿ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ವಜ್ರಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಸ್ರಾರು ಕೋಟಿ ಹಣವ್ನು ಶಿಕ್ಷಣ ಕ್ಷೇತ್ರಕ್ಕೆ ಖರ್ಚು ಮಾಡುತ್ತಿವೆ. ಆದರೂ ಸಮಾಜ ಸುಧಾರಣೆಯಾಗುತ್ತಿಲ್ಲ ಎಂದು ವಿಷಾದಿಸಿದರು.
ಶಿಕ್ಷಣ ಕ್ಷೇತ್ರಕ್ಕೆ 21 ಸಾವಿರ ಕೋಟಿ ಹಣ ನೀಡಿದ್ದೇವೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ದೃಷ್ಟಿಯಿಂದ ಈ ಬಜೆಟ್ನಲ್ಲಿ ಹಣ ನೀಡಿದ್ದೇವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಹಿಂದೆ ಒಬ್ಬರ ಕಪಿಮುಷ್ಟಿಯಲ್ಲಿ ವಿದ್ಯಾರ್ಜನೆ ಇತ್ತು. ಬ್ರಿಟಿಷರು ಭಾರತಕ್ಕೆ ಬರದೇ ಹೋಗಿದ್ದರೆ ಸರ್ಕಾರಿ ಶಾಲೆಗಳಾವುವೂ ಇರುತ್ತಿರಲಿಲ್ಲ. ಇವರು ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕೆಂಬ ದೂರದೃಷ್ಟಿ ಇಟ್ಟುಕೊಂಡು ಹಳ್ಳಿ, ಗುಡ್ಡಗಾಡು ಪ್ರದೇಶಗಳಲ್ಲೂ ಶಾಲೆಗಳನ್ನು ತೆರೆದರು ಎಂದು ಸ್ಮರಿಸಿದರು.
ಸಂಸದ ಎಚ್. ವಿಶ್ವನಾಥ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಶಿಕ್ಷಣ ಕ್ಷೇತ್ರಕ್ಕೆ ಇಷ್ಟೆಲ್ಲಾ ಒತ್ತು ಕೊಡುತ್ತಿದ್ದರೂ ಜನ ಶಿಕ್ಷಣದ ಕೊರತೆಯಿಂದ ಹಲವಾರು ಕಾರ್ಯಕ್ರಮಗಳು ಫಲಪ್ರದವಾಗುತ್ತಿಲ್ಲ. ನಾವು ಜನತಂತ್ರ ವ್ಯವಸ್ಥೆಯಲ್ಲಿದ್ದೇವೆ. ಮತದ ಮಹತ್ವ ಸರ್ಕಾರದ, ಜನಪ್ರತಿನಿಧಿಗಳ ಮಹತ್ವ, ಇವುಗಳನ್ನು ಜನತೆಗೆ ಪ್ರಾಮಾಣಿಕವಾಗಿ ತಿಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ವೆಂಕಟೇಶ್ ಮಾತನಾಡಿ, ಪಿರಿಯಾಪಟ್ಟಣ ತಾಲೂಕಿನಲ್ಲಿಯೇ 1952ನೇ ಇಸವಿಯಲ್ಲಿ ಪ್ರಾರಂಭವಾದ ಇದು ಮೊದಲನೇ ಶಾಲೆ. ಅಂದು ಧರ್ಮಪ್ರವರ್ತಕ ಬೆಂಗಳೂರು ಸುಬ್ಬಣ್ಣನವರು 30 ಸಾವಿರ ಖರ್ಚು ಮಾಡಿ ನಿರ್ಮಿಸಿದ್ದರು. ಇಂದು 30 ಕೋಟಿ ಆಗುತ್ತದೆ. ಇಂತಹ ಮಹಾನ್ ಪುರುಷ ದಾನ ಮಾಡಿ ಶಿಕ್ಷಣ ಕ್ಷೇತ್ರದ ಬಗ್ಗೆ ಒತ್ತು ನೀಡಿರುವುದು ತುಂಬಾ ಸಂತೋಷದ ವಿಷಯ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಪಾಲಿಕೆ ಸದಸ್ಯ ಪಿ. ಪ್ರಶಾಂತ್ ಗೌಡ, ಪಪೂ ಇಲಾಖೆಯ ನಿವೃತ್ತ ಸಹಾಯಕ ಜಂಟಿ ನಿರ್ದೇಶಕ ಟಿ.ಸಿ. ವಸಂತರಾಜೇ ಅರಸ್, ಉಪವಿಭಾಗಾಧಿಕಾರಿ ಜಗದೀಶ್, ಜಾನಪದ ವಿದ್ವಾಂಸ ಪಿ.ಕೆ. ರಾಜಶೇಖರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾನ್ಸೂನ್ ಚಂದ್ರು, ಉಪ ಪ್ರಾಂಶುಪಾಲ ನಾಗಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಮೋಹನರಾಜ್, ಗಿರೀಶ್, ಗೊರಳ್ಳಿ ಜಗದೀಶ್, ಸುಬ್ಬಣ್ಣನವರ ಮೊಮ್ಮಗ ಸದಾನಂದ್, ಮುಖಂಡರಾದ ಪಿ.ಟಿ. ರಂಗಸ್ವಾಮಿ, ಷಣ್ಮುಖರಾವ್, ಅಣ್ಣಯ್ಯ, ಡಾ.ಬಿ.ಜೆ. ವಿಜಯಕುಮಾರ್, ಪಿ. ಮಹದೇವ್, ಸಿ.ಎನ್. ವಿಜಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.