ತಾಪಂ ಇಒಗೆ ಬೀಳ್ಕೊಡುಗೆ
ಟಿ. ನರಸೀಪುರ: ಗ್ರಾಮೀಣಾಭಿವೃದ್ಧಿಗೆ ದುಡಿಯಲು ಪಂಚಾಯತ್ ರಾಜ್ ಇಲಾಖೆಯಲ್ಲಿ ಉತ್ತಮವಾದ ಅವಕಾಶವಿದೆ ಎಂದು ತಾಪಂ ನಿರ್ಗಮಿತ ಕಾರ್ಯನಿರ್ವಾಹಕ ಅಧಿಕಾರಿ ಜೈಕೃಷ್ಣ ಹೇಳಿದರು. ತಾಪಂ ಸಭಾಂಗಣದಲ್ಲಿ ಬಡ್ತಿ ಪಡೆದು ವರ್ಗಾವಣೆಯಾದ ಹಿನ್ನೆಲೆ ಪಿಡಿಒ ಹಾಗೂ ಕಚೇರಿ ಸಿಬ್ಬಂದಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನೌಕರರು ಮತ್ತು ಅಧಿಕಾರಿಗಳಿಗೆ ಕಾಳಜಿ ಮುಖ್ಯವಾಗಿರಬೇಕು ಎಂದು ತಿಳಿಸಿದರು. ತಾಪಂ ಅಧ್ಯಕ್ಷ ನಟರಾಜು, ನೂತನ ಇಒ ಪುಟ್ಟಸ್ವಾಮಿ, ಎನ್‌ಆರ್‌ಜಿಎ ಸಹಾಯಕ ನಿರ್ದೇಶಕ ಬಾಬು, ಕಚೇರಿ ಅಧೀಕ್ಷಕಿ ಶಾಂತಕುಮಾರಿ, ಫೆಸಿಲಿಟೇಟರ್ ಮೋಹನ್‌ಕುಮಾರಿ, ಸಾಕ್ಷರ ಸಂಯೋಜಕಿ ನಾಗಮ್ಮ, ಪಿಡಿಒಗಳಾದ ಕೃಷ್ಣಪ್ಪ, ಸಿ. ಕೃಷ್ಣ, ಆರ್. ಲಿಂಗರಾಜು, ಕೆ.ಎಂ. ರವೀಂದ್ರ, ನಾಗರಾಜು, ಪ್ರಭುಸ್ವಾಮಿ, ಎಂ. ಬಸವಯ್ಯ, ಲಿಂಗರಾಜು, ಅಮ್ಜದ್‌ಪಾಷ, ರಾಘವೇಂದ್ರ, ಪ್ರಸಾದ್, ಟಿಒಟಿ ನಾಗರಾಜು ಇದ್ದರು.
ಪುರದಕಟ್ಟೆಯಲ್ಲಿ ಗುಲಾಬಿ ಕೃಷಿ ತರಬೇತಿ
ಎಚ್.ಡಿ. ಕೋಟೆ: ತಾಲೂಕಿನ ಹಂಚಿಪುರ ವಲಯದ ಪುರದಕಟ್ಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೃಷಿ ತೋಟಗಾರಿಕಾ ಇಲಾಖಾ ಸಹಯೋಗದೊಂದಿಗೆ ಗುಲಾಬಿ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.
ಗುಲಾಬಿ ಕೃಷಿ ತರಬೇತಿಯ ಬಗ್ಗೆ ಸಹಾಯಕ ತೋಟಗಾರಿಕಾ ನಿರ್ದೇಶಕ ಸಿದ್ದರಾಜು ಮಾತನಾಡಿ, ಮಣ್ಣು ಪರೀಕ್ಷೆ, ಜಮೀನಿನ ಸಿದ್ಧತೆ, ನಾಟಿ ಕಾಲ, ಸಸಿಗಳ ಅಂತರ, ನೀಡಬೇಕಾದ ಗೊಬ್ಬರಗಳು, ನೀರು ನಿರ್ವಹಣೆ ಮತ್ತು ಬರುವಂತಹ ರೋಗಗಳು ಹಾಗೂ ರೋಗ ಬಂದಾಗ ನೀಡಬೇಕಾದ ಔಷಧಗಳ ಬಗ್ಗೆ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಪದ್ಮಾ ಬಸವರಾಜು, ಕೃಷಿ ಅಧಿಕಾರಿಗಳಾದ ಲಿಂಗರೆಡ್ಡಿ, ಮೇಲ್ವಿಚಾರಕ ಪುನಿತ್‌ಕುಮಾರ್ ಮತ್ತು ಸೇವಾಪ್ರತಿನಿಧಿಗಳಾದ ವಸಂತ ಪಾಟೀಲ್ ಮತ್ತು ಪುರದಕಟ್ಟೆ ಗ್ರಾಮದ ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

