ದರೋಡೆ ನಡೆಸಿದವರಿಗೆ ಸಜೆ
ಹುಣಸೂರು: ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ, ಹಣ, ಮೊಬೈಲ್ ದೋಚಿದ್ದ ಇಬ್ಬರು ದರೋಡೆಕೋರ ಆಟೋ ಚಾಲಕರಿಬ್ಬರಿಗೆ ನ್ಯಾಯಾಲಯವು 3 ವರ್ಷ ಕಠಿಣ ಸಜೆ ಹಾಗೂ ತಲಾ ಐದು ಸಾವಿರ ರು. ದಂಡ ವಿಧಿಸಿದೆ.
ಹುಣಸೂರು ಪಟ್ಟಣದ ನಿಜಾಂ ಮೊಹಲ್ಲಾದ ಆಟೋ ಚಾಲಕ ಇನಾಯತ್ ಹಾಗೂ ಮೋಹಿದ್ ಶಿಕ್ಷೆಗೊಳಗಾದವರು. ಮೈಸೂರಿನ ಬಟ್ಟೆ ವ್ಯಾಪಾರಿ ಲಾದೂರಾಂ ದರೋಡೆಗೊಳಗಾಗಿದ್ದವರು. ಕುಶಾಲನಗರದಿಂದ 2008, ಮಾ.17 ರಂದು ಮಧ್ಯರಾತ್ರಿ ಒಂದು ಗಂಟೆ ವೇಳೆಗೆ ಮೈಸೂರಿಗೆ ತೆರಳಲು ಹುಣಸೂರು ನಿಲ್ದಾಣದಲ್ಲಿ ಬಂದಿಳಿದ ಲಾದೂರಾಂನನ್ನು ಕರೆದು ಲಾಡ್ಜ್ ಕೊಡಿಸುವ ನೆಪದಲ್ಲಿ ಆಟೋದಲ್ಲಿ ಶಬ್ಬೀರ್ ನಗರ ರಸ್ತೆಗೆ ಕರೆದೊಯ್ದು ಅವರ ಮೇಲೆ ಹಲ್ಲೆ ನಡೆಸಿ 15 ಸಾವಿರ ನಗದು, ಚಿನ್ನದ ಚೈನ್, ವಾಚ್, ಮೊಬೈಲ್, ಬೆಳ್ಳಿಯ ಕಪ್ಪ ಹಾಗೂ ಪರ್ಸ್ ಅನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ನಡು ರಾತ್ರಿಯೇ ನಡೆದು ಬಂದು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರ ಮೇರೆಗೆ ಅಂದಿನ ವೃತ್ತ ನಿರೀಕ್ಷಕ ಸುಂದರರಾಜ್ ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾ. ಬಿ.ಎಂ. ಶೈಲಾ ಈ ತೀರ್ಪು ನೀಡಿದ್ದಾರೆ.
ಅಜಾಗರೂಕತೆಯಿಂದ ವಾಹನ ಚಲಿಸಿದವನಿಗೆ ಶಿಕ್ಷೆ
ಹುಣಸೂರು: ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಿ ವೃದ್ಧೆಯೊಬ್ಬರ ಸಾವಿಗೆ ಕಾರಣನಾಗಿದ್ದ ಬಸ್ ಚಾಲಕನಿಗೆ ನ್ಯಾಯಾಲಯವು ಒಂದು ವರ್ಷ ಮೂರು ತಿಂಗಳ ಸಾದಾ ಸಜೆ ಹಾಗೂ ಸಾವಿರ ರು. ದಂಡ ವಿಧಿಸಿದೆ. ಮೈಸೂರು ನಗರದ ಕೆಸರೆ ನಿವಾಸಿ ಟೈಲರ್ ಪಾಂಡುರಂಗರಾವ್ ಅವರ ಪತ್ನಿ ಟಿ.ಎಸ್. ಗಾಯಿತ್ರಿದೇವಿ (58) ಬಸ್ಗೆ ಸಿಲುಕಿ ಮೃತಪಟ್ಟಿದ್ದರು. ಮಂಗಳೂರು ವಿಭಾಗದ ಪುತ್ತೂರು ಡಿಪೋ ಬಸ್ ಚಾಲಕ ಕರಿಸಿದ್ದಪ್ಪ ಬಸಪ್ಪಪಲ್ಲೆದು ಶಿಕ್ಷೆಗೊಳಗಾದವರು. ನಿರ್ವಾಹಕ ಟಿ.ಎಂ. ಮಂಜುನಾಥ ಅವರನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ. 2010, ನ.15 ರಂದು ಹುಣಸೂರು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದ ವೇಳೆ ಮೈಸೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಪುತ್ತೂರು ಡಿಪೋ ಬಸ್ನ ಚಾಲಕ ಕರಿಸಿದ್ದಪ್ಪ ಬಸಪ್ಪ ಪಲ್ಲೆದು ಅಜಾಗರೂಕವಾಗಿ ಹಿಮ್ಮುಖವಾಗಿ ಚಾಲನೆ ಮಾಡಿದ ವೇಳೆ ಹಿಂದಿನ ಚಕ್ರಕ್ಕೆ ಸಿಲುಕಿ ಗಾಯಿತ್ರಿದೇವಿ ಮೃತಪಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

