ಮೈಸೂರು

ಮ್ಯೂರಲ್ ಪೇಂಟಿಂಗ್ ಸೆಳೆತ

Published On :

ಜೆ. ಮಹದೇವ
ಮೈಸೂರು: 'ದೇವತೆಗಳ ನಾಡು' ಎಂದೇ ಹೆಸರು ಪಡೆದಿರುವ ಕೇರಳ ರಾಜ್ಯದ ಪಾರಂಪರಿಕ ಕಲೆಗಳಲ್ಲಿ ಒಂದಾದ ಮ್ಯೂರಲ್ ಪೇಂಟಿಂಗ್ ಮೈಸೂರಿಗೆ ಬಂದಿದೆ. ಇದನ್ನು ಕಲಿಯಲು ಹಲವು ಮಂದಿ ಮಹಿಳೆಯರು ಉತ್ಸುಕರಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ನಗರದ ಇರ್ವಿನ್ ರಸ್ತೆಯಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ(ವೆಲ್ಲಿಂಗ್ಟನ್ ಹೌಸ್) ಮಾಡು ಮತ್ತು ಕಲಿ ಯೋಜನೆಯಡಿ ಕಲಾವಿದ ಕೆ.ಆರ್. ಬಾಬು ತರಬೇತಿ ನೀಡುತ್ತಿದ್ದಾರೆ. ಇವರೊಂದಿಗೆ ಇಬ್ಬರು ಸಹ ಕಲಾವಿದರು ಪಾಲ್ಗೊಂಡಿದ್ದು, ಈಗಾಗಲೇ 15 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ತರಬೇತಿಯು 10 ದಿನಗಳ ಕಾಲ ಪ್ರತಿದಿನ ಬೆಳಗ್ಗೆ 10.30ರಿಂದ ಮಧ್ಯಾಹ್ನ 2ರವರೆಗೆ ನಡೆಯಲಿದೆ.
ವೆಲ್ಲಿಂಗ್ಟನ್ ಹೌಸ್ನಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಮಾಡು ಮತ್ತು ಕಲಿ ಯೋಜನೆ ಮೂಲ ಉದ್ದೇಶ ಭಾರತದ ವೈವಿಧ್ಯತೆಯನ್ನು ಜನರಿಗೆ ಪರಿಚಯಿಸುವುದಾಗಿದೆ.
ಈವರೆಗೆ ಮಧುಬನಿ, ಕಿನ್ನಾಳ, ಮಣ್ಣಿನಿಂದ ತಯಾರಿಸುವು ಗೊಂಬೆಗಳು, ಈಶಾನ್ಯ ರಾಜ್ಯಗಳ ಪಾರಂಪರಿಕ ಕಲೆಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದೀಗ ಕೇರಳದ ಕಲೆ ಜನರನ್ನು ಆಕರ್ಷಿಸುತ್ತಿದೆ. ಪಾರಂಪರಿಕತೆಗೆ ಹೆಸರುವಾಸಿಯಾಗಿರುವ ಕೇರಳ ಮ್ಯೂರಲ್ ಪೇಂಟಿಂಗ್ನಲ್ಲಿ ಪ್ರಥಮ ಸ್ಥಾನ ಪಡೆದರೆ, ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಅಜಂತಾ ಕಲೆಗೆ ಸರಿಸಾಟಿಯಾದ ಈ ಕಲೆಯಲ್ಲಿ ಬಣ್ಣಗಳ ಮಿಳಿತವೇ ಹೆಚ್ಚಾಗಿರುತ್ತದೆ. ಚಿತ್ರವನ್ನು ನೋಡಿದರೆ ಸ್ಪಷ್ಟವಾಗಿ ಗೋಚರಿಸುವ, ಯಾವುದಾದರೂ ದೇವತೆಯನ್ನು ಚಿತ್ರಿಸಲಾಗುವುದು ಎಂದು ಕಲಾವಿದ ಕೆ.ಆರ್. ಬಾಬು 'ಕನ್ನಡಪ್ರಭ'ಕ್ಕೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.