ಮೈಸೂರು

ಹುದ್ದೆಗೆ ಅರ್ಜಿ ಆಹ್ವಾನ

Published On :

ಎಚ್.ಡಿ. ಕೋಟೆ: ತಾಲೂಕಿನ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಒಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಒಂದು ಮಿನಿ ಅಂಗನವಾಡಿ ಕಾರ್ಯಕರ್ತೆಯರ 4 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು 18ರಿಂದ 44 ವಯೋವುತಿಯೊಳಗಿನ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಲು 2014ರ ಮಾ.20 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಅಂಚೆ ಕಚೇರಿ ಹಿಂಭಾಗ, ಮೇಟಿಕುಪ್ಪೆ ರಸ್ತೆ, ಎಚ್.ಡಿ. ಕೋಟೆ ಟೌನ್, ದೂ. 255320ನ್ನು ಸಂಪರ್ಕಿಸಬಹುದು.

ಚರ ಪಟ್ಟಾಧಿಕಾರ ಮಹೋತ್ಸವ
ಎಚ್.ಡಿ. ಕೋಟೆ:
ತಾಲೂಕು ಹಂಚೀಪುರದ ಪಟ್ಟದ ಮಠದ ನೂತನ ಚರ ಪಟ್ಟಾಧಿಕಾರ ಮಹೋತ್ಸವವು ಮಾ. 6, 7ರಂದು ನಡೆಯಲಿದೆ. ಮಾ.6ರಂದು ಶ್ರೀ ಮಠಕ್ಕೆ ಪ್ರವೇಶ, ಗಣಪತಿ ಪೂಜೆ, ಮಾ. 7ರಂದು ಬ್ರಾಹ್ಮಿ ಮುಹೂರ್ತದಲ್ಲಿ ನಂಜನಗೂಡು ತಾಲೂಕು ನವಿಲು ಗ್ರಾಮದ ಶ್ರೀಮತಿ ಲೇಟ್ ಮಹದೇವಮ್ಮ ಮತ್ತು ಗುರುಬಸಪ್ಪನವರ ಸುಪುತ್ರ ಹರೀಶ್ ಎಂಬ ವಟುವಿಗೆ ತೋಂಟದಾರ್ಯ ಮಹಾಸ್ವಾಮೀಜಿ ಎಂದು ನಾಮಕರಣ ಮಾಡಲಾಗುವುದು. ಇದಾದ ಬಳಿಕ ನೂತನ ಮಠಾಧೀಶರ ಮೆರವಣಿಗೆಯನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯಜದಮಾನ ಮಹದೇವಸ್ವಾಮಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಂತರ ಬೆಳಗ್ಗೆ 11ಕ್ಕೆ ಸಭಾ ಕಾರ್ಯಕ್ರಮವನ್ನು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ಚಿಕ್ಕಮಾದು ಉದ್ಘಾಟಿಸುವರು. ಸಂಸದ ಆರ್.ಧ್ರುವನಾರಾಯಣ್, ಮಾಜಿ ಶಾಸಕ ಚಿಕ್ಕಣ್ಣ, ಉದ್ಯಮಿ ಶೇಖರ್ ಮತ್ತಿತರರು ಭಾಗವಹಿಸುವರು ಎಂದರು. ಕಿರಿಯ ಸ್ವಾಮಿಗಳಾದ ತೋಟದಾರ್ಯ, ಗಣಪತಿ, ಪರಶಿವಮೂರ್ತಿ, ಕುಮಾರಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.