ಅನುದಾನಕ್ಕೆ ಕ್ರಿಯಾ ಯೋಜನೆ
ನಂಜನಗೂಡು: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಂಜೂರಾಗಿರುವ ರು. 86.41 ಕೋಟಿ ಅನುದಾನ ಕುರಿತಂತೆ ಕ್ರಿಯಾ ಯೋಜನೆ ರೂಪಿಸಲು ಇಲ್ಲಿನ ತಾಪಂ ತನ್ನ ಅನುಮೋದನೆ ನೀಡಿದೆ. ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ತಾಪಂ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನಸ್ವಾಮಿ ಕ್ರಿಯಾಯೋಜನೆಗೆ ಅನುಮತಿ ಕೋರಿ ಸದಸ್ಯರು ತಮ್ಮ ಒಪ್ಪಿಗೆ ನೀಡಿದರು.
ತಾಲೂಕಿನಲ್ಲಿ 73 ಸಾವಿರ, ಪಟ್ಟಣದಲ್ಲಿ 18.5 ಸಾವಿರ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ದಾಖಲಾಗಿದ್ದು, ಜೂ. 5ರ ನಂತರ ಸರ್ಕಾರದ ನಿಯಮಾವಳಿ ಪ್ರಕಾರ ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು. ಆಹಾರ ಇಲಾಖೆಯ ರಾಜೇಂದ್ರ ಪ್ರಸಾದ್ ತಿಳಿಸಿದರು.
ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸಿಟಿಜನ್ ಶಾಲೆಯಲ್ಲಿ ಮನಬಂದಂತೆ ಶುಲ್ಕ ಹಾಗೂ ಕಳಪೆ ಗುಣಮಟ್ಟದ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದಾರೆ. ಆ ಶಾಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಪಂ ಸದಸ್ಯ ಶ್ರೀಕಂಠು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಬಿಇಒ ಪುರುಷೋತ್ತಮ್ ಶಾಲೆಗೆ ನಾಳೆಯೆ ಭೇಟಿ ನೀಡಿ ಪರಿಶೀಲಿಸಿ, ತಪ್ಪು ಕಂಡುಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಾಲೂಕಿನ ಹರದನಹಳ್ಳಿ ಕಾಲೋನಿಯಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಅಲ್ಲಿನ ನೀವಾಸಿಗಳು ಕಾಡು ಜನರಂತೆ ಜೀವನ ನಡೆಸುತ್ತಿದ್ದಾರೆ. ಹಿಂದುಳಿದ ಪ್ರದೇಶದಲ್ಲಿ ಸೆಸ್ಕ್ನವರು ತೋರಿಕೆಗಾಗಿ ಕಂಬ ಹಾಕಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಸದಸ್ಯೆ ಗೀತಾ ಗೋವಿಂದರಾಜು ಆರೋಪಿಸಿದಾಗ ಸೆಸ್ಕ್ ಅಧಿಕಾರಿಗಳು ಕೂಡಲೆ ಸಂಪರ್ಕ ಕೊಡಿಸುವ ಭರವಸೆ ನೀಡಿದರು. ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ 234 ಮಕ್ಕಳಿಗೆ ಅಪೌಷ್ಟಿಕತೆ ಕೊರತೆ ಕಂಡುಬಂದಿದ್ದು, ಅವರಿಗೆ ರಕ್ತದ ಮಾದರಿಯನ್ನು ಪರಿಶೀಲಿಸಿ, ಸಿಎಫ್ಟಿಆರ್ಐ ನಿಂದ ಆಹಾರ ವಿತರಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಜೊತೆ ಚರ್ಚಿಸಿ, ಪ್ರಸ್ತುತ ಅಲ್ಲಿನ ಮಕ್ಕಳಿಗೆ, ಹಾಲು ಮೊಟ್ಟೆ ನೀಡುತ್ತಿದ್ದೇವೆ ಎಂದು ಸೀತಾಲಕ್ಷ್ಮಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

