ದೇಶ

ಯೋಗಗುರುಗೆ ಬಿಜೆಪಿ ಬೆಂಬಲ

ಯೋಗಗುರುಗೆ ಬಿಜೆಪಿ ಬೆಂಬಲ
Published On :

ಲಖನೌ:ದಲಿತರ ಕುರಿತ ಹೇಳಿಕೆಗೆ ಸಂಬಂಧಿಸಿ ಟೀಕೆಗೆ ಗುರಿಯಾಗಿರುವ ಯೋಗಗುರು ಬಾಬಾ ರಾಮದೇವ್ ಬೆಂಬಲಕ್ಕೀಗ ಬಿಜೆಪಿ ನಿಂತಿದೆ.
ರಾಮದೇವ್ ಅವರೊಬ್ಬ ಸಂತ. ಹಾಗಾಗಿ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಅದನ್ನು ಯಾವ ಆಧಾರದ ಮೇಲೆ ಹೇಳಿದ್ದಾರೆ ಎನ್ನುವುದನ್ನು ನೋಡಬೇಕೇ ಹೊರತು ಕಾಂಗ್ರೆಸ್ ಮುಖಂಡರ ಗ್ರಹಿಕೆಗೆ ಅನುಗುಣವಾಗಿ ಅಲ್ಲ ಎಂದಿದೆ ಬಿಜೆಪಿ.
ಒಬ್ಬ ಸಂತನಾಗಿರುವ ರಾಮದೇವ್ 'ಹನಿಮೂನ್‌' ಅನ್ನುವ ಪದವನ್ನು ಇಂಗ್ಲಿಷ್ ಶಬ್ದಕೋಶದಲ್ಲಿದ್ದಂತೆ ಬಳಸಿದ್ದಾರೆ ಎಂದು ಪಕ್ಷದ ವಕ್ತಾರ ಶಹನವಾಜ್ ಹುಸೇನ್ ಹೇಳಿದ್ದಾರೆ.
ಮತ್ತೊಬ್ಬ ಬಿಜೆಪಿ ಮುಖಂಡ ಉದಿತ್ ರಾಜ್ ಕೂಡ ಯೋಗಗುರು ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ದಲಿತರ ಕುರಿತು ಅವರೇನೂ ತಪ್ಪಾಗಿ ಮಾತನಾಡಿಲ್ಲ. 'ಹನಿಮೂನ್‌' ಅನ್ನುವ ಪದವನ್ನು ನಾನಾ ಅರ್ಥದಲ್ಲಿ ಬಳಸಲಾಗುತ್ತದೆ. ಪಕ್ಷಗಳ ಹನಿಮೂನ್ ಅನ್ನಲಾಗುತ್ತದೆ. ಅರವಿಂದ ಕೇಜ್ರಿವಾಲ್ ಅವರ ಹನಿಮೂನ್ ಅಂತ್ಯವಾಯಿತು ಎಂದೂ ಹೇಳಲಾಗುತ್ತದೆ. ಹಾಗಾಗಿ ರಾಮದೇವ್ ಹೇಳಿಕೆಯಲ್ಲೂ ತಪ್ಪು ಅರ್ಥ್ಡ್ಜಹುಡುಕಬಾರದು ಎಂದಿದ್ದಾರೆ ಅವರು.
ರಾಮದೇವ್ ಹೇಳಿದ್ದೇನು?: ರಾಹುಲ್ ಗಾಂಧಿ ಅವರ ಹಣೆಬರಹವೇ ನೆಟ್ಟಗಿಲ್ಲ. ವಿದೇಶಿಯಳನ್ನು ಮದುವೆಯಾದರೆ ನೀನು ಪ್ರಧಾನಿಯಾಗಲ್ಲ ಎನ್ನುತ್ತಾರೆ ತಾಯಿ. ಭಾರತೀಯಳನ್ನು ಮದುವೆಯಾಗಲು ರಾಹುಲ್‌ಗೆ ಇಷ್ಟ ಇಲ್ಲ. ಅವರು ದಲಿತರ ಮನೆಗೆ ಹೋಗಿ ಹನಿಮೂನ್ ಮತ್ತು ಪಿಕ್‌ನಿಕ್ ಮಾಡಿಕೊಂಡು ಬರುತ್ತಾರೆ. ಒಂದು ವೇಳೆ ದಲಿತ ಯುವತಿಯೊಬ್ಬಳನ್ನು ಮದುವೆಯಾಗಿದ್ದರೆ ಅವರ ಹಣೆಬರಹ ನೆಟ್ಟಗಾಗಬಹುದೇನೋ? ಎಂದು ಯೋಗಗುರು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.